ಧಾರವಾಡ:  ಧಾರವಾಡದ ಬನಶಂಕರಿ ಲೇಔಟನ ಚಂದ್ರಶೇಖರ ಮಾವಿನತೋಪ ಅನ್ನುವವರು ಎದುರುದಾರರಾದ ಧಾರವಾಡದ ಸುಬಾಸ ರಸ್ತೆಯ ಕೆನರಾ ಬ್ಯಾಂಕ್‍ನಲ್ಲಿ ತಮ್ಮ ಪಾಲುದಾರಿಕಾ ಸಂಸ್ಥೆಯ ಹೆಸರಿನಲ್ಲಿ ಕರೆಂಟ್ ಅಕೌಂಟ ಹೊಂದಿದ್ದರು.


COMMERCIAL BREAK
SCROLL TO CONTINUE READING

ಮಾರ್ಚ 2018ರಲ್ಲಿ ದೂರುದಾರ ತಮ್ಮ ಪಾಲುದಾರಿಕಾ ಸಂಸ್ಥೆ ವಿಸರ್ಜನೆಯಾಗಿದೆ ಅಂತಾ ಹೇಳಿಕೊಂಡಿದ್ದರು. ಸದರಿ ಕರೆಂಟ್ ಬ್ಯಾಂಕ್ ಖಾತೆ ಉಪಯೋಗಿಸದ್ದರಿಂದ ಹಾಗೂ ಆ ಖಾತೆಯಲ್ಲಿ ಯಾವುದೇ ಹಣ ಇಲ್ಲದ್ದರಿಂದ ಅಕ್ಟೋಬರ್-2017ರಲ್ಲಿ ಬ್ಯಾಂಕಿನವರು ಆ ಖಾತೆಯನ್ನು ಸ್ಥಗಿತಗೊಳಿಸಿದ್ದರು. ಆ ಸಂಗತಿ ಪಾಲುದಾರನಾದ ಫಿರ್ಯಾದಿದಾರನಿಗೆ ಗೊತ್ತಿದ್ದರೂ ಎದುರುದಾರ ಕೆನರಾ ಬ್ಯಾಂಕಿನವರು ತನ್ನ ಕರೆಂಟ್ ಖಾತೆಯನ್ನು ಉಪಯೋಗಿಸಲು ಅನುಮತಿಸುತ್ತಿಲ್ಲವಾದ್ದರಿಂದ ತನಗೆ ತೊಂದರೆಯಾಗಿದೆ ಮತ್ತು ಎದುರುದಾರ ಬ್ಯಾಂಕಿನವರು ತನಗೆ ಸೇವಾ ನ್ಯೂನ್ಯತೆ ಎಸಿಗದ್ದಾರೆಂದು ಹೇಳಿ ಅವರ ವಿರುದ್ಧ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ದಿ:12/07/2023ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.


ಇದನ್ನೂ ಓದಿ: ತುಳಸಿ ಪಕ್ಕದಲ್ಲಿ ಈ ವಸ್ತುಗಳನ್ನು ಎಂದಿಗೂ ಇಡಬೇಡಿ ! ಹೊಕ್ಕಿ ಬಿಡುವುದು ದರಿದ್ರ ! ಕುಬೇರನ ಖಜಾನೆ ಕೂಡಾ ಬರಿದಾಗುವುದು


ಎದುರುದಾರ ಕೆನರಾ ಬ್ಯಾಂಕಿನವರು ತಮ್ಮ ವಕೀಲರ ಮೂಲಕ ಹಾಜರಾಗಿ ಆಕ್ಷೇಪಣೆ ಸಲ್ಲಿಸಿದ್ದರು. ದೂರುದಾರರು ವೈಯಕ್ತಿಕವಾಗಿ ಖಾತೆಯನ್ನು ಹೊಂದಿರಲಿಲ್ಲ. ಅದು ಪಾಲುದಾರಿಕೆ ಸಂಸ್ಥೆಯ ಕರೆಂಟ್ ಅಕೌಂಟ ಆಗಿತ್ತು, ಸದರಿ ಖಾತೆ ಕರೆಂಟ್ ಅಕೌಂಟ್ ಆಗಿದ್ದರಿಂದ ಬ್ಯಾಂಕ್ ನಿಗದಿತ ಶುಲ್ಕವನ್ನು ವಿಧಿಸುತ್ತಿತ್ತು. ದೂರುದಾರರು ತಮ್ಮ ಪಾಲುದಾರಿಕೆಯನ್ನು ಸ್ಥಗಿತಗೊಳಿಸಿದ್ದರಿಂದ ಹಾಗೂ ಬ್ಯಾಂಕ್ ಖಾತೆಯಲ್ಲಿ ಯಾವುದೇ ವ್ಯವಹಾರ ನಡೆಯದೆ ಇದ್ದಕಾರಣ ಅವರ ಬ್ಯಾಂಕ್ ಖಾತೆ ಮುಕ್ತಾಯಗೊಂಡಿದೆ. ಕಾರಣ ತಮ್ಮಿಂದ ಯಾವುದೇ ರೀತಿಯ ಸೇವಾ ನ್ಯೂನ್ಯತೆ ಆಗಿಲ್ಲ ಮತ್ತು ತಮಗೆ ದೂರುದಾರ ಗ್ರಾಹಕ ಆಗುವುದಿಲ್ಲ ಅಂತಾ ಹೇಳಿ ತಮ್ಮ ಖರ್ಚು ಸಮೇತ ದೂರನ್ನು ವಜಾಗೊಳಿಸಬೇಕೆಂದು ಆಯೋಗದ ಮುಂದೆ ಆಕ್ಷೇಪಿಸಿದ್ದರು.


ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಬೋಳಶೆಟ್ಟಿ ಮತ್ತು ಪ್ರಭು. ಹಿರೇಮಠ ಸದಸ್ಯರು, ದೂರುದಾರರು ತಮ್ಮ ಪ್ರಕರಣ ಸಾಬೀತು ಪಡಿಸಲು ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಿದಾಗದೂರುದಾರರು ಹುಟ್ಟುಹಾಕಿದ ವಜ್ರಾ ಸ್ಟೀಲ್ಸ್‍ಗೆ ಪಾಲುದಾರಿಕಾ ಸಂಸ್ಥೆಯಿದೆ. ಮಾರ್ಚ-2018ರಲ್ಲಿ ಆ ಸಂಸ್ಥೆಯನ್ನು ವಿಸರ್ಜನೆಗೊಳಿಸಿರುವುದಾಗಿ ದೂರುದಾರ ಹೇಳುತ್ತಾರೆ. ಅವರ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಅಕ್ಟೋಬರ್-2017ರ ನಂತರ ಆ ಖಾತೆಯಲ್ಲಿ ಯಾವುದೇ ಹಣ ಇಟ್ಟಿಲ್ಲ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


ಆ ನಂತರ ಅವರು ಯಾವುದೇ ವ್ಯವಹಾರ ಮಾಡಿಲ್ಲ. ಬ್ಯಾಂಕ್ ನಿಯಮದಂತೆ ಅಂತಹ ಜೀರೋ ಬ್ಯಾಲನ್ಸ್ ಖಾತೆಗಳು ತಾವಾಗಿಯೇ ಸ್ಥಗಿತವಾಗುತ್ತವೆ. ಅದರಂತೆ ಅಕ್ಟೋಬರ್-2017ರ ನಂತರ ಅವರ ಪಾಲುದಾರಿಕಾ ಸಂಸ್ಥೆಯ ಖಾತೆ ಸ್ಥಗಿತಗೊಂಡಿರುವುದರಿಂದ ಮತ್ತು ಆ ವಿಷಯ ಪಾಲುದಾರನಾದ ದೂರುದಾರನ ಗಮನದಲ್ಲಿದೆ. ಆದ್ದರಿಂದ ತಮ್ಮ ಬ್ಯಾಂಕ್ ಹಾಗೂ ದೂರುದಾರರ ಮಧ್ಯೆ ಗ್ರಾಹಕ ಮತ್ತು ಸೇವಾ ಒದಗಿಸುವವರ ಸಂಬಂಧ ಇರುವುದಿಲ್ಲ.ಹಾಗಾಗಿ ಎದುರುದಾರರ ಕೆನರಾ ಬ್ಯಾಂಕಿನವರಿಂದ ದೂರುದಾರರಿಗೆ ಯಾವುದೇ ರೀತಿ ಸೇವಾ ನ್ಯೂನ್ಯತೆ ಆಗಿದೆ ಅನ್ನುವುದನ್ನು ದೂರುದಾರರು ಸಿದ್ಧಪಡಿಸಲು ವಿಫಲರಾಗಿದ್ದಾರೆ. ಹೀಗಿದ್ದರೂ ರಾಷ್ಟ್ರೀಕೃತ ಬ್ಯಾಂಕಾದ ಎದುರುದಾರ ಕೆನರಾ ಬ್ಯಾಂಕಿನವರ ಮೇಲೆ ದೂರುದಾರ ಸುಳ್ಳು ಪ್ರಕರಣ ಹಾಕಿದ್ದಾನೆ ಅನ್ನುವುದು ರುಜುವಾತು ಆಗಿರುವುದದಿರಂದ ಈ ಪ್ರಕರಣ ನಡೆಸಲು ದೂರುದಾರರು ಮಾಡಿರಬಹುದಾದ ಖರ್ಚು ವೆಚ್ಚಕ್ಕಾಗಿ ರೂ.50,000/- ದಂಡದ ರೂಪದಲ್ಲಿ ಕೆನರಾ ಬ್ಯಾಂಕಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಖರ್ಚು ಕೊಡುವಂತೆ ನಿರ್ದೇಶಿಸಿ ದೂರುದಾರರ ಫಿರ್ಯಾದನ್ನು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ವಜಾಗೊಳಿಸಿದೆ. ಒಂದು ತಿಂಗಳ ಒಳಗಾಗಿ ರೂ.50,000/- ದಂಡದ ಹಣ ದೂರುದಾರ ಎದುರುದಾರ ಬ್ಯಾಂಕಿಗೆ ಕೊಡದಿದ್ದಲ್ಲಿ ಸದರಿ ಬ್ಯಾಂಕಿನವರು ಇದೆ ಆದೇಶದ ಮೇಲೆ ಅವರಿಂದ ಮೇಲೆ ಹೇಳಿದ ಹಣ ವಸೂಲಿ ಮಾಡಬಹುದಾಗಿದೆಯೆಂದು ಆದೇಶಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ


 


***