ಡಿಸಿಎಂ ಹೈಕಮಾಂಡ್ ನಾಯಕರ ಭೇಟಿ ವಿಫಲ : ದೆಹಲಿಯಿಂದ ಬರಿಗೈಲಿ ವಾಪಸ್ ಆದ ಟ್ರಬಲ್ ಶೂಟರ್

ಸಿಎಂ ಕುರ್ಚಿ ಆಸೆಯನ್ನ ಇಟ್ಕೊಂಡು ದೆಹಲಿಗೆ ತೆರಳಿದ್ದ ಡಿಸಿಎಂ ಡಿಕೆಶಿ ದೆಹಲಿಯಿಂದ ಬರಿಗೈಲಿ ವಾಪಸ್ ಆಗ್ತಿದ್ದಾರೆ. ಪಕ್ಷದ ಹೈಕಮಾಂಡ್ ನಾಯಕರನ್ನ ಭೇಟಿ ಮಾಡುವ ಅವರ ಆಸೆ ನಿರಾಸೆಯಾಗಿದೆ.ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಮತ್ತೆ ಬಿಹಾರ ಎರಡನೇ ಹಂತದ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ..ಹೀಗಾಗಿ ನವೆಂಬರ್ ಕ್ರಾಂತಿಯ ಚರ್ಚೆ ಗೆ ಬ್ರೇಕ್ ಬೇಳುವ ಸಾಧ್ಯತೆ ದಟ್ಟವಾಗಿದೆ.

Written by - Krishna N K | Last Updated : Nov 6, 2025, 09:10 PM IST
    • ಖುಷಿಯಿಂದ ಹೋದವರು ನಿರಾಸೆಯಿಂದ ವಾಪಸ್
    • ನವೆಂಬರ್ ಕ್ರಾಂತಿಯ ಚರ್ಚೆಗೆ ಮೊದಲ ಹಿನ್ನಡೆ
    • ಬೇಕೆಂದೇ ಭೇಟಿಯಿಂದ ತಪ್ಪಿಸಿಕೊಂಡ್ರಾ ರಾಹುಲ್..?
ಡಿಸಿಎಂ ಹೈಕಮಾಂಡ್ ನಾಯಕರ ಭೇಟಿ ವಿಫಲ : ದೆಹಲಿಯಿಂದ ಬರಿಗೈಲಿ ವಾಪಸ್ ಆದ ಟ್ರಬಲ್ ಶೂಟರ್

ಬೆಂಗಳೂರು : ಡಿಸಿಎಂ ಡಿಕೆಶಿ ದೆಹಲಿ ಭೇಟಿಯ ಹಿಂದೆ ನಾನಾ ಚರ್ಚೆಗಳು ಶುರುವಾಗಿದ್ವು. ಸುಪ್ರೀಂನಲ್ಲಿರುವ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ವಕೀಲರ ಜೊತೆ ಚರ್ಚೆಗೆಂದೇ ಅಧಿಕೃತವಾಗಿ ತೆರಳಿದ್ರೂ, ಅದರ ಹಿಂದಿದ್ದ ಲೆಕ್ಕಾಚಾರ ಬೇರೆಯೇ ಇತ್ತು. ಹೇಗಿದ್ರೂ ದೆಹಲಿಗೆ ಹೋಗ್ತೇನೆ, ಬಿಹಾರ ಚುನಾವಣಾ ಪ್ರಚಾರದಿಂದ ರಾಹುಲ್, ಖರ್ಗೆ ವಾಪಸ್ ಆಗಿದ್ದಾರೆ. ಸಿಕ್ಕರೆ ಒಂದು ದಾಳ ಉರುಳಿಸಿಯೇ ಬಿಡೋಣವೆಂದು ಲೆಕ್ಕಾಚಾರ ಹಾಕಿದ್ದರು.  

Add Zee News as a Preferred Source

ಹೌದು.. ಡಿಕೆಶಿ ಬಯಸಿದಂತೆ ಮೊದಲ‌ ಹಂತದ ಚುನಾವಣಾ ಪ್ರಚಾರ ಮುಗಿಸಿ ರಾಹುಲ್‌ಗಾಂಧಿ ದೆಹಲಿಗೆ ವಾಪಸ್ ಬಂದ್ರು. ಜೊತೆಗೆ ಹರ್ಯಾಣದಲ್ಲಿ ಮತಗಳವು ಮಾಡಲಾಗಿದೆಯೆಂದು ಬಂಡಲ್ ಗಟ್ಟಲೆ ದಾಖಲೆ ಗಳನ್ನೂ ಬಿಡುಗಡೆ ಮಾಡಿದ್ದರು.. ಹೀಗಾಗಿ ರಾತ್ರಿ ರಾಹುಲ್‌ಗಾಂಧಿ ಭೇಟಿ ಮಾಡಬಹುದು, ತಮ್ಮ ಸಿಎಂ ಕುರ್ಚಿ ಆಸೆಯನ್ನ ನೆನಪಿಸಬಹುದು ಅನ್ನೋ ಲೆಕ್ಕಾಚಾರ ಡಿಕೆಶಿಗಿತ್ತು. ಆದ್ರೆ ನಿನ್ನೆ ಸುದ್ದಿಗೋಷ್ಠಿ ಮಾಡಿ ದಾಖಲೆ ಬಿಡುಗಡೆ ಮಾಡಿದ ರಾಹುಲ್ ಇಂದು ಬೆಳಗ್ಗೆಯೇ ಎರಡನೇ ಹಂತದ ಚುನಾವಣಾ ಪ್ರಚಾರಕ್ಕೆ ತೆರಳಿದ್ರು. ಹೀಗಾಗಿ ಬೆಳಗ್ಗೆ ಅವರನ್ನ ಭೇಟಿ ಮಾಡುವ ಕೆಲಸವೂ ಆಗಲಿಲ್ಲ. ಹೀಗಾಗಿ ಡಿಕೆಶಿ ಬರಿಗೈಲಿ ವಾಪಸ್ ಆಗ್ತಿದ್ದಾರೆ.

ಇದನ್ನೂ ಓದಿ:H.K.ಪಾಟೀಲ್‌ ಜೊತೆಗಿನ ಸಭೆ ವಿಫಲ ಹಿನ್ನೆಲೆ ಪ್ರೊಟೆಸ್ಟ್

ಅಂದುಕೊಂಡಂತೆ ಡಿಕೆಶಿ ರಾಹುಲ್ ಗಾಂಧಿ ಹಾಗೂ ಖರ್ಚೆಯವರನ್ನ ಭೇಟಿ ಮಾಡಿದ್ರೆ ಅದರ ಸಂದೇಶವೇ ಬೇರೆಯಾಗ್ತಿತ್ತು. ಒಂದು ವೇಳೆ ರಾಹುಲ್ ಜೊತೆ ಚರ್ಚೆಯಾಗದಿದ್ರೂ ಭೇಟಿಯಾಗಿ ವಿಶ್ ಮಾಡಿದ್ರೂ ಸಿಎಂ ಕುರ್ಚಿ ವಿಚಾರ ಜೋರಾಗಿಯೇ ಸದ್ದುಮಾಡ್ತಿತ್ತು.. ಆದ್ರೆ ರಾಹುಲ್ ಭೇಟಿಯಾಗದ ಕಾರಣ ಡಿಸಿಎಂ ಡಿಕೆಶಿಗೆ ನಿರಾಸೆಯಾಗಿರೋದಂತೂ ಸುಳ್ಳಲ್ಲ. ಯಾಕಂದ್ರೆ ಈಗ ಬಿಟ್ಟರೆ ಮತ್ತೆ ರಾಹುಲ್ ಸಿಗೋದಿಲ್ಪ ಅನ್ನೋದು ಡಿಕೆಶಿಗೆ ಗೊತ್ತಿತ್ತು. 

ಕಾರಣ, ನವೆಂಬರ್ 11 ರಂದು ಎರಡನೇ ಹಂತದ ಚುನಾವಣೆ ಮುಗಿಯಲಿದ್ದು, 14 ರಂದು ಫಲಿತಾಂಶ ಹೊರಬೀಳ್ತಿತ್ತು ಅದಕ್ಕೂ ಮೊದಲೇ ರಾಹುಲ್ ಗಾಂಧಿ ಫಿನ್ಲೆಂಡ್ ಪ್ರವಾಸಕ್ಕೆ ತೆರಳೋಕೆ ನಿಗದಿಯಾಗಿತ್ತು. ಹೀಗಾಗಿ ಅವರು ಬರುವವರೆಗೆ ಕಾಯಬೇಕು, ಅಷ್ಟರೊಳಗೆ ಈ ಸಿಎಂ ಕುರ್ಚಿ ವಿಚಾರವೇ ಹಿನ್ನೆಲೆಗೆ ಸರಿದು ತಮ್ಮ ಆಸೆ ಕನಸಾಗಿಯೇ ಉಳಿಯುತ್ತೆ ಅನ್ನೋದು ಡಿಕೆಶಿಗೆ ಗೊತ್ತಿತ್ತು.. ಹಾಗಾಗಿಯೇ ಹೇಗಾದ್ರೂ ಮಾಡಿ ಭೇಟಿ ಮಾಡೋ ಪ್ರಯತ್ನ ಮಾಡಿದ್ರೂ ಅದು ಸಫಲವಾಗಿಲ್ಲ.. ಹೀಗಾಗಿ ಮತ್ತಷ್ಟು ದಿನ ಕಾಯ ಬೇಕಾದ ಅನಿವಾರ್ಯತೆ ಎದುರಾಗಿದೆ.

ಇದನ್ನೂ ಓದಿ:ದೆಹಲಿಯಲ್ಲಿರುವ ರಾಹುಲ್ ಗಾಂಧಿ ಮತ್ತು DCM ಡಿಕೆಶಿ

ಇನ್ನು ಡಿಸಿಎಂ ಡಿಕೆಶಿ ರಾಹುಲ್ ಭೇಟಿಗೆ ಪ್ರಯತ್ನ ಪಟ್ರೂ ಸಿಕ್ಕಿಲ್ಲವೆಂದ್ರೆ ಅದು ಬೇಕೆಂದೇ ತಪ್ಪಿಸಿ ಕೊಂಡಂತಿದೆ. ಯಾಕಂದ್ರೆ ಒಂದು ವೇಳೆ ಭೇಟಿ ಮಾಡಿದ್ರೆ ಅದರ ಸಂದೇಶ ಕರ್ನಾಟಕ ರಾಜಕಾರಣದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದೆಂ ಬುದು ರಾಹುಲ್‌ಗಾಂಧಿಗೆ ಅರ್ಥವಾಗದೇನಲ್ಲ. ಯಾಕಂದ್ರೆ ಡಿಕೆಶಿ ಜೊತೆ ಮಾತನಾಡ ದಿದ್ರೂ ಪರವಾಗಿಲ್ಲ ಸುಮ್ಮನೆ ರಾಹುಲ್‌ಜೊತೆ ಇರುವ ಒಂದು ಫೋಟೋ ರಿಲೀಸ್ ಅಗಿದ್ರೂ ಸಾಕಿತ್ತು. ರಾಜ್ಯ ರಾಜಕಾರಣದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕ್ತಿತ್ತು.

ಡಿಕೆಶಿ ರಾಹುಲ್ ಭೇಟಿ ಮಾಡಿದ್ರು, ಸಿಎಂ ಕುರ್ಚಿ ಅಸೆಯನ್ನ ಹೇಳಿಕೊಂಡಿದ್ದಾರೆ. ರಾಹುಲ್ ರಿಂದ ಭರವಸೆ ಸಿಕ್ಕಿದೆ ಹೀಗೆ ಹಲವು ಸುದ್ದಿಗಳು ವರದಿಯಾಗ್ತಿದ್ವು. ಇದು ಪಕ್ಷ ಹಾಗೂ ಸರ್ಕಾರ ದ ಮೇಲೆ ಪರಿಣಾಮ ಬೀರ್ತಿತ್ತು.‌ ಹೀಗಾಗಿಯೇ ರಾಹುಲ್ ಡಿಕೆಶಿ ಭೇಟಿಗೆ ಸಬೂಬು ಹೇಳಿ ತಪ್ಪಿಸಿ ಕೊಂಡಂತಿದೆ. ಇನ್ನು ನವೆಂಬರ್ 15 ರಂದು ಸಿಎಂ ಕಪಿಲ್ ಸಿಬಲ್ ಬುಕ್ ಬಿಡುಗಡೆಗೆ ದೆಹಲಿಗೆ ತೆರಳ್ತಿದ್ದು, ಆಗಲೂ ರಾಹುಲ್ ಕೈಗೆ ಸಿಗೋದು ಅನುಮಾನ. ಯಾಕಂದ್ರೆ ವಿದೇಶಿ ಪ್ರವಾಸಕ್ಕೆ ಹೋಗೋದ್ರಿಂದ ಅವರಿಗೂ ಮಿಸ್ ಆಗಬಹುದು. ಅಲ್ಲಿಗೆ ಕುರ್ಚಿ ಬದಲಾವಣೆ  ಸಂಪುಟ ಪುನಾರಚನೆ ಸರ್ಕಸ್ ಮತ್ತಷ್ಟು ದಿನ ಮುಂದೂಡಿಕೆ ಯಾಗಲಿದೆ.

ಒಟ್ನಲ್ಲಿ ಬಹಳ ಆಸೆಯೊಂದಿಗೆ ದೆಹಲಿಗೆ ಭೇಟಿ ನೀಡಿದ ಡಿಕೆಶಿಗೆ ನಿರಾಸೆಯಾಗಿದೆ.ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಖರ್ಗೆ ಸಮಯಾವಕಾಶ  ಸಿಗದೆ ಬರಿಗೈಲಿ ವಾಪಸ್ ಆಗಿದ್ದಾರೆ.ಇದರಿಂದ ನವೆಂಬರ್ ಕ್ರಾಂತಿಗೆ ಹಿನ್ನಡೆಯಾಗಿದೆ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News