)
ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಇಂದು ವಿಶೇಷ ದಿನ. ಅಧಿದೇವತೆ ಚಾಮುಂಡೇಶ್ವರಿ ಭಕ್ತರಿಗೆ ಸಂಭ್ರಮ ಸಡಗರ. ಇಂದು ಬೆಟ್ಟದ ತಾಯಿ ಚಾಮುಂಡಿಯ ಹುಟ್ಟಿದ ಹಬ್ಬ. ಚಾಮುಂಡಿಯ ವರ್ಧಂತಿ ದಿನವಾದ ಇಂದು ಚಾಮುಂಡಿ ಬೆಟ್ಟದಲ್ಲಿ ಸಹಸ್ರಾರು ಸಂಖ್ಯೆ ಭಕ್ತರು ಆಗಮಿಸಿದ್ದರು. ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಭಕ್ತರು, ಚಾಮುಂಡಿಯ ವರ್ಧಂತಿಯಲ್ಲಿ ಭಾಗಿಯಾಗಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಹಿಷಾಸುರಮರ್ದಿನಿಗೆ ಭಕ್ತರಿಂದ ಜೈಕಾರ :
ನಾಡ ದೇವಿಯ ವರ್ಧಂತಿಯಲ್ಲಿ ಭಕ್ತರ ಸಂಭ್ರಮ ಸಡಗರ. ಆಷಾಢ ಮಾಸದಲ್ಲಿ ಅಧಿದೇವಿ ಚಾಮುಂಡಿಯ ವರ್ಧಂತಿಯನ್ನ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ದೇವಿಯ ಹುಟ್ಟಿದ ದಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನ ನೆರವೇರಿಸಲಾಗುತ್ತದೆ. ಅದರಂತೆ ಇಂದು ಚಾಮುಂಡೇಶ್ವರಿಯ ವರ್ಧಂತಿಯಾಗಿರುವುದರಿಂದ ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ಬಂದು ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ವರ್ಧಂತಿಗಾಗಿ ದೇವಾಲಯವನ್ನ ಅಲಂಕಾರ ಮಾಡಲಾಗಿತ್ತು.ಗರ್ಭಗುಡಿಯನ್ನ ಹಲವು ರೀತಿಯ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ದೇವಿಗೆ ರುದ್ರಾಭಿಷೇಕ, ಪುಷ್ಪಾಭಿಷೇಕ, ಸುವರ್ಣಾ ಅಭಿಷೇಕ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು.
ಮೊದಲು ಚಾಮುಂಡಿಬೆಟ್ಟವನ್ನ ಮಾರ್ಬಲ ಬೆಟ್ಟ, ಮಹಾಬಲಾದ್ರಿ ಅಂತಾ ಕರೆಯಲಾಗಿತ್ತು. ಮಾರ್ಬಲ ಬೆಟ್ಟದಲ್ಲಿ ಚಾಮುಂಡೇಶ್ವರಿಯನ್ನ ಪ್ರತಿಷ್ಠಾಪಿಸಿದ ನಂತರ ಚಾಮುಂಡಿಬೆಟ್ಟ ಎಂದು ಪ್ರಖ್ಯಾತವಾಗಿದೆ. ಬೆಟ್ಟದಲ್ಲಿ ಚಾಮುಂಡಿ ನೆಲೆಯೂರಿದಾಗಿನಿಂದಲೂ ಪ್ರತಿ ಆಷಾಢ ಮಾಸದಲ್ಲಿ ವರ್ಧಂತಿ ಮಹೋತ್ಸವವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಮೈಸೂರು ರಾಜ ಮಹಾರಾಜರು ವರ್ಧಂತಿ ಪೂಜೆ ನೆರವೇರಿಸುತ್ತಾ ಬಂದಿದ್ದಾರೆ. ಅದರಂತೆ ಈ ಬಾರಿ ಹುಟ್ಟುಹಬ್ಬದ ಪೂಜೆಯಲ್ಲಿ ರಾಜವಂಸ್ಥರಾದ ಪ್ರಮೋದಾದೇವಿ ಒಡೆಯರ್ ಹಾಗೂ ಸಂಸದ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಿ, ಪೂಜೆ ಸಲ್ಲಿಸಿದ್ದಾರೆ. ವರ್ಧಂತಿ ಅಂಗವಾಗಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಕೂರಿಸಿ ಪೊಲೀಸ್ ಬ್ಯಾಂಡ್ನೊಂದಿಗೆ ಮೆರವಣಿಗೆ ಮಾಡಲಾಯಿತು. ಯದುವೀರ್ ಚಿನ್ನದ ಪಲ್ಲಕಿಯನ್ನು ಎಳೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಭಕ್ತರು ಚಾಮುಂಡಿಯ ಉತ್ಸವ ಮೂರ್ತಿ ಹೊತ್ತ ರಥ ಎಳೆದರು. ಚಾಮುಂಡೇಶ್ವರಿ ವರ್ಧಂತಿಯಂದು ದೇವಿಯ ದರ್ಶನ ಪಡೆದು ಪ್ರಾರ್ಥಿಸಿದರೆ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಹೀಗಾಗಿ ಇಂದು ಸಹಸ್ರಾರು ಸಂಖ್ಯೆಯಲ್ಲಿ ದೇವಿಯ ದರ್ಶನ ಪಡೆದು ಪುನೀತರಾದರು. ಇಂದು ಬೆಳಗಿನ ಜಾವ ಅರಂಭಗೊಂಡ ದೇವಿಯ ವರ್ಧಂತಿ ಉತ್ಸವ ದರ್ಬಾರು ದಿನವಿಡೀ ಜರುಗಲಿದೆ. ರಾತ್ರಿ ದರ್ಬಾರು ಉತ್ಸವ ಕೂಡಾ ಬೆಟ್ಟದಲ್ಲಿ ಜರುಗಲಿದೆ.
ಒಟ್ಟಾರೆ, ಆಷಾಢ ಬಂತು ಅಂದರೆ ಚಾಮುಂಡಿ ಭಕ್ತರಿಗೆ ಸಂಭ್ರಮ ಸಡಗರ. ಆಷಾಢ ಮಾಸದಲ್ಲಿ ದೇವಿಯ ಪೂಜೆ ಪುರಸ್ಕಾರಗಳು ತಮ್ಮ ಬೇಡಿಕೆಗಳನ್ನ ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ. ಇದರಿಂದ ಚಾಮುಂಡಿಯ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಭಕ್ತರ ಬೇಡಿಕೆಯನ್ನ ತಾಯಿ ಚಾಮುಂಡೇಶ್ವರಿ ಈಡೇರಿಸಲಿ ನಾಡಿಗೆ ಒಳಿತಾಗುವಂತೆ ಆಶೀರ್ವಾದಿಸಲಿ ಎಂಬುದೇ ನಮ್ಮ ಪ್ರಾರ್ಥನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.