ಬೆಳಗಾವಿ: ರಾಜ್ಯ ಕಾಂಗ್ರೆಸ್ ವಲಯದಲ್ಲಿ ಸಿಎಂ ಪವರ್ ಶೇರಿಂಗ್ ವಿಚಾರಕ್ಕೆ ಫುಲ್ ಸ್ಟಾಪ್ ಬೀಳೊಲ್ಲಾ ಅನ್ನೋದು ಸ್ಪಷ್ಟವಾಗಿದೆ.ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮತ್ತೆ ಕಿಚ್ಚು ಹಚ್ಚುತ್ತಿರುವ ವಿಚಾರ ಅಂದ್ರೆ ಸಿಎಂ ಪವರ್ ಶೇರಿಂಗ್.. ಬ್ರೇಕ್ ಫಾಸ್ಟ್ ಮೀಟಿಂಗ್ ಮೂಲಕ ಹೈಕಮಾಂಡ್ ಅಂಗಳಕ್ಕೆ ಬಿಟ್ಟು ತಾತ್ಕಾಲಿಕ ಬ್ರೇಕ್ ಹಾಕಲಾಗಿತ್ತು. ಆದರೆ ಸಿಎಂ ಪುತ್ರ ಯತೀಂದ್ರ ಅವರ ಆ ಒಂದು ಹೇಳಿಕೆ ಮತ್ತೆ ಸಂಚಲನ ಮೂಡಿಸಿದೆ.
ರಾಜ್ಯ ಕಾಂಗ್ರೆಸ್ ನಲ್ಲಿ ಕೋಲ್ಡ್ ವಾರ್ ಗೆ ವಿರಾಮ ಬಿದ್ದಿಲ್ಲಾ..ಸಿಎಂ ಪವರ್ ಶೇರಿಂಗ್ ವಿಚಾರಕ್ಕೆ ಸೈಲೆಂಟಾಗಿ ಬಣ ಬಡಿದಾಟದ ಫೈಟ್ ಮತ್ತೆ ಶುರುವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.. ಇನ್ನು ಎರಡುವರೆ ವರ್ಷಗಳ ಕಾಲ ಸಿಎಂ ಅವರೇ ಮುಂದುವರೆಯುತ್ತಾರೆ ಎಂಬ ಹೇಳಿಕೆಯನ್ನ ಕೊಟ್ಟಿದ್ದ, ಡಾ ಯತೀಂದ್ರ ಸಿದ್ದರಾಮಯ್ಯ ಮತ್ತೆ ತಂದೆಯ ಪರ ನಿರಂತರವಾಗಿ ಬ್ಯಾಟ್ ಬೀಸುತ್ತಲೆ ಇದ್ದಾರೆ.ರಾಜ್ಯದಲ್ಲಿ ನಾಯಕತ್ವ ವಿಚಾರದಲ್ಲಿ ಯಾವುದೇ ಜಗಳ ಇಲ್ಲ. ಲೀಡರ್‌ಶೀಪ್ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಕ್ಲೀಯರ್ ಆಗಿ ಹೇಳಿದೆ ಅಂತ ಹೇಳಿ ಮತ್ತೆ ಕೈ ಪಡೆಯಲ್ಲಿ ಕಿಚ್ಚನ್ನ ಹಬ್ಬಿಸಿ, ನನ್ನ ಹೇಳಿಕೆಗೆ ನಾನು ಬದ್ದನಾಗಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ ಯತೀಂದ್ರ ಸಿದ್ದರಾಮಯ್ಯ.
ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣ: ಸಹೋದರಿಯ ಮದುವೆಗೆ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು
ಇನ್ನೂ ಸಿಎಂ ಪುತ್ರ ಯತೀಂದ್ರ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ ಕೊಡಲಿ ಎಂದು ಡಿಸಿಎಂ ಡಿಕೆಶಿ ತಿರುಗೇಟು ನೀಡಿದ್ದಾರೆ..ಲೀಡರ್ ಶಿಪ್ ಬದಲಾವಣೆ ಇಲ್ಲ ಯತೀಂದ್ರ ಸ್ಟೇಟ್ ಮೆಂಟ್ ಬಗ್ಗೆ ಹೆಚ್ಚು ಮಾತಾಡದ ಡಿಸಿಎಂ,ಪ್ರಶ್ನೆ ಕೇಳಿಸಿಕೊಂಡು ಮಾತಾಡದೇ ಡಿಕೆಶಿ ಮೌನವಾಗಿದ್ರು.. ಸಿಎಂ ಬದಲಾವಣೆ ಬಗ್ಗೆ ಮಾತಾಡದಂತೆ ಆಪ್ತರಿಗೂ ಸಂದೇಶ ನೀಡಿದ್ದಾರಂತೆ ಡಿಸಿಎಂ ಡಿಕೆ ಶಿವಕುಮಾರ್
ಯಾವಾಗ ಯತೀಂದ್ರ ಸಿದ್ದರಾಮಯ್ಯ ಅವರು ಸಿಎಂ ಸಿದ್ದರಾಮಯ್ಯ ಪರ ಹೇಳಿಕೆ ಕೊಟ್ರೊ ಮತ್ತೆ ವಾರ್ ಶುರುವಾಗಿದೆ.. ಸಿಎಂ ಡಿಸಿಎಂ ಆಪ್ತರ ನಡುವೆ ಪರೋಕ್ಷವಾಗಿ ವಾರ್ ಶುರುವಾಗಿದೆ. ಎಲ್ಲವನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ, ಹೈಕಮಾಂಡ್ ಏನ್ ಹೇಳುತ್ತೋ ಅದನ್ನ ಫಾಲೋ ಮಾಡ್ತೀವಿ. ಹೈಕಮಾಂಡ್ ತೀರ್ಮಾನಕ್ಕೆ ಬದ್ದ ಅಂತ ಸಿಎಂ ಕೂಡ ಹೇಳಿದ್ದಾರೆ ಯತೀಂದ್ರ ಹೇಳಿದ್ರೆ ಅವರನ್ನೇ ಕೇಳಿ ಎಂದ್ರು ಸಚಿವ ಬೈರತಿ ಸುರೇಶ್
ಮೊದಲಿನಿಂದಲೂ ಡಿಸಿಎಂ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕ ಇಕ್ಬಾಲ್ ಹುಸೇನ್ ಯತೀಂದ್ರ ಹೇಳಿಕೆಗೆ ಕಿಡಿಕಾರಿದ್ದಾರೆ .. ನಾವು ಮಾತಾಡಿದ್ರೆ ನೋಟಿಸ್ ಕೊಡ್ತಾರೆ. ನಾವು ಮಾತಾಡಿದ್ರೆ ಬಲಾತ್ಕಾರ, ಅವರು ಮಾತಾಡಿದ್ರೆ ಚಮತ್ಕಾರ. ನಮ್ಮ ವರಿಷ್ಠರು ಅಷ್ಟು ವೀಕ್ ಇಲ್ಲ ಬಲಿಷ್ಠವಾಗಿದೆ. ಈ ರೀತಿ ಹೇಳಿಕೆ ಕೊಡುವ ಯತೀಂದ್ರ ಅವರ ಹಿಂದೆ ಯಾರಿದ್ದಾರೆ ಗೊತ್ತಿಲ್ಲ ಎಂದು ಅಸಮಧಾನ ಹೊರಹಾಕಿದ್ರು.
ಪವರ್ ಶೇರಿಂಗ್ ವಿಚಾರದಿಂದ ಪಕ್ಷಕ್ಕೆ ಡ್ಯಾಮೇಜ್ ಆಗ್ತಿದೆ ಅಂತ ಸಚಿವ ಸತೀಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ.. ಯತೀಂದ್ರ ಅವರ ಹೇಳಿಕೆ ಬಗ್ಗೆ ಚರ್ಚೆ ಮಾಡ್ತಿವಿ.. ಅವರ ಹಿಂದೆ ಯಾರಿದ್ದಾರೆ ಅಂತಾ ಹೇಗೆ ಹೇಳೋದು. ಏನೇ ಆದರೂ ಹೈ ಕಮಾಂಡ್ ನೋಡಿಕೊಳ್ಳುತ್ತೆ ಕಾಯೋಣ ಅಷ್ಟೇ ಅಂತ ಮಾಹಿತಿ ನೀಡಿದ್ರು
ಹೈಕಮಾಂಡ್ ಗೆರೆ ಹಾಕಿದ್ರೆ, ಆ ಗೆರೆಯನ್ನ ನಾವು ದಾಟಲ್ಲ ಅಂತ ಮತ್ತೆ ಸ್ಪಷ್ಟನೆ ನೀಡಿದ್ದಾರೆ ಸಚಿವ ಜಮೀರ್ ಅಹಮ್ಮದ್, ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆ.ನಾವಾಗಲಿ ಯತೀಂದ್ರ ಅವರಾಗಲಿ ಬದಲಾವಣೆ ಮಾಡೋಕೆ ಆಗಲ್ಲ, ಬದಲಾವಣೆ ಮಾಡಬೇಕಾಗಿರೋದು ಹೈಕಮಾಂಡ್ ಅಂತ ಪರೋಕ್ಷವಾಗಿ ಸಿಎಂ ಪರ ಬ್ಯಾಟಿಂಗ್ ಮಾಡಿದ್ರು..ಇನ್ನೂ ಇಷ್ಟೆಲ್ಲಾ ಹೇಳಿಕೆಗಳ ವಾರ್ ನಡೆಯುತ್ತಿದ್ರು ಸಿಎಂ ಮಾತ್ರ ಕೂಲಾಗಿ ಹೈಕಮಾಂಡ್ ಏನು ಡಿಸಿಶನ್ ತಗೆದುಕೊಳ್ಳುತ್ತದೆ ಅದೇ ಅಂತಿಮ ಎಂದ್ರು.
ಇದನ್ನೂ ಓದಿ: ಬಹ್ರೈಚ್ ಹಿಂಸಾಚಾರ: ಸರ್ಫ್ರಾಜ್‌ಗೆ ಮರಣದಂಡನೆ, 9 ಜನರಿಗೆ ಜೀವಾವಧಿ ಶಿಕ್ಷೆ
ಇಷ್ಟೆಲ್ಲಾ ಹೇಳಿಕೆಗಳು ಜಟಾಪಟಿ ನಡುವೆಯು ಸುವರ್ಣಸೌದದಿಂದ ಒಂದೇ ಕಾರಿನಲ್ಲಿ ಹೊರಟ್ರು ಸಿಎಂ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ. ಈ ನಡುವೆ ಬೆಳಗಾವಿಯ ಸರ್ಕ್ಯೂಟ್ ಹೌಸ್ ನಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್ ಸಿ ಮಹದೇವಪ್ಪ ಅವರನ್ನ ಕರೆಸುಕೊಂಡು ಯತೀಂದ್ರ ಅವರಿಗೆ ಬುಲಾವ್ ಮಾಡಿ ಮಾತುಕತೆ ನಡೆಸಿದ್ದು, ಬಳಿಕ ಮತ್ತೆ ಸುವರ್ಣಸೌದಕ್ಕೆ ಜೊತೆಯಲ್ಲೇ ಆಗಮಿಸಿದ್ದು ಡಿಸಿಎಂ ಡಿಕೆಶಿ ಬಣಕ್ಕೆ ಈ ಮೂಲಕ ಸಾಕಷ್ಟು ಸಂದೇಶ ರವಾನಿಸಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ಒಟ್ನಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಮತ್ತೆ ತಮ್ಮ ತಂದೆಯ ಪರ ಮಾತನಾಡಿದ್ದು ಕೈ ಪಡೆಯಲ್ಲಿ ಕಿಚ್ಚು ಹಚ್ಚಿಕೊಂಡಿದೆ.ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರು ಅಸಮಧಾನ ಹೊರಹಾಕ್ತಿದ್ರೆ, ಇದಕ್ಕೆಲ್ಲಾ ಫುಲ್ ಸ್ಟಾಪ್ ಹಾಕೋದು ಯಾವಾಗ ಅನ್ನೋದು ತಟಸ್ಥ ಬಣದ ಚಡಪಡಿಕೆಯಾಗಿದೆ.ಇದಕ್ಕೆ ಹೈಕಮಾಂಡ್ ಯಾವಾಗ ಎಂಟ್ರಿ ಆಗುತ್ತೆ ಸಿಎಂ ಪವರ್ ಶೇರಿಂಗ್ ವಿಚಾರಕ್ಕೆ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.









