)
ಧರ್ಮಸ್ಥಳದ ಧರ್ಮದಂಗಲ್ ವಿಚಾರ ಕಾಡ್ಗಿಚ್ಚಿನಂತೆ ಹರಡಿದೆ.. ನೂರಾರು ಶವಗಳನ್ನ ಹೂತಾಕಿರುವುದಾಗಿ ಬುರುಡೆ ಹಿಡಿದು ಬಂದ ಮಾಸ್ಕ್ ಮ್ಯಾನ್ ನ ಬುರುಡೆ ಕಥೆ ರಿವೀಲ್ ಆಗಿದೆ.. ಈಗ ಚಿನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಮಾಧ್ಯಮದ ಮುಂದೆ ಬಂದಿದ್ದಾರೆ..
ಚಿನ್ನಯ್ಯ ಮಲ್ಲಿಕಾರನ್ನ ಕಳೆದ 17 ವರ್ಷಗಳ ಹಿಂದೆ ಮದ್ವೆಯಾಗಿದ್ದ ಮದ್ವೆಯಾದ ಬಳಿಕ ಧರ್ಮಸ್ಥಳಕ್ಕೆ ಮಲ್ಲಿಕಾಳನ್ನ ಕರೆದು ಹೋಗಿದ್ದ ಗಂಡ ಹೆಂಡ್ತಿ ಇಬ್ರು ಅಲ್ಲೇ ಕ್ಲೀನಿಂಗ್ ಕೆಲ್ಸ ಮಾಡ್ಕೊಂಡಿದ್ರು.. ಆದ್ರೆ ಆ ಕೆಲಸ ಬಿಟ್ಟು ತಮಿಳುನಾಡಿನಲ್ಲಿ ಕಳೆದ 8 ವರ್ಷಗಳ ಹಿಂದೆ ಚಿಕ್ಕದೊಂದು ಮನೆ ಲೀಸ್ ಗೆ ತೆಗೆದು ಕೊಂಡು ವಾಸವಿದ್ರು ಅದೇನಾಯ್ತೊ ಏನೋ ಕಳೆದ 2 ತಿಂಗಳಿಂದ ಚಿನ್ನಯ್ಯ ನಾಪತ್ತೆಯಾಗಿದ್ದು ಟಿವಿಯಲ್ಲಿ ಚಿನ್ನಯ್ಯ ಬಂಧನದ ಬಳಿಕವೇ ಪತ್ನಿಗೆ ವಿಷಯ ಬೆಳಕಿಗೆ ಬಂದಿದೆ. ನನ್ನ ಗಂಡ ಆ ರೀತಿಯಿಲ್ಲ ಆತನದ್ದು ತಪ್ಪೇನಿಲ್ಲವೆಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಇನ್ನು ಚಿನ್ನಯ್ಯ ಹಾಗೂ ಆಕೆಯ ಕುಟುಂಬದವರು ಕ್ರೈಸ್ಥ ಧರ್ಮಕ್ಕೆ ಮತಾಂತರ ಆಗಿದ್ದಾರೆಂಬ ಆರೋಪವಿತ್ತು ಆದ್ರೆ ಮಂಜುನಾಥ್ ಹಾಗೂ ಅಣ್ಣಪ್ಪನ ಸ್ವಾಮಿ ಮೇಲೆ ಪ್ರಮಾಣ ಮಾಡಿ ಹೆಳಿದ್ದು ನಾವು ಮತಾಂತರ ಆಗಿಲ್ಲವೆಂದು ಆರೋಪವನ್ನ ತಳ್ಳಿ ಹಾಕಿದ್ದಾರೆ.ಇನ್ನು ಕಳೆದ 2 ದಿನಗಳ ಹಿಂದೆ ಎಸ್.ಐ.ಟಿ ಅಧಿಕಾರಿ ತಮಿಳುನಾಡಿಗೆ ಬಂದು ಚಿನ್ನಯ್ಯನ ಕುರಿತು ವಿಚಾರಣೆ ನಡೆಸಿ ಹೋಗಿದ್ದಾರೆ. ತನ್ನ ಗಂಡ ಒಳ್ಳೆಯವನು ಎಂದು ಮಾಧ್ಯಮದ ಮುಂದೆ ಮಲ್ಲಿಕಾ ಕಣ್ಣೀರಿಟ್ಟರು.