ಎಲ್ಲೆಡೆ ಕರೋನಾ ಹಾವಳಿ: ಕರ್ನಾಟಕದಲ್ಲಿ ಮತ್ತೆರಡು ಕರೋನಾ ಪ್ರಕರಣ ಪತ್ತೆ

ಕರ್ನಾಟಕದಲ್ಲಿ ಕರೋನಾ ಪಾಸಿಟಿವ್ ರೋಗಿಗಳ ಸಂಖ್ಯೆ 10 ಕ್ಕೆ ಏರಿದೆ. ಸಂತ್ರಸ್ತರನ್ನು ಪ್ರತ್ಯೇಕವಾಗಿರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

Written by - Yashaswini V | Last Updated : Mar 17, 2020, 08:35 AM IST
ಎಲ್ಲೆಡೆ ಕರೋನಾ ಹಾವಳಿ: ಕರ್ನಾಟಕದಲ್ಲಿ ಮತ್ತೆರಡು ಕರೋನಾ ಪ್ರಕರಣ ಪತ್ತೆ title=

ಬೆಂಗಳೂರು: ಭಾರತದಲ್ಲಿ ಕರೋನಾ ವೈರಸ್ ಸೋಂಕು ನಿರಂತರವಾಗಿ ಹೆಚ್ಚುತ್ತಿದೆ. ಸೋಮವಾರ ರಾತ್ರಿಯ ಹೊತ್ತಿಗೆ, ದೇಶದಲ್ಲಿ ಕರೋನಾ ಸೋಂಕಿತ ರೋಗಿಗಳ ಸಂಖ್ಯೆ 114 ಆಗಿದ್ದು, ಈಗ ಅದು 116 ಕ್ಕೆ ಏರಿದೆ. ಕರ್ನಾಟಕದ ಎರಡು ಹೊಸ ರೋಗಿಗಳಲ್ಲಿ COVID-19 ದೃಢಪಟ್ಟಿದೆ. ಇದರಿಂದಾಗಿ ಕರ್ನಾಟಕದಲ್ಲಿ ಕರೋನಾ ವೈರಸ್ (CoronaVirus)  ಪಾಸಿಟಿವ್ ರೋಗಿಗಳ ಸಂಖ್ಯೆ 10 ಕ್ಕೆ ಏರಿದೆ. ಸಂತ್ರಸ್ತರನ್ನು ಪ್ರತ್ಯೇಕವಾಗಿರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಶಾಲಾ-ಕಾಲೇಜು ಮತ್ತು ಸಿನೆಮಾ ಹಾಲ್‌ಗಳನ್ನು ಮಾರ್ಚ್ 21 ರವರೆಗೆ ಮುಚ್ಚಲಾಗಿದೆ. ಆದಾಗ್ಯೂ, ಪರಿಸ್ಥಿತಿ ಅವಲೋಕಿಸಿ ಅದನ್ನು ವಿಸ್ತರಿಸುವ ಸಾಧ್ಯತೆ ಇದೆ.

ಕರೋನಾ ವೈರಸ್‌ನಿಂದ ಹೆಚ್ಚು ಪ್ರಭಾವಿತವಾದ ರಾಜ್ಯವೆಂದರೆ ಮಹಾರಾಷ್ಟ್ರ. ಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೆ 39 ಪ್ರಕರಣಗಳು ವರದಿಯಾಗಿವೆ. ಕರೋನಾ ವೈರಸ್‌ನ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಪೊಲೀಸರು ಆದೇಶ ಹೊರಡಿಸಿದ್ದು, 'ಗುಂಪು ಪ್ರವಾಸ'ವನ್ನು ನಿಷೇಧಿಸಿದ್ದಾರೆ. ಸೆಕ್ಷನ್ 144 ರ ಅಡಿಯಲ್ಲಿ ಈ ನಿಷೇಧವನ್ನು ವಿಧಿಸಲಾಗಿದೆ. ಇದಲ್ಲದೆ ಪುಣೆಯಲ್ಲಿಯೂ ಸೆಕ್ಷನ್ 144 ಜಾರಿಗೆ ಬರಲಿದೆ.

ಎಲ್ಲೆಲ್ಲೂ ಕೊರೋನಾ ಭೀತಿ: ಒಂದು ವಾರ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ?

ಪುಣೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗುವುದು, ಆದರೆ ಸಂವಹನವನ್ನು ನಿಷೇಧಿಸಲಾಗುವುದಿಲ್ಲ ಎಂದು ಪುಣೆಯ ವಿಭಾಗೀಯ ಆಯುಕ್ತ ದೀಪಕ್ ಮೈಸ್ಕರ್ ಸೋಮವಾರ ಹೇಳಿದ್ದಾರೆ. ಪುಣೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲು ಪುಣೆ ಪೊಲೀಸರಿಗೆ ಅಧಿಕಾರ ನೀಡಲಾಗಿದೆ.

ಸೆಕ್ಷನ್ 144 ಅನ್ನು ಪಿಂಪ್ರಿ ಚಿಂಚ್‌ವಾಂಡ್‌ನಲ್ಲಿ ಜಾರಿಗೊಳಿಸಲಾಗಿದೆ, ಆದರೆ ಸಂವಹನವನ್ನು ನಿಷೇಧಿಸಲಾಗಿಲ್ಲ. ಜನಸಂದಣಿಯನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಾಧ್ಯವಾದರೆ, ನೌಕರರಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಲಾಗುವುದು. ಕರೋನಾ ವೈರಸ್‌ನ ಅತಿ ಹೆಚ್ಚು 16 ಪ್ರಕರಣಗಳು ಪುಣೆಯಲ್ಲಿ ವರದಿಯಾಗಿದೆ.

ಏತನ್ಮಧ್ಯೆ, ಬಾಂಬೆ ಹೈಕೋರ್ಟ್ ಇಂದು (ಮಂಗಳವಾರದಿಂದ) ಕೇವಲ 2 ಗಂಟೆಗಳ (ಮಧ್ಯಾಹ್ನ 12 ರಿಂದ 2) ಕೆಲಸ ಮಾಡುತ್ತದೆ ಎಂದು ನಿರ್ಧರಿಸಿದೆ. ಕೆಳ ನ್ಯಾಯಾಲಯಗಳು ದಿನಕ್ಕೆ 3 ಗಂಟೆಗಳ ಕಾಲ ಮಾತ್ರ ಕೆಲಸ ಮಾಡುವುದನ್ನು ಖಚಿತಪಡಿಸುತ್ತದೆ.

ಅದೇ ಸಮಯದಲ್ಲಿ, ಮುಂಬೈ ಪೊಲೀಸರು ವಿದೇಶಿ ಮತ್ತು ದೇಶೀಯ ಪ್ರವಾಸಗಳನ್ನು ನಿಷೇಧಿಸಿದ್ದಾರೆ. ಮುಂಬೈನಲ್ಲಿ ಮಾರ್ಚ್ 31 ರವರೆಗೆ ಈ ನಿಯಮವನ್ನು ಜಾರಿಗೆ ತರಲಾಗಿದೆ.

ಆದಾಗ್ಯೂ, ಖಾಸಗಿ ಟೂರ್ ಆಪರೇಟರ್‌ಗಳು ಸೇರಿದಂತೆ ಒಬ್ಬ ವ್ಯಕ್ತಿಯು ವಿಶೇಷ ಸಂದರ್ಭಗಳಲ್ಲಿ ಪ್ರಯಾಣಿಸಬೇಕಾದರೆ, ಅವನು ಮುಂಬೈ ಪೊಲೀಸ್ ಆಯುಕ್ತರಿಂದ ಅನುಮೋದನೆ ಪಡೆಯಬೇಕಾಗುತ್ತದೆ.

Trending News