)
ಬಾಗಲಕೋಟೆ : ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದ ಕೃಷ್ಣ ನದಿಯ ನಡುಗಡ್ಡೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಮೊಸಳೆ ದಾಳಿ ಮಾಡಿರುವ ಘಟನೆ ಜರುಗಿದೆ. ನದಾಳಿ ಒಳಗಾದ ವ್ಯಕ್ತಿಯನ್ನ ಲಕ್ಷ್ಮಣ ದುರ್ಗಪ್ಪ ಮಾಂಗ ಎಂದು ಗುರುತಿಸಲಾಗಿದೆ.
ಕೃಷ್ಣಾ ನದಿಗೆ ಅಪಾರ ಪ್ರಮಾಣ ನೀರು ಬಂದ ಹಿನ್ನೆಲೆಯಲ್ಲಿ ಲಕ್ಷ್ಮಣ ಎನ್ನುವವರು ಎಂದಿನಂತೆ ಬಹಿರ್ದಸೆಗೆ ಹೋಗುವಾಗ ಏಕಾಏಕಿ ಮೊಸಳೆ ದಾಳಿ ಮಾಡಿದೆ. ಕಾಲಿಗೆ ಗಂಭೀರವಾದ ಗಾಯವಾಗಿದ್ದು, ಅಪಾರ ಪ್ರಮಾದಲ್ಲಿ ರಕ್ತಶ್ರಾವವಾಗಿದೆ. ಕೂಡಲೆ ಸ್ಥಳೀಯ ಗ್ರಾಮಸ್ಥರು ಗಾಯಾಳುವನ್ನ ಜಮಖಂಡಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಪೋಲಿಸ ಅಧಿಕಾರಿಗಳು ಹಾಗೂ ಕಡಕೋಳ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಧರ್ಭದಲ್ಲಿ ಕಡಕೋಳ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸಂಜು ದೇವರವರ ಮಾತನಾಡಿ ಲಕ್ಷ್ಮಣ ಎನ್ನುವ ವ್ಯಕ್ತಿಯ ಮೇಲೆ ಮೊಸಳೆ ದಾಳಿ ಮಾಡಿದ್ದು, ಸಂಭಂದ ಪಟ್ಟ ಅಧಿಕಾರಿಗಳು ಕೂಡಲೆ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಒದಗಿಸ ಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಧರ್ಮಸ್ಥಳ ಅಪವಿತ್ರ ಖಂಡಿಸಿ ಬಿಜೆಪಿ ಧರ್ಮಯಾತ್ರೆ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.