)
ಬೆಂಗಳೂರು : ಆರ್ಎಸ್ಎಸ್ ಬಗ್ಗೆ ಡಿ.ಕೆ ಶಿವಕುಮಾರ್ ಸಾಫ್ಟ್ ಕಾರ್ನರ್ ತೋರುತ್ತಿದ್ದಾರೆಂದು ಕಾಂಗ್ರೆಸ್ ಪಡಸಾಲೆಯಲ್ಲಿ ಚರ್ಚೆ ನಡೆಯುತ್ತಿದೆ. ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ಹೇರಿದೆ. ನಿರ್ಬಂಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಕೆಲ ಸಚಿವರು ಸಮರ್ಥನೆ ಮಾಡಿಕೊಳ್ತಿದ್ದಾರೆ. ಆರ್ಎಸ್ಎಸ್ ಸಂವಿಧಾನ ವಿರೋದ್ದವಾಗಿದೆ. ಕೋಮು ಭಾವನೆ ಬಿತ್ತುತ್ತಿದೆ. ಅದೊಂದು ಮನುಸ್ಮೃತಿ ಪಾಲಿಸಿವ ಸಂಘ ಅಂತಾ ಕಿಡಿ ಕಾರುತ್ತಿದ್ದಾರೆ.
ಆದ್ರೆ ಡಿಸಿಎಂ ಡಿ.ಕೆ ಶಿವಕುಮಾರ್ ಮಾತ್ರ, ಇತರೆ ಸಚಿವರ ರೀತಿ ಗಟ್ಟಿಯಾಗಿ ಸಮರ್ಥಿಸಿಕೊಳ್ಳುತ್ತಿಲ್ಲ. ಆರ್ಎಸ್ಎಸ್ ಬಗ್ಗೆ ವಕ್ತಾರರು ಮಾತಾಡ್ತಾರೆ ಎಂದು ಸುಮ್ಮನಾಗ್ತಿದ್ದಾರೆ. ಇದು ಅಚ್ಚರಿಗೂ ಕಾರಣವಾಗಿದೆ. ಭವಿಷ್ಯದ ದೃಷ್ಟಿಯಿಂದ ಡಿ.ಕೆ ಶಿವ ಕುಮಾರ್ ಎಚ್ಚರಿಕೆ ನಡೆ ಅನುಸರಿಸ್ತಿದ್ದಾರಾ ಅನ್ನೋ ಪ್ರಶ್ನೆಯೂ ಕಾಡ್ತಿದೆ.
ಇದನ್ನೂ ಓದಿ:ಡಿಕೆಶಿಯನ್ನ ಭೇಟಿಯಾದ ಕಿರಣ್ ಮಜುಂದಾರ್ ಶಾ
ನವೆಂಬರ್ ಕ್ರಾಂತಿ ಗೂ ಡಿಕೆಶಿ ಮೌನಕ್ಕೂ ಏನಾದ್ರೂ ಲಿಂಕ್ ಇದ್ಯಾ ಅನ್ನಿಸ್ತಿದೆ. ಯಾಕಂದ್ರೆ ಪವರ್ ಶೇರಿಂಗ್ ವಿಚಾರದಲ್ಲಿ ಹೈಕಮಾಂಡ್ ವಿರುದ್ದವೇ ಡಿ.ಕೆ ಶಿವಕುಮಾರ್ ಮುನಿಸಿ ಕೊಂಡಿದ್ದಾರೆ. ಅಧಿಕಾರ ಹಂಚಿಕೆ ಒಪ್ಪಂದದಂತೆ ಡಿಕೆಶಿಗೆ ಸಿಎಂ ಕುರ್ಚಿ ಬಿಟ್ಟುಕೊಡದಿದ್ರೆ, ಅವ್ರ ರಾಜಕೀಯ ನಡೆಯೇ ಬೇರೆಯದ್ದಾಗಿರುತ್ತೆ ಅಂತಾ ಚರ್ಚೆಗಳು ನಡೀತಿವೆ. ಈ ಮಧ್ಯೆ ಬಿಜೆಪಿಯಿಂದ ಡಿಸಿಎಂ ಆಫರ್ ಬಂದಿತ್ತು ಅಂತಾ ಡಿ.ಕೆ ಶಿವಕುಮಾರ್ ಬಾಂಬ್ ಹಾಕಿದ್ರು.
ನವೆಂಬರ್ ಕ್ರಾಂತಿ ಸದ್ದಿನ ವೇಳೆ ಡಿ.ಕೆ ಶಿವಕುಮಾರ್ ಹೇಳಿಕೆ ನಾನಾ ಚರ್ಚೆ ಹುಟ್ಟು ಹಾಕಿತ್ತು. ಈ ಹಿಂದೆ ಅಮಿತ್ ಶಾ ಜೊತೆ ವೇದಿಕೆ ಹಂಚಿ ಕೊಂಡು ಬಿಜೆಪಿಗೆ ಹತ್ತಿರವಾಗ್ತಿದ್ದಾರೆ ಎನ್ನಲಾಗ್ತಿತ್ತು. ಸದನದಲ್ಲೇ ಆರ್ಎಸ್ಎಸ್ ಗೀತೆ ಹೇಳಿ, ತಮ್ಮ ಪಕ್ಷದವ್ರನ್ನೇ ಪೇಚಿಗೆ ಸಿಲುಕಿಸಿದ್ರು. ಎಲ್ಲೋ ಒಂದು ಕಡೆ ಆರ್ಎಸ್ಎಸ್ ಬಗ್ಗೆ ಡಿಕೆಶಿ ಸಾಫ್ಟ್ ಕಾರ್ನರ್ ತೋರಿಸುತ್ತಾ, ಹೈಕಮಾಂಡ್ಗೂ ಸಂದೇಶ ಕೊಡ್ತಿದ್ದಾರೆ ಅನಿಸುತ್ತಿದೆ. ಹೀಗಾಗಿಯೇ ಡಿ.ಕೆ ಶಿವಕುಮಾರ್ ಆರ್ಎಸ್ಎಸ್ ವಿಚಾರದಲ್ಲಿ ಸೈಲೆಂಟ್ ಆಗಿಬಿಟ್ಟಿದ್ದಾರಾ.? ಸಿಎಂ ಕುರ್ಚಿ ಸಿಗದಿದ್ರೆ ಬಿಜೆಪಿ ಕಡೆ ಮುಖ ಮಾಡ್ತಾರಾ.? ಹೀಗೆ ನಾನಾ ಪ್ರಶ್ನೆಗಳು ಡಿ.ಕೆ ಶಿವ ಕುಮಾರ್ ನಡೆಯಿಂದ ಹುಟ್ಟಿಕೊಂಡಿವೆ.
ಇನ್ನು ರಾಜ್ಯ ಕಾಂಗ್ರೆಸ್ನಲ್ಲಿ ನವೆಂಬರ್ ಕ್ರಾಂತಿ ನೆಪದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ ಟೆಂಪಲ್ ರನ್ ಶುರು ಮಾಡಿದ್ದಾರೆ. ನಾಳೆ ಮಂತ್ರಾಲಯಕ್ಕೆ ಭೇಟಿ ನೀಡಲಿದ್ದಾರೆ. ಇಂದು ರಾತ್ರಿ ಉದ್ಯಾನ್ ಎಕ್ಸ್ ಪ್ರೆಸ್ನಲ್ಲಿ ಮಂತ್ರಾಲಯಕ್ಕೆ ಹೋಗಿ, ನಾಳೆ ಬೆಳಿಗ್ಗೆ ಗುರು ರಾಘವೇಂದ್ರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಬಳಿಕ ರಾಯಚೂರಿನ ಬಿಚ್ಚಾಲೆ ಗ್ರಾಮದೇವತೆ ಮಂಚಾಲಮ್ಮಗೂ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ತದನಂತ್ರ ನಾಳೆ ಬೆಳಿಗ್ಗೆ 11 ಗಂಟೆಗೆ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಪ್ರಯತ್ನ ಕ್ಕಿಂತ ಪ್ರಾರ್ಥನೆ ಫಲಿಸುತ್ತೆ ಎಂದು ಡಿ.ಕೆ ಶಿವಕುಮಾರ್ ಇತ್ತೀಚೆಗೆ ದೊಡ್ಡ ದೊಡ್ಡ ದೇವಸ್ಥಾನಗಳನ್ನ ಸುತ್ತುತ್ತಿದ್ದಾರೆ. ಹೈಕಮಾಂಡ್ಗೂ ನಿಯತ್ತಾಗಿದ್ದುಕೊಂಡು, ದೇವರ ಅನುಗ್ರಹ ಪಡೆಯೋದಕ್ಕೂ ಮುಂದಾಗಿದ್ದಾರೆ.
ಒಟ್ನಲ್ಲಿ ನವೆಂಬರ್ ತಿಂಗಳಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂದು ಡಿಕೆ ಟೀಂ ಎದುರು ನೋಡ್ತಿದೆ.. ಆದ್ರೆ ಸಿದ್ದರಾಮಯ್ಯ ಕುರ್ಚಿ ಬಿಟ್ಟುಕೊಡುವ ಯಾವ ಲಕ್ಷಣಗಳು ಕಾಣ್ತಿಲ್ಲ. ಹೀಗಾಗಿಯೇ ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಆರ್ಎಸ್ಎಸ್ ವಿಚಾರದಲ್ಲಿ ಡಿಸಿಎಂ ಎಚ್ಚರಿಕೆ ನಡೆ ಅನುಸರಿಸ್ತಿದ್ದಾರೆ ಎನ್ನಲಾಗ್ತಿದೆ.