)
ಇತ್ತೀಚಿನ ದಿನಗಳಲ್ಲಿ ಧರ್ಮಸ್ಥಳ ಪ್ರಕರಣ ಭಾರೀ ಸದ್ದು ಮಾಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅನನ್ಯ ಭಟ್ ಎಂದು ಹೇಳಿಕೊಂಡು ಸುಜಾತ ಭಟ್ ತೋರಿಸಿದ್ದ ಫೋಟೋ ಇದೀಗ ಸುದ್ದಿಯಲ್ಲಿದೆ. ಹೌದು, ವಾಸಂತಿ ಇನ್ನೂ ಬದುಕಿದ್ದಾಳೆ ಎನ್ನುವ ಮೂಲಕ ಮತ್ತೆ ಸಂಚನ ಮೂಡಿಸಿದ್ದಾರೆ ಸುಜಾತ ಭಟ್. ಇದೀಗ ಈ ಬಗ್ಗೆ ತನಿಖೆಯಾಗಲಿ ಎಂದು ವಾಸಂತಿ ಸಹೋದರ ಕೂಡ ಆಗ್ರಹಿಸಿದ್ದಾರೆ.
ವಾಸಂತಿ ಇನ್ನೂ ಕೂಡ ಬದುಕಿದ್ದಾರೆ :
ನನ್ನ ತಂಗಿಯ ಬದುಕಿದ್ದರೆ ಅತ್ಯಂತ ಖುಷಿಯ ವಿಚಾರ. ನನ್ನ ತಂಗಿ ಬದುಕಿದ್ದಾಳೆ ಎಂದ ಮೇಲೆ ಆಕೆ ಎಲ್ಲಿದ್ದಾಳೆ? ನನ್ನ ತಂಗಿಯ ನಾಪತ್ತೆ ಹಿಂದೆ ಸುಜಾತಭಟ್ ಇರಬಹುದೇ ? ಎನ್ನುವ ಪ್ರಷೆಗಗಳನ್ನು ಇದೀಗ ವಾಸಂತಿ ಸಹೋದರ ಹಾಕಿದ್ದಾರೆ. ಧರ್ಮಸ್ಥಳದ ಪ್ರಕರಣದಲ್ಲಿ ಅನನ್ಯ ಭಟ್ ಫೋಟೊ ಎಂದು ಹೇಳಿಕೊಂಡು ಕೊಡಗು ಮೂಲಕ ವಾಸಂತಿ ಫೋಟೊವನ್ನ ತೋರಿಸಲಾಗಿತ್ತು. ಇದು ಕೊಡಗು ಮೂಲದ ವಾಸಂತಿ ಎಂದು ಸಹೋದರ ವಿಜಯ್ ಸ್ಪಷ್ಟೀಕರಣ ನೀಡಿದ್ದರು. ಅಲ್ಲದೆ ತನ್ನ ಸಹೋದರಿ ವಾಸಂತಿ ಈಗಾಲೇ ಸತ್ತು ಹೋಗಿರುವುದಗಿಯೂ ಹೇಳಿದ್ದರು. ಇಲ್ಲಿಗೆ ಈ ಕತೆ ಮುಗಿದು ಹೋಗಿತ್ತು. ಆದರೆ ಇದೀಗ ಸುಜಾತ ಭಟ್, ವಾಸಂತಿ ಶ್ರಿವಾತ್ಸವ್ ಇನ್ನೂ ಬದುಕಿದ್ದಾರೆಂದು ಹೇಳುವ ಮೂಲಕ ಮತ್ತೆ ಗೊಂದಲಕ್ಕಿಡುಮಾಡುವ ಹೇಳಿಕೆ ನೀಡಿದ್ದಾರೆ. ಈ ವಿಚಾರ ತಿಳಿಯುತಿದಂತೆ ವಾಸಂತಿ ಸಹೋದರ ಈ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಮಧ್ಯಾಹ್ನ ಧರ್ಮಸ್ಥಳದಲ್ಲಿ ಕೇಸರಿ ಪಡೆ ಸಮಾವೇಶ
ಸದ್ಯ ವಾಸಂತಿ ಬದುಕಿದಾಳೆಂಬ ಸುಜಾತ ಭಟ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಾಸಂತಿ ಸಹೋದರ ವಿಜಯ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಸುಜಾತ ಭಟ್ ಮೇಲೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ಸುಜಾತ ಭಟ್ ಹೇಳಿದಂತೆ ನನ್ನ ತಂಗಿ ವಾಸಂತಿ ಬದುಕಿದ್ದೇ ಆಗಿದ್ದಲ್ಲಿ ಪತ್ತೆ ಹಚ್ಚಿ ಕೊಡುವಂತೆ ವಾಸಂತಿ ಸಹೋದರ ವಿಜಯ್ ಆಗ್ರಹಿಸಿದ್ದಾರೆ. ನನ್ನ ತಂಗಿಯ ಬದುಕಿದ್ದಾರೆ ಅಂದರೆ ಅದು ನನಗೆ ಅತ್ಯಂತ ಖುಷಿಯ ವಿಚಾರ. ಒಂದು ವೇಳೆ ನನ್ನ ತಂಗಿ ಬದುಕಿದ್ದರೆ ಆಕೆ ಯಾಕೆ ಇಷ್ಟು ಸಮಯ ಆದರೂ ಬಂದಿಲ್ಲ. ಹಾಗೋಂದು ವೇಳೆ ಆಕೆ ಬದುಕಿದ್ದರೆ ಆಕೆಯನ್ನು ಗೃಹ ಬಂಧನದಲ್ಲಿ ಇರಿಸಿರುವವರು ಯಾರು ಎಂದು ಸಹೋದರ ವಿಜಯ್ ಪ್ರಶ್ನೆ ಮಾಡಿದ್ದಾರೆ. ನನ್ನ ತಂಗಿ ಬದುಕಿದ್ದಾಳೆ ಎಂದ ಮೇಲೆ ಆಕೆ ಎಲ್ಲಿದ್ದಾಳೆ. ಶವ ದೊರೆತಾಗ ದೊರೆತ ವಸಂತಿ ಬಟ್ಟೆ ಅದರಲ್ಲಿ ಇದ್ದದ್ದು ಹೇಗೆ ? ಎನ್ನುವ ಸಾಲು ಸಾಲು ಪ್ರಶ್ನೆಹಾಕಿದ್ದಾರೆ. ನನ್ನ ತಂಗಿಯ ನಾಪತ್ತೆ ಹಿಂದೆ ಸುಜಾತಭಟ್ ಇರಬಹುದು ಎಂದು ಶಂಕೆ ಕೂಡ ವ್ಯಕ್ತವಾಗುತ್ತಿದೆ. ಜೊತೆಗೆ ಈ ವಿಚಾರ ಸರ್ಕಾರ ಹಾಗೂ SIT ಸೂಕ್ತ ರೀತಿಯಲ್ಲಿ ತನಿಖೆ ಮಾಡಬೇಕು ಎಲ್ಲಾ ತನಿಖೆಗೂ ನಾನು ಕೂಡ ಸಂಪೂರ್ಣ ಸಹಕಾರ ನೀಡೋದಾಗಿ ವಾಸಂತಿ ಸಹೋದರ ವಿಜಯ್ ಸರ್ಕಾರವನ್ನ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಕಳೆದ ಹಲವು ದಿನಗಳ ಹಿಂದೆ ಸತ್ತು ಹೋಗಿದ್ದಳು ಎನ್ನಲಾದ ವಾಸಂತಿ ಮತ್ತೆ ಬದುಕಿದಾಳೆಂದು ಸುಜಾತ ಭಟ್ ಹೇಳುವ ಮೂಲಕ ಒಂದಷ್ಟು ಅನುಮಾನ ಮೂಡುವಂತೆ ಮಾಡಿದ್ದಾರೆ. ಅನನ್ಯ ಭಟ್ ವಿಚಾರದ ರೀತಿಯಲ್ಲಿಯೇ ವಾಸಂತಿ ವಿಚಾರವನ್ನು ಎಳೆದು ತರುತ್ತಿದ್ದಾರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಹಾಗಾಗಿ ಈಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ಬರಬೇಕೆಂಬುದು ಜನತೆ ಆಗ್ರಹಿಸಿದೆ.