ಆಪ್ತ ಸಮಾಲೋಚಕರ ಹುದ್ದೆ ನೇಮಕಕ್ಕೆ ಇಲ್ಲಿದೆ ನೇರ ಅವಕಾಶ

ರಾಷ್ಟ್ರೀಯ ಮಾನಸಿಕ ಆರೋಗ್ಯಕಾರ್ಯಕ್ರಮದಡಿಯಲ್ಲಿ 1 ಆಪ್ತ ಸಮಾಲೋಚಕರನ್ನು 2020-21 ನೇ ಸಾಲಿಗೆ ಆಪ್ತ ಸಮಾಲೋಚಕರಾಗಿ ಕಾಲೇಜು, ಕಾರ್ಖಾನೆ ಮತ್ತು ನಗರ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಒಂದು ದಿನದ ಭೇಟಿಗೆ 1000 ರೂ. ರಂತೆ ತಿಂಗಳಿಗೆ 10 ಭೇಟಿಯಂತೆ ಗೌರವ ಧನ ನೀಡಲಾಗುವುದು.

Last Updated : Jul 8, 2020, 07:27 PM IST
ಆಪ್ತ ಸಮಾಲೋಚಕರ ಹುದ್ದೆ ನೇಮಕಕ್ಕೆ ಇಲ್ಲಿದೆ ನೇರ ಅವಕಾಶ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಷ್ಟ್ರೀಯ ಮಾನಸಿಕ ಆರೋಗ್ಯಕಾರ್ಯಕ್ರಮದಡಿಯಲ್ಲಿ 1 ಆಪ್ತ ಸಮಾಲೋಚಕರನ್ನು 2020-21 ನೇ ಸಾಲಿಗೆ ಆಪ್ತ ಸಮಾಲೋಚಕರಾಗಿ ಕಾಲೇಜು, ಕಾರ್ಖಾನೆ ಮತ್ತು ನಗರ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಒಂದು ದಿನದ ಭೇಟಿಗೆ 1000 ರೂ. ರಂತೆ ತಿಂಗಳಿಗೆ 10 ಭೇಟಿಯಂತೆ ಗೌರವ ಧನ ನೀಡಲಾಗುವುದು.

ಆಸಕ್ತಿಯುಳ್ಳ ಅಭ್ಯರ್ಥಿಗಳು ಜುಲೈ 14 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಕೆ.ಎನ್.ಟಿ.ಬಿ. ಸ್ಯಾನಿಟೋರಿಯಂ ಆಸ್ಪತ್ರೆ ಆವರಣ, ಬಂಗಾರಪೇಟೆ ರಸ್ತೆ, ಕೋಲಾರ. ಇಲ್ಲಿಗೆ ತಮ್ಮ ಮೂಲ ದಾಖಲೆಗಳು ಮತ್ತು 1 ಸೆಟ್‍ಜೆರಾಕ್ಸ್ ಪ್ರತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಸಂದರ್ಶನ ದಿನದಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 2.00 ಗಂಟೆಯೊಳಗಾಗಿ ಸಂದರ್ಶನ ಸ್ಥಳದಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಎಂ.ಎಸ್ಸಿ ಇನ್ ಸೈಕಾಲಜಿ ಪದವಿದರರಿಗೆ ಹಾಗೂ ಸ್ಥಳೀಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಈ ಅಭ್ಯರ್ಥಿಗಳು ಬಾರದ ಪಕ್ಷದಲ್ಲಿ ಎಂ.ಎಸ್.ಡಬ್ಲ್ಯೂ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು ಎಂದು ಕೋಲಾರ ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

Trending News