ಕಾಂಗ್ರೆಸ್ ಪಕ್ಷದಲ್ಲಿ ಗೊತ್ತಿಲ್ಲದೇ ಸಜ್ಜಾಗುತ್ತಿದೆ 'ಸುಸೈಡ್ ಸ್ಕ್ವಾಡ್' !

ಈಗ ಕಾಂಗ್ರೆಸ್ ಪಕ್ಷ  ಬಿಜೆಪಿಯ ತಂತ್ರಕ್ಕೆ ಪ್ರತಿತಂತ್ರ ಹೂಡುತ್ತಿದೆ. ಈಗ ಈ ತಂತ್ರಕ್ಕೆ ವಿಚಿತ್ರವಾದ ಹೆಸರನ್ನು ನಾಮಕಾರಣ ಮಾಡಿದೆ,ಅದೇನಪ್ಪಾ ಅಂದರೆ ಸೂಸೈಡ್ ಸ್ಕ್ವಾಡ್.

Updated: Sep 12, 2018 , 02:58 PM IST
ಕಾಂಗ್ರೆಸ್ ಪಕ್ಷದಲ್ಲಿ ಗೊತ್ತಿಲ್ಲದೇ ಸಜ್ಜಾಗುತ್ತಿದೆ 'ಸುಸೈಡ್ ಸ್ಕ್ವಾಡ್' !
file photo

ಬೆಂಗಳೂರು: ಈಗ ಕಾಂಗ್ರೆಸ್ ಪಕ್ಷ  ಬಿಜೆಪಿಯ ತಂತ್ರಕ್ಕೆ ಪ್ರತಿತಂತ್ರ ಹೂಡುತ್ತಿದೆ. ಈಗ ಈ ತಂತ್ರಕ್ಕೆ ವಿಚಿತ್ರವಾದ ಹೆಸರನ್ನು ನಾಮಕಾರಣ ಮಾಡಿದೆ,ಅದೇನಪ್ಪಾ ಅಂದರೆ ಸೂಸೈಡ್ ಸ್ಕ್ವಾಡ್.

ಹೌದು, ಈ ಹೆಸರು ನಿಮಗೆ ಅಚ್ಚರಿ ಮೂಡಿಸಬಹುದು.ಹಾಗಂತ ಈ ಸ್ಕ್ವಾಡ್ ಯಾವುದೋ ಸೈನ್ಯವಿರಬಹುದೋ ಎಂದು ತಿಳಿದುಕೊಳ್ಳಬೇಡಿ.ಈಗ ಈ ಹೆಸರನ್ನು ಬಿಜೆಪಿ ಹೆಣೆದಿರುವ ಆಪರೇಷನ್ ಕಾರ್ಯಕ್ಕೆ ಪ್ರತಿತಂತ್ರವಾಗಿ ಕಾಂಗ್ರೆಸ್ ಈ ಹೆಸರನ್ನಿಟ್ಟಿದೆ.

ಏನಿದು ಸುಸೈಡ್ ಸ್ಕ್ವಾಡ್ ?

ಈಗ ಪುನಃ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಲು ಮುಂದಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷವೇನು ಇದನ್ನು ಸುಮ್ಮನೆ ನೋಡಿಕೊಂಡು ಕುಳಿತಿಲ್ಲ, ಬದಲಾಗಿ ಅದು ಕೂಡ ಪ್ರತಿ ಕಾರ್ಯಾಚರಣೆಗೆ ಮುಂದಾಗಿದೆ. ಹಾಗಾದರೆ ಆ ಕಾರ್ಯಾಚರಣೆ ಯಾವುದೆಂದರೆ ಸುಸೈಡ್ ಸ್ಕ್ವಾಡ್ (ಆತ್ಮಹತ್ಯಾದಳ). ಈ ಕಾರ್ಯಾಚರಣೆಯ ವಿಧಾನವೆಂದರೆ ಪಕ್ಷದ ಹಿರಿಯ ಸಚಿವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ಆಪರೇಷನ್ ಹಸ್ತದ ಮೂಲಕ ಆಹ್ವಾನಿಸಿದ ಶಾಸಕರಿಗೆ ಸಚಿವ ಸ್ಥಾನವನ್ನು ಬಿಟ್ಟು ಕೂಡುವುದು ಈ ಕಾರ್ಯಾಚರಣೆಯ ಒಟ್ಟು ಉದ್ದೇಶವಾಗಿದೆ. ಆದ್ದರಿಂದ ಪಕ್ಷದಲ್ಲಿರುವ ಕೆಲವು ಹಿರಿಯ ಕಾಂಗ್ರೆಸಿಗರಿಗೆ ಸಾಧ್ಯವಾದಲ್ಲಿ ಸಚಿವಸ್ಥಾನದ ಹುದ್ದೆಯನ್ನು ತ್ಯಜಿಸಲು ಮುಂದಾಗಿ ಎಂದು ಹೈಕಮಾಂಡ್ ಸಂದೇಶ ರವಾನಿಸಿದೆ.

ಆ ಮೂಲಕ ಈಗ ಕಾಂಗ್ರೆಸ್ ಪಕ್ಷವು ಮೈತ್ರಿ ಸರ್ಕಾರವನ್ನು ಉಳಿಸುವ ಹರ ಸಾಹಸಕ್ಕೆ  ಮುಂದಾಗಿದೆ ಎಂದು ತಿಳಿದುಬಂದಿದೆ.ಈ ಸ್ಕ್ವಾಡ್ ರಚನೆಗೆ ಈಗಾಗಲೇ ಹೈಕಮಾಂಡ್  ರಾಜ್ಯದ ನಾಯಕರಿಗೆ ತಿಳಿಸಿದೆ ಎನ್ನಲಾಗಿದೆ.