ಚಾಮರಾಜನಗರದಲ್ಲಿ ವಿಚಿತ್ರ ಪ್ರೇಮ್ ಕಹಾನಿ: ಅರೆಸ್ಟ್ ಆದ ಪಾಗಲ್ ಪ್ರೇಮಿ

Chamarajanagar: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಒಂದು ವಿಚಿತ್ರ ಪ್ರೇಮಕಹಾನಿ ಬೆಳಕಿಗೆ ಬಂದಿದೆ. 

Written by - Deepa A Reddy | Last Updated : Aug 24, 2025, 12:55 PM IST
  • ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಒಂದು ವಿಚಿತ್ರ ಪ್ರೇಮಕಹಾನಿ ಬೆಳಕಿಗೆ ಬಂದಿದೆ.
  • ಆದರೆ ಕೆಲವೇ ದಿನಗಳಲ್ಲಿ ಅವನ ಮಾತುಗಳು ಸುಳ್ಳೆಂದು ವಿದ್ಯಾರ್ಥಿನಿಗೆ ತಿಳಿದಿದೆ.
  • ಕೊನೆಗೆ "ಕೊಲೆ ಮಾಡುತ್ತೇನೆ" ಎಂಬ ಮಟ್ಟಿಗೆ ಬೆದರಿಕೆ ಹಾಕಿದ್ದಾನೆ.
ಚಾಮರಾಜನಗರದಲ್ಲಿ ವಿಚಿತ್ರ ಪ್ರೇಮ್ ಕಹಾನಿ: ಅರೆಸ್ಟ್ ಆದ ಪಾಗಲ್ ಪ್ರೇಮಿ

Chamarajanagar: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಒಂದು ವಿಚಿತ್ರ ಪ್ರೇಮಕಹಾನಿ ಬೆಳಕಿಗೆ ಬಂದಿದೆ. ಕಾಲೇಜು ವಿದ್ಯಾರ್ಥಿನಿಯ ಹಿಂದೆ ಬಿದ್ದ ಪಾಗಲ್ ಪ್ರೇಮಿಯು ತಾನು ಹೇಳಿಕೊಂಡ ಎಲ್ಲವೂ ಸುಳ್ಳೆಂದು ಬಯಲಾಗುತ್ತಿದ್ದಂತೆಯೇ, ಇದೀಗ ಪೊಲೀಸರು ಅವನನ್ನು ಬಂಧಿಸಿದ್ದಾರೆ.

Add Zee News as a Preferred Source

ಮೂಲಗಳ ಪ್ರಕಾರ, ಗುಂಡ್ಲುಪೇಟೆಯಿಂದ ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಸೆಯಲು ಆರೋಪಿ ಆಯೂಬ್ ಖಾನ್ ಹಲವು ಸುಳ್ಳು ಕಥೆಗಳನ್ನು ಹೇಳಿಕೊಂಡಿದ್ದಾನೆ. “ನಿನ್ನ ಸ್ನೇಹಿತೆಯ ಸಹೋದರ” ಹಾಗೂ “ನೀನು ನನ್ನ ಮುದ್ದು ತಂಗಿ” ಎಂಬ ನೆಪದಲ್ಲಿ ಹತ್ತಿರವಾಗಲು ಪ್ರಯತ್ನಿಸಿದ್ದಾನೆ. ಇದಲ್ಲದೆ, ತನ್ನ ಧಾರ್ಮಿಕ ಗುರುತನ್ನೂ ಬದಲಿಸಿ “ನಾನು ಹಿಂದೂ ಧರ್ಮದವನು” ಎಂದು ಹೇಳಿಕೊಂಡಿದ್ದಾನೆ.

ಆದರೆ ಕೆಲವೇ ದಿನಗಳಲ್ಲಿ ಅವನ ಮಾತುಗಳು ಸುಳ್ಳೆಂದು ವಿದ್ಯಾರ್ಥಿನಿಗೆ ತಿಳಿದಿದೆ. ಇದರಿಂದ ದೂರವಾದ ವಿದ್ಯಾರ್ಥಿನಿಯ ಮೇಲೆ ಅವನು ಒತ್ತಡ ಹೇರುವುದನ್ನು ಪ್ರಾರಂಭಿಸಿದ್ದಾನೆ. "ನೀನಂದ್ರೆ ನನಗೆ ಇಷ್ಟ, ನನ್ನ ಜೊತೆ ಮಾತನಾಡಲೇಬೇಕು" ಎಂದು ದುಂಬಾಲು ಹಾಕಿ, ಅವಾಚ್ಯ ಶಬ್ಧಗಳಿಂದ ನಿಂದನೆ ನಡೆಸಿದ್ದಾನೆ. ಕೊನೆಗೆ "ಕೊಲೆ ಮಾಡುತ್ತೇನೆ" ಎಂಬ ಮಟ್ಟಿಗೆ ಬೆದರಿಕೆ ಹಾಕಿದ್ದಾನೆ.

ಭಯಭೀತಳಾದ ವಿದ್ಯಾರ್ಥಿನಿ, ತಕ್ಷಣವೇ ಗುಂಡ್ಲುಪೇಟೆ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ವಿದ್ಯಾರ್ಥಿನಿ ನೀಡಿದ ದೂರಿನ ಅನ್ವಯ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ಆರೋಪಿ ಆಯೂಬ್ ಖಾನ್‌ನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಪೋಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

 

About the Author

Deepa A Reddy

ದೀಪಾ ಎ (Deepa A) Zee ಕನ್ನಡ ನ್ಯೂಸ್‌ ಮಾಧ್ಯಮದಲ್ಲಿ 2023ರಿಂದ ಕೆಲಸ ಮಾಡುತ್ತಿದ್ದು, ವೆಬ್‌ ವಿಭಾಗದಲ್ಲಿ ಒಂದು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದ್ದು, ಇದೀಗ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಜ್ಯೋತಿಷ್ಯ, ವೈರಲ್‌, ಆರೋಗ್ಯ ಹಾಗೂ ಲೈಫ್‌ ಸ್ಟೈಲ್‌ ವಿಭಾಗಗಳಲ್ಲಿನ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಓದುಗರನ್ನು ತಮ್ಮ ಬರವಣಿಗೆಯ ಮೂಲಕ ತಲುಪುವ ಗುರಿ ಇವರದ್ದಾಗಿದ್ದು, ಓದುಗರ ಆಸಕ್ತಿ ಹಾಗೂ ಅಗತ್ಯಗಳನ್ನು ಗೌರವಿಸುತ್ತಾರೆ. 

...Read More

Trending News