ಸಾಫ್ಟವೇರ್ ಇಂಜಿನೀಯರಗೆ ನ್ಯಾಯ ದೊರೆಕಿಸಿದ ಗ್ರಾಹಕರ ಆಯೋಗ
ಕುಂದಗೋಳ ತಾಲೂಕಿನ ಇಂಗಳಿಗಿ ಗ್ರಾಮದ ಶರಣಕುಮಾರ ಹರವಿ ಅನ್ನುವ ಅವಿವಾಹಿತ ಸಾಫ್ಟವೇರ್ ಇಂಜಿನೀಯರ ದೈನಂದಿನ ತನ್ನ ಉಪಯೋಗಕ್ಕಾಗಿ ಬೆಂಗಳೂರ ರಾಮನಗರದ ಸ್ಟೋ ಕ್ರಾಫ್ಟ ಸಂಸ್ಥೆಯಿಂದ ಆನ್‍ಲೈನ್ ಮುಖಾಂತರ ರೂ.1,599/- ಕೊಟ್ಟು ಪಿಜನ್ ಫೇವರೆಟ್ ಇಂಡಕ್ಷನ್ ಕುಕ್ ಟಾಪ್ ಖರೀದಿಸಿದ್ದರು.
ಧಾರವಾಡ: ಕುಂದಗೋಳ ತಾಲೂಕಿನ ಇಂಗಳಿಗಿ ಗ್ರಾಮದ ಶರಣಕುಮಾರ ಹರವಿ ಅನ್ನುವ ಅವಿವಾಹಿತ ಸಾಫ್ಟವೇರ್ ಇಂಜಿನೀಯರ ದೈನಂದಿನ ತನ್ನ ಉಪಯೋಗಕ್ಕಾಗಿ ಬೆಂಗಳೂರ ರಾಮನಗರದ ಸ್ಟೋ ಕ್ರಾಫ್ಟ ಸಂಸ್ಥೆಯಿಂದ ಆನ್‍ಲೈನ್ ಮುಖಾಂತರ ರೂ.1,599/- ಕೊಟ್ಟು ಪಿಜನ್ ಫೇವರೆಟ್ ಇಂಡಕ್ಷನ್ ಕುಕ್ ಟಾಪ್ ಖರೀದಿಸಿದ್ದರು.
ಅದು ಒಂದು ವರ್ಷ ವಾರಂಟಿ ಹೊಂದಿತ್ತು. ಖರೀದಿಸಿದ ಕೆಲವೇ ತಿಂಗಳುಗಳಲ್ಲಿ ಅದರಲ್ಲಿ ನ್ಯೂನ್ಯತೆಗಳು ಕಂಡುಬಂದು ಅದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಎದುರುದಾರರಿಗೆ ಫೋನ್ ಹಾಗೂ ಮೇಲ್ ಮುಖಾಂತರ ಹಲವು ಬಾರಿ ದೂರುಗಳನ್ನು ಕೊಟ್ಟಿರೂ ಅದರ ದುರಸ್ತಿಗೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಎದುರುದಾರರು ಕುಕ್ ಟಾಪ್‍ನ್ನು ರಿಪೇರಿ ಮಾಡಿಕೊಟ್ಟಿರಲಿಲ್ಲ. ಇದರಿಂದ ಬೇಸತ್ತ ದೂರುದಾರ ಶ್ರೀ.ಶರಣಕುಮಾರ ಹರವಿ ಎದುರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ದಿ:20/06/2024 ರಂದು ಅವರ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ : Home Remedies: ಮಧುಮೇಹ ನಿಯಂತ್ರಣಕ್ಕೆ ಬೇವಿನ ಸೊಪ್ಪಿನ ರಸದ ಜೊತೆ ಈ ಪದಾರ್ಥ ಬಳಸಿ, ಆಗ ಈ ಚಮತ್ಕಾರ ನೋಡಿ..!
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಬೋಳಶೆಟ್ಟಿ ಮತ್ತು ಪ್ರಭು. ಹಿರೇಮಠ ಸದಸ್ಯರು, ದೂರುದಾರರು ಆನ್‍ಲೈನ್ ಮೂಲಕ ಇಂಡಕ್ಷನ್ ಕುಕ್ ಟಾಪ್ ಖರೀದಿಸಿರುವುದು ಅವರು ಹಾಜರುಪಡಿಸಿದಂತಹ ರಶೀದಿಯಿಂದ ಕಂಡುಬರುತ್ತದೆ. ಖರೀದಿಸಿದ ಒಂದೇರಡು ತಿಂಗಳಲ್ಲೆಯೆ ಕುಕ್ ಟಾಪ್‍ನಲ್ಲಿ ದೋಷ ಕಂಡುಬಂದಿದೆ. ಅದರ ರಿಪೇರಿಗಾಗಿ ಸಾಕಷ್ಟು ಸಲ ಎದುರುದಾರರಿಗೆ ಫೋನ್, ಇ-ಮೇಲ್ ಮುಖಾಂತರ ವಿನಂತಿಸಿದರೂ ಎದುರುದಾರರು ಆ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಎದುರುದಾರ ಸ್ಟೋವ್ ಕ್ರಾಫ್ಟ್‍ರವರ ಅಂತಹ ನಡಾವಳಿಕೆ ಗ್ರಾಹಕ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್ ಕಿಡಿ
ದೂರುದಾರರಿಗೆ ಎದುರುದಾರರು ಇಂಡಕ್ಷನ್ ಕುಕ್ ಟಾಪ್‍ನ ಮೊತ್ತ ರೂ.1,599/- ಮತ್ತು ಅದರ ಮೇಲೆ ವಾರ್ಷಿಕ 10% ರಂತೆ ಬಡ್ಡಿ ಲೆಕ್ಕ ಹಾಕಿ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ನೀಡುವಂತೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ತೊಂದರೆಗಾಗಿ ರೂ.30,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚುವೆಚ್ಚ ರೂ.5,000/- ನಿಡುವಂತೆ ಎದುರುದಾರರಾದ ಸ್ಟೋ-ಕ್ರಾಫ್ಟ್ ಲಿಮಿಟೆಡ್‍ಗೆ ಆಯೋಗ ನಿರ್ದೇಶಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.