)
ಮಂಡ್ಯ : ಜಾಗದ ವಿಚಾರಕ್ಕೆ ಪಕ್ಕದ ಮನೆಯವರಿಗೆ ಯುವಕನೊರ್ವ ಮನಸೋ ಇಚ್ಚೆ ಥಳಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಯುವಕ ಹಲ್ಲೆ ನಡೆಸುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ವಿಡಿಯೋ ನೋಡಿದ ಜನ ಯುವಕನ ರೌದ್ರಾವತಾರವನ್ನು ಕಂಡು ಬೆಚ್ಚಿ ಬಿದ್ದಿದ್ದರೆ. ಈ ಯುವಕನ ವರ್ತನೆಗೆ ಕೆಂಡಾ ಮಂಡಲವಾಗಿದ್ದಾರೆ.
ಈ ಘಟನೆ ನಡೆದಿರುವುದು ಮಂಡ್ಯ ಜಿಲ್ಲೆಯ ಮಳವಳ್ಳಿಯ ನೆಲ್ಲೂರು ಗ್ರಾಮದಲ್ಲಿ. ಗ್ರಾಮದ ಯುವಕ ಚಂದನ್ ತಮ್ಮ ಪಕ್ಕದ ಮನೆಯ ಲಕ್ಷ್ಮಮ್ಮ, ರತ್ನಮ್ಮ ಹಾಗೂ ಸಾಕಮ್ಮ ಎಂಬುವವರಿಗೆ ಜಾಗದ ವಿಚಾರಕ್ಕೆ ಕೈಗೆ ಸಿಕ್ಕ ಕಟ್ಟಿಗೆ ಹಿಡಿದು ಹಲ್ಲೆ ನಡೆಸಿದ್ದಾನೆ.
ಯುವಕ ಚಂದನ್ ಹಾಗೂ ರತ್ನಮ್ಮ ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಮನೆಯ ಪಕ್ಕದ ಖಾಲಿ ಜಾಗದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಕಲಹ ಏರ್ಪಟ್ಟಿದೆ. ಇದೇ ವಿಚಾರವಾಗಿ ಮೊನ್ನೆ 23ನೇ ತಾರೀಕು ರತ್ನಮ್ಮಳಿಗೆ ಸೇರಿದ ಜಾಗದಲ್ಲಿ ಚಂದನ್ ಮನೆಯವರು ಚಪ್ಪರ ಹಾಕಲು ಮುಂದಾಗಿದ್ದರಂತೆ. ಈ ವೇಳೆ ರತ್ನಮ್ಮ ಅದನ್ನ ಪ್ರಶ್ನಿಸುತ್ತಿದ್ದಂತೆ ರೊಚ್ಚಿಗೆದ್ದ ಚಂದನ್ ರತ್ನಮ್ಮಳಿಗೆ ಹಲ್ಲೆ ಮಾಡಿದ್ದಾನೆ. ನಂತರ ಇದನ್ನು ಪ್ರಶ್ನೆ ಮಾಡಲು ಬಂದ ಲಕ್ಷ್ಮಮ್ಮ, ಸಾಕಮ್ಮಳಿಗೂ ಮನಸೋ ಇಚ್ಚೆ ಥಳಿಸಿದ್ದಾನೆ.
ಇನ್ನು ಹಲ್ಲೆಯಿಂದ ಮೂವರಿಗೂ ಗಂಭೀರ ಗಾಯಗಳಾಗಿದೆ. ಹೀಗಾಗಿ ಮೂವರಿಗೂ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈಗ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈ ಬಗ್ಗೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಚಂದನ್ಗಾಗಿ ಶೋಧಕಾರ್ಯ ನಡೆಸಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.