ಕಾರು ಡಿವೈಡರ್'ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರಲ್ಲಿ ಒಬ್ಬನಿಗೆ ಗಂಭೀರ ಗಾಯಗಳಾಗಿರುವ ಘಟನೆ ಗದಗ ಹೊರವಲಯದ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ನಡೆದಿದೆ.

Road Accident: ಚಾಲಕನ ನಿಯಂತ್ರಣ ತಪ್ಪಿ ಕಾರ್ ಡಿವೈಡರ್ ಗೆ ಗುದ್ದಿದ ಪರಿಣಾಮ ನಾಲ್ವರಿಗೆ ಗಂಭೀರ ಗಾಯವಾದ ಘಟನೆ ಗದಗನಲ್ಲಿ ನಡೆದಿದೆ. ಗದಗ ಹೊರವಲಯದ ಕಳಸಾಪೂರ ಬಳಿ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಘಟನೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿದ ಪರಿಣಾಮ ಕಾರ್ ಚಾಲಕನ ಕಾಲಿಗೆ ಗಂಭೀರ ಗಾಯವಾಗಿದೆ. ಈತನನ್ನು 27 ವರ್ಷದ ಗೋವರ್ಧನ ಎಂದು ಗುರುತಿಸಲಾಗಿದೆ. 22 ವರ್ಷದ ರೋಜಾ ಸುರೇಶ್, 27 ವರ್ಷದ ಹನುಮಂತು ಹಾಗೂ 26 ವರ್ಷದ ಶಿವಶಂಕರ್ ಎಂಬುಬರಿಗೆ ಗಾಯಗಳಾಗಿವೆ.
ಕಾರ್ ನ ಏರ್ ಬ್ಯಾಗ್ ಓಪನ್ ಆದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಚಾಲಕನ ನಿದ್ರೆಯ ಮಂಪರಿನಲ್ಲಿ ಅತಿಯಾದ ವೇಗ ಹಾಗೂ ಅಜಾಗರೂಕತೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ತೆಲಂಗಾಣ ರಾಜ್ಯದ TS-07 GS-6776 ನಂಬರಿನ ಕಾರು ಇದಾಗಿದೆ. ಕಾರ್ ಮುಂದಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಹೈದರಾಬಾದ್ ನಿಂದ ಗೋಕರ್ಣ ಕಡೆ ತೆರಳುತ್ತಿದ್ದು, ಈ ಕಾರ್ ನಲ್ಲಿ ಒಟ್ಟು ಐದು ಜನ ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.