ಧರ್ಮಸ್ಥಳ ಗ್ರಾಮದಲ್ಲಿ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಿರುವ ಎಸ್ಐಟಿಯು ದೂರದಾರನ ಮೂಲಕ ಸ್ಥಳ ಮಹಜರು ಪ್ರಕ್ರಿಯೆ ಇಂದು ಆರಂಭಿಸಿದೆ. ಇದೇ ವೇಳೆ ಏನೆಲ್ಲಾ ಮಾಹಿತಿ ಸಿಕ್ತು? ಇಲ್ಲಿದೆ ಫುಲ್ ಡಿಟೈಲ್ಸ್...

ದಕ್ಷಿಣ ಕನ್ನಡ : ಧರ್ಮಸ್ಥಳ ಸುತ್ತಮುತ್ತ ಅನೇಕ ಮೃತದೇಹಗಳನ್ನು ಹೂಳಲಾಗಿದೆ ಎಂಬ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಅಧಿಕಾರಿಗಳು ಸಾಕ್ಷಿ ದೂರುದಾರನನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟಕ್ಕೆ ಕರೆತಂದು ಇಂದು ಸ್ಥಳದ ಮಹಜರು ನಡೆಸಿದರು.
ಹೀಗಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು. ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಬೀಡು ಬಿಟ್ಟಿತ್ತು. ನೇತ್ರಾವತಿ ಸ್ನಾನಘಟ್ಟದ ಸಮೀಪವೇ ಸ್ಥಳವನ್ನು ಸಾಕ್ಷಿ ದೂರುದಾರ ಗುರುತಿಸಿದ್ದು, ಈ ಸ್ಥಳದಲ್ಲಿ ಭದ್ರತೆಯ ವ್ಯವಸ್ಥೆ ಮಾಡಲಾಗಿತ್ತು.
ನೇತ್ರಾವತಿ ಸೇತುವೆಯ ಬಳಿಯ ಕಾಡಿನೊಳಗೆ ಎಸ್ಐಟಿ ತಂಡ ದೂರುದಾರನನ್ನು ಸಂಪೂರ್ಣ ಕಪ್ಪು ಮುಸುಕಿನ ವಸ್ತ್ರ ಧರಿಸಿ ಕರೆದು ತಂದರು. ಎಸ್ ಐಟಿ ತಂಡದ ಹಿರಿಯ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಫಾರೆನ್ಸಿಕ್ ತಜ್ಞರು ಸಾಥ್ ನೀಡಿದರು. ಶವಗಳನ್ನು ಹೂತ ಜಾಗವನ್ನು ಗುರುತಿಸುವ ಪ್ರಕ್ರಿಯೆ ಭರದಿಂದ ನಡೆಯಿತು.
ಕಳೆದ ಎರಡು ದಿನಗಳಿಂದ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಐಬಿಯಲ್ಲಿ ಎಸ್ಐಟಿ ತಂಡದಿಂದ ದೂರುದಾರನ ವಿಚಾರಣೆ ನಡೆಸಿತು. ಮೊದಲ ದಿನ ಅನುಷಚೇತ್ ನಂತರ ಎರಡನೇ ದಿನ ಎಸ್ ಐಟಿ ತಂಡದ ಮುಖ್ಯಸ್ಥ ಪ್ರಣವ್ ಮೊಹಂತಿಯವರೇ ಮಂಗಳೂರಿಗೆ ಆಗಮಿಸಿ ವಿಚಾರಣೆ ಕೈಗೆತ್ತಿಕೊಂಡಿದ್ದರು.
ಮೊದಲ ದಿನವೇ ದೂರುದಾರ ಸ್ಫೋಟಕ ಮಾಹಿತಿಯನ್ನು ನೀಡಿದ ಹಿನ್ನೆಲೆಯಲ್ಲಿ ಎರಡನೇ ದಿನವಾದ ನಿನ್ನೆ ಸ್ವತಃ ಟೀಮ್ ಮುಖ್ಯಸ್ಥ ಮೊಹಂತಿ ಆಗಮಿಸಿದ್ದರು. ಇದಕ್ಕೆಲ್ಲ ಪುಷ್ಠಿ ನೀಡುವಂತೆ ಇಂದು ಸ್ಥಳ ಮಹಜರು ನಡೆಯಿತು.
ದಟ್ಟ ಅರಣ್ಯದ ಮಧ್ಯೆ ನಡೆಯುತ್ತಿರುವ ಸ್ಥಳ ಪರಿಶೀಲನೆಗೆ ದೂರುದಾರನನ್ನು ಬಿಗಿ ಭದ್ರತೆಯಲ್ಲಿ ಕರೆತರಲಾಯಿತು. ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ದಟ್ಟ ಅರಣ್ಯದ ನಡುವೆ ನೇತ್ರಾವತಿ ಸ್ನಾನಘಟ್ಟದ ಸುತ್ತ ಪರಿಶೀಲನೆ ನಡೆಸಲಾಯಿತು. ಸ್ನಾನಘಟ್ಟದ ಸಮೀಪವೇ ಒಂದು ಸ್ಥಳವನ್ನು ತೋರಿಸಿದ ದೂರುದಾರನ ಆಣತಿಯಂತೆ ಮೃತದೇಹಗಳನ್ನು ಹುಡುಕುವ ಕಾರ್ಯ ನಡೆಯಿತು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.