ಕಾಂಗ್ರೆಸ್ ಟಿಕೆಟ್: ಹಾಲಿ v/s ಮಾಜಿ ಗೃಹ ಸಚಿವರ ನಡುವೆ ಟಿಕೆಟ್ ಫೈಟ್

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ರಾಮಲಿಂಗಾರೆಡ್ಡಿ ನಡುವೆ ಭಿನ್ನಾಭಿಪ್ರಾಯ ಸ್ಪೋಟ. 

Last Updated : Mar 29, 2018, 10:13 AM IST
ಕಾಂಗ್ರೆಸ್ ಟಿಕೆಟ್: ಹಾಲಿ v/s ಮಾಜಿ ಗೃಹ ಸಚಿವರ ನಡುವೆ ಟಿಕೆಟ್ ಫೈಟ್ title=

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಇದೀಗ, ಟಿಕೆಟ್‌ಗಾಗಿ ಲಾಬಿ ಶುರುವಾಗಿದೆ. ಅದರಲ್ಲೂ ಪ್ರಭಾವಿ ನಾಯಕರು ತಮ್ಮ ಮಕ್ಕಳಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಸಿ ರಾಜಕೀಯವಾಗಿ ಸ್ಥಾನ ಗಟ್ಟಿ ಮಾಡಲು ಶತ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ವಿಷಯವಾಗಿ ಮಾಜಿ ಗೃಹ ಸಚಿವ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಮತ್ತು ಹಾಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ನಡುವೆ ಭಿನ್ನಾಭಿಪ್ರಾಯ ಸ್ಪೋಟಗೊಂಡಿದೆ.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ತಯಾರಿಸಲು ಮಾರ್ಚ್ 28(ಬುಧವಾರ) ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಜಯನಗರ ಟಿಕೆಟ್ ಫೈನಲ್ ವಿಚಾರವಾಗಿ ಹಾಲಿ ಗೃಹ ಸಚಿವ ಮತ್ತು ಮಾಜಿ ಗೃಹ ಸಚಿವರ ನಡುವೆ ನಡೀತು ಟಿಕೆಟ್ ವಾರ್ ನಡೆದಿದೆ. ಮಗಳು ಸೌಮ್ಯ ರೆಡ್ಡಿಗೆ ಟಿಕೆಟ್ ನೀಡಲು ರಾಮಲಿಂಗಾರೆಡ್ಡಿ ಮನವಿ ಮಾಡಿದ ಸಂದರ್ಭದಲ್ಲಿ, ಎಲ್ಲ ಟಿಕೆಟ್ ಗಳನ್ನ ಅಪ್ಪ ಮಕ್ಕಳಿಗೆ ನೀಡಿದ್ರೆ ಹೇಗೆ ಎಂದು ಗರಂ ಆದ ಪರಂ, ಜಯನಗರದಲ್ಲಿ ಎಂ.ಸಿ. ವೇಣುಗೋಪಾಲ್ ಗೆ ಟಿಕೆಟ್ ನೀಡಬೇಕೆಂದು ಸೂಚಿಸಿದ್ದಾರೆ.

ಈ ಸಮಯದಲ್ಲಿ ಕೆಂಡಾಮಂಡಲರಾದ ಸಚಿವ ರಾಮಲಿಂಗಾರೆಡ್ಡಿ, ಅಪ್ಪ ಮಕ್ಕಳಿಗೆ ಟಿಕೆಟ್ ನೀಡುವ ವಿಚಾರ ಹೊಸತೇನಲ್ಲ. ಸೌಮ್ಯ ರೆಡ್ಡಿ ನನ್ನ ಮಗಳು ಅಂತಾ ಕೊಡಬೇಡಿ, ಗೆಲ್ಲುವ ಅರ್ಹತೆ ಇದ್ದವರಿಗೆ ಟಿಕೆಟ್ ಕೊಡಿ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮಧ್ಯ ಪ್ರವೇಶಿಸಿ ಇಬ್ಬರೂ ನಾಯಕರನ್ನು ಸಮಾಧಾನ ಪಡಿಸಿ ತಣ್ಣಗಾಗಿಸಿದ್ದಾರೆ.

ಸಭೆಯಿಂದ ರಾಮಲಿಂಗಾರೆಡ್ಡಿ ಹೊರಹೋದ ಬಳಿಕ ಸೌಮ್ಯ ರೆಡ್ಡಿಗೆ ಬೇರೆ ಕ್ಷೇತ್ರ ಕೊಡಿಸೋಣ ನಾನು ರಾಮಲಿಂಗಾರೆಡ್ಡಿ ಜೊತೆ ಮಾತಾಡುತ್ತೇನೆ ಬಿಡಿ ಎಂದು ಪರಮೇಶ್ವರ್ ಗೆ ಸಿಎಂ ಸಮಾಧಾನ ಪಡಿಸಿದ್ದಾರೆ.

Trending News