ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಳ್ಳಂಬೆಳಗ್ಗೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಉದ್ಯಮಿಗಳ ಮನೆ, ಕಚೇರಿ ಹಾಗೂ ಅಂಗಡಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಹೊಸಪೇಟೆ ತಾಲೂಕಿನಲ್ಲಿ ಸ್ವಸ್ತಿಕ ನಾಗರಾಜ್ ಮತ್ತು ಖಾರದಪುಡಿ ಮಹೇಶ್ ಅವರ ಮನೆ, ಕಚೇರಿ ಹಾಗೂ ಅಂಗಡಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ . ಅಕ್ರಮ ಗಣಿಗಾರಿಗೆ ಸಂಬಂಧಪಟ್ಟಂತೆ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ನಗರದ ಎಂ ಜಿ ರಸ್ತೆಯಲ್ಲಿ ಇರುವ ಗಣಿ ಉದ್ಯಮಿ ಸ್ವಸ್ತಿಕ ನಾಗರಾಜ್ ನಿವಾಸ ಎಂಪಿಎಂಸಿ ಬಳಿ ಇರುವ ಕಚೇರಿ ಮತ್ತು ಸ್ಟೀಲ್ ಅಂಗಡಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಅದರಂತೆ ಮತ್ತೊಬ್ಬ ಉದ್ಯಮಿ ಹಾಗೂ ನಗರಸಭೆಯ 20ನೇ ವಾರ್ಡ್ ನ ಸದಸ್ಯರಾದ ಕಾಂಗ್ರೆಸ್ ಮುಖಂಡ ಖಾರದಪುಡಿ ಮಹೇಶ್ ಅವರಿಗೆ ಜೆಪಿ ನಗರಲ್ಲೂ ಅವರ ನಿವಾಸವಿದ್ದು, ಮನೆ, ಕಚೇರಿ ಮತ್ತು ಸ್ಟೀಲ್ ಅಂಗಡಿ ಸೇರದಂತೆ ಮೂರು ಕಡೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಗಣಿಗಾರಿಕೆ ಪ್ರಕರಣದಲ್ಲಿ ಉದ್ಯಮಿಗಳ ಹೆಸರು ಮೆಲುಕು ಹಾಕಿದ್ದ ಬೆನ್ನಲ್ಲೇ, ನಗರದಲ್ಲಿ ಬೆಳ್ಳಬೆಳಗ್ಗೆ ಸುಮಾರು ಐದು ಗಂಟೆ ವೇಳೆ ಇಡಿ ಅಧಿಕಾರಿಗಳು ಇಬ್ಬರು ಉದ್ಯಮಿಗಳ ಮನೆ ಕಚೇರಿ ಹಾಗೂ ಸ್ಟೀಲ್ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಎರಡು ಇನ್ವೋ ಕಾರಿನಲ್ಲಿ ಆರು ಜನ ಅಧಿಕಾರಿಗಳು ಆಗಮಿಸಿದ್ದು ಏಕಕಾಲಕ್ಕೆ ಎರಡು ಕಡೆ ದಾಳಿ ನಡೆಸಿದ್ದಾರೆ.
ಈ ಹಿಂದೆ ಜನಾರ್ಧನ ರೆಡ್ಡಿ ಆಪ್ತ ಅಲಿಖಾನ್ ಅವರ ಜೊತೆ ಗುರುತಿಸಿಕೊಂಡಿದ್ದರು ಕಾಂಗ್ರೆಸ್ ಮುಖಂಡ ಖಾರದ ಪುಡಿ ಮಹೇಶ್ ಮತ್ತು ಉದ್ಯಮಿ ಸ್ವಸ್ತಿಕ್ ನಾಗರಾಜ್. ಬೆಲೆಕೇರಿ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿಯೂ ಇಬ್ಬರು ಹೆಸರು ಕೇಳಿ ಬಂದಿತ್ತು.
ಇದನ್ನೂ ಓದಿ : ಸ್ಮಾರ್ಟ್ ಮೀಟರ್ ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್