)
JJ Nagara: ಆತ ರೌಡಿಶೀಟರ್. ಎರಡು ಮದುವೆ ಆಗಿದ್ದ. ಪೊಲೀಸ್ರಿಗೆ ಚಳ್ಳೆ ಹಣ್ಣು ತಿನ್ನಿಸ್ತಿದ್ದ.ಪೊಲೀಸ್ರಂದ್ರೆ ಭಯಾನೇ ಇರ್ಲಿಲ್ಲ.. ಚಾಲೆಂಜ್ ಹಾಕಿ ರಾಜ್ಯ ರಾಜ್ಯಕ್ಕೆ ಎಸ್ಕೇಪ್ ಆಗ್ತಿದ್ದ. ಅಷ್ಟು ಧೈರ್ಯವಂತ ತನ್ನ ಹೆಂಡತಿಗೆ ಹೆದ್ರಿದ್ದಾನೆ.ಕಣ್ಣಿಗೆ ಕುರುಪಾಕಿ ಕೈ ಮುರಿದ್ಳು ಅಂತಾ ಪೊಲೀಸ್ ಠಾಣೆಗೆ ಬಂದಿದ್ದಾನೆ.2ನೇ ಹೆಂಡತಿಗೋಸ್ಕರ ಮೊದಲನೇ ಹೆಂಡತಿಯಿಂದ ಒದೆ ತಿಂದು ಪೊಲೀಸ್ರ ರಕ್ಷಣೆಗೆ ಅಂಗಲಾಚುತ್ತಿದ್ದಾನೆ. ಅಷ್ಟಕ್ಕೂ ಯಾರು ಆ ರೌಡಿಶೀಟರ್. ಏನು ಆತನ ಡಬಲ್ ಮ್ಯಾರೇಜ್ ಸ್ಟೋರಿ?
ಹೀಗೆ ಠಾಣೆ ಮುಂದೆ ಪೊಲೀಸ್ರಿಗೆ ಸಾರ್ ನನ್ನ ಹೆಂಡತಿ ಹೊಡಿತಾವ್ಳೆ.ಕಣ್ಣಿಗೆ ಗಾಯ ಮಾಡೋಳೆ.ಕೈ ಮುರಿದೋಳೆ. ನನ್ನ ಸಾಯಿಸ್ತೀನಿ ಅಂತೋಳೇ ಕಂಪ್ಲೆಂಟ್ ತಗೋಳಿ ಸಾರ್. ನನ್ನ ಕಾಪಾಡಿ ಸಾರ್ ಅಂತಾ ಅಂಗಲಾಚ್ತಿರೋ ಈ ಆಸಾಮಿ ಹೆಸ್ರು ಸೈಯದ್ ಅಸ್ಗರ್ ಅಂತಾ.ಇದೇ ಜೆಜೆ ನಗರ ಠಾಣೆ ರೌಡಿಶೀಟರ್.ಬೇರೆ ಬೇರೆ ಠಾಣೆಯಲ್ಲಿ ಕೂಡ ಈತನ ಮೇಲೆ ರೌಡಿಶೀಟ್ ಇದೆ. ಕೊಲೆ ಯತ್ನ, ಗಾಂಜಾ ಪೆಡ್ಲಿಂಗ್, ಪುಂಡಾಟದಂತಹ ಕೇಸ್ ಗಳು ಈತನ ಮೇಲಿವೆ. ಹತ್ತಾರು ಕೇಸ್ ಗಳಿವೆ.ಕಳೆದ ಕೆಲ ದಿನಗಳ ಹಿಂದಷ್ಟೇ ಜೈಲಿನಿಂದಬಿಡುಗಡೆ ಆಗಿರೋ ಈ ರೌಡಿಶೀಟರ್ ನ ಹಿಡಿಯೋಕೆ ಪೊಲೀಸ್ರೇ ಒದ್ದಾಡ್ತಿದ್ರು.ಕಳೆದ ಬಾರಿ ಈತನನ್ನ ಹಿಡಿಯೋಕೆ ಬಿಹಾರ, ಚತ್ತೀಸ್ಘರ್, ರಾಜಸ್ಥಾನ್ ಅಂತಾ ಪೊಲೀಸ್ರು ಬೆನ್ನಟ್ಟಿದ್ರು.ಹೆಜ್ಜೆ ಹೆಜ್ಜೆಗೂ ತಪ್ಪಿಸಿಕೊಂಡು ಪೊಲೀಸ್ರಿಗೆ ಚಳ್ಳೆ ಹಣ್ಣು ತಿನ್ನಿಸ್ತಿದ್ದಾತ ಈಗ ತನ್ನ ಪತ್ನಿಯೇ ಕೈಕಾಲು ಮುರಿತೋಳೆ ಸಾರ್ ಕಾಪಾಡಿ ಅಂತಾ ಪೊಲೀಸ್ರ ರಕ್ಷಣೆ ಕೇಳ್ತಿದ್ದಾನೆ.
ಅಂದ್ಹಾಗೆ ಏರಿಯಾಗಳಲ್ಲಿ ಜನರಿಗೆ ಭಯ ಬೀಳ್ಸಿ ವಸೂಲಿ, ಗಾಂಜಾ ಪೆಡ್ಲಿಂಗ್, ಪುಂಡಾಟಿಕೆ ಮಾಡೋ ರೌಡಿಶೀಟರ್ ಗೆ ಈ ಪರಿಸ್ಥಿತಿ ತಂದಿರೋ ಆತನ ಧರ್ಮಪತ್ನಿ ಈಕೆಯೇ ನೋಡಿ. ಹೀಗೆ ಮಚ್ಚು, ತಲ್ವಾರ್ ಗಳನ್ನ ತೋರಿಸ್ಕೊಂಡು ಈ ಮಚ್ಚಲ್ಲಿ ಹೊಡಿಬೇಕಾ. ಈ ತಲ್ವಾರಲ್ಲಿ ಹೊಡಿಬೇಕಾ ಅಂತಾ ಜೋಶ್ ಅಲ್ಲಿ ವಿಡಿಯೋ ಮಾಡಿ ಬೆದರಿಕೆ ಹಾಕ್ತಿರೋ ಈಕೆನೇ ನೋಡಿ.ಈಕೆ ಹೆಸ್ರು ಸೈಯದ್ ರಿಜ್ವಾನಾ ಅಂತಾ.ತನ್ನ ಪತಿಯ ವಿರುದ್ಧವೇ ಈ ರೀತಿ ರೊಚ್ಚಿಗೆದ್ದು, ಕಣ್ಣಿಗೆ ಕುರುಪಾಕಿ ಕೈ ಮುರಿಯೋ ಲೆವೆಲ್ ಗೆ ಗಲಾಟೆ ಮಾಡ್ಕೊಂಡಿರೋಕೆ ಕಾರಣ ಆತನ ಎರಡನೇ ಪತ್ನಿ. ರಿಜ್ವಾನಾಳನ್ನ ಮದುವೆಯಾಗಿದ್ದ ರೌಡಿಶೀಟರ್ ಕೆಲ ಎರಡು ಮೂರು ವರ್ಷಗಳ ಹಿಂದೆ ನಗ್ಮಾ ಎಂಬ ಮತ್ತೊಬ್ಬಾಕೆಯನ್ನ ಮದುವೆಯಾಗಿದ್ದ.ಆಕೆಗೂ ಒಂದು ಮಗು ಇದೆ. ಆಗಿನಿಂದಲೂ ಎರಡನೆ ಹೆಣ್ತಿನ ಬಿಡು ಅಂತಾ ಮೊದಲನೇ ಹೆಂಡ್ತಿ ರಿಜ್ವಾನಾ ಜಗಳ ತೆಗೀತಿದ್ದಾಳೆ.ಮನೆಗೆ ಹೋದ್ರೆ ಅವ್ರ ಅಣ್ಣತಮ್ಮಂದಿರ ಜೊತೆ ಸೇರಿ ಹೊಡೀತಾಳೆ.ಮಚ್ಚು, ತಲ್ವಾರ್ ತೋರಿಸಿ ಸಾಯಿಸ್ತೀನಿ ಅಂತಾ ಬೆದರಿಕೆ ಹಾಕ್ತಾಳೆ ಎಂದು ಪೊಲೀಸ್ರಿ ದೂರು ನೀಡಿದ್ದಾನೆ.ದೂರು ನೀಡೋಕೆ ಎರಡನೇ ಪತ್ನಿಯನ್ನೂ ಠಾಣೆಗೆ ಕರೆ ತಂದಿದ್ದ.
ಹೀಗೆ ಹೆಂಡತಿಯಿಂದ ಏಟು ತಿಂದು ಸೀದಾ ಠಾಣೆಗೆ ಬಂದಿರೋ ರೌಡಿಶೀಟರ್ ತನ್ನ ಪತ್ನಿ ವಿರುದ್ಧ ಹಲವು ಆರೋಪಗಳನ್ನೂ ಮಾಡಿದ್ದಾನೆ.ಆಕೆ ಗಾಂಜಾ ಪೆಡ್ಲಿಂಗ್ ಮಾಡ್ತಾಳೆ.ಡ್ರಗ್ ಪೆಡ್ಲಿಂಗ್ ಮಾಡ್ತಾಳೆ ಅಂತಾ ಕೂಡ ಆರೋಪಿಸಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸ್ರು ತನಿಖೆ ನಡೆಸ್ತಿದ್ದಾರೆ. ಆ ಮಹಿಳೆಯ ಮಚ್ಚು ಲಾಂಗು ತೋರಿಸ್ತಿರೋ ವಿಡಿಯೋ ಕೂಡ ಹಾರಿಬಲ್ ಇದ್ದು ಇಡೀ ಕೇಸ್ ಸಂಬಂಧ ಪೊಲೀಸ್ರು ಎಚ್ಚರವಹಿಸಬೇಕಿದೆ. ಕಟ್ಟಿಕೊಂಡ ಗಂಡಂಗೇ ಈ ಪರಿಸ್ಥಿತಿ ಅಂದ್ರೆ ಸಾಮಾನ್ಯ ಜನರಿಗೆ ಖಂಡಿತ ಈಕೆ ಡೇಂಜರ್ ಅನ್ನೋದು ಮಾತ್ರ ಪಕ್ಕಾ.