ಸದ್ಯಕ್ಕಿಲ್ಲ ಶಾಲಾ-ಕಾಲೇಜುಗಳ ಆರಂಭ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

ಶಾಲಾ‌-ಕಾಲೇಜು‌ಗಳ ಪ್ರಾರಂಭದ ಬಗ್ಗೆ ಎದ್ದಿರುವ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ತಮ್ಮ ಫೇಸ್‌ಬುಕ್ (Facebook) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ  ಸುರೇಶ್ ಕುಮಾರ್

Yashaswini V Yashaswini V | Updated: Sep 29, 2020 , 10:42 AM IST
ಸದ್ಯಕ್ಕಿಲ್ಲ ಶಾಲಾ-ಕಾಲೇಜುಗಳ ಆರಂಭ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

ಬೆಂಗಳೂರು: ಕೋವಿಡ್ -19 (COVID-19) ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲಾ‌-ಕಾಲೇಜು‌ಗಳನ್ನು ಪ್ರಾರಂಭ ಇಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ (S Suresh Kumar) ಸ್ಪಷ್ಟಪಡಿಸಿದ್ದಾರೆ. 

ಶಾಲಾ‌-ಕಾಲೇಜು‌ಗಳ ಪ್ರಾರಂಭದ ಬಗ್ಗೆ ಎದ್ದಿರುವ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ತಮ್ಮ ಫೇಸ್‌ಬುಕ್ (Facebook) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ  ಸುರೇಶ್ ಕುಮಾರ್, ಶಾಲಾ‌-ಕಾಲೇಜು‌ಗಳನ್ನು ಪ್ರಾರಂಭಿಸುವ ಬಗ್ಗೆ  ಶಿಕ್ಷಣ ತಜ್ಞರು, ಶಿಕ್ಷಣ ಸಂಘಟನೆಗಳ ಮುಖ್ಯಸ್ಥರು, ಶಾಸಕರು ಹಾಗೂ ಸಂಸದರ‌ ಅಭಿಪ್ರಾಯ ಪಡೆಯಲಾಗುವುದು. ಅವರೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.

ಈ ರಾಜ್ಯಗಳಲ್ಲಿ ಇಂದಿನಿಂದ ಕೇಳಲಿದೆ ಶಾಲೆಯ 'ಗಂಟೆ' ಸದ್ದು, ಮಕ್ಕಳನ್ನು ಕಳುಹಿಸುವ ಮುನ್ನ ಇದನ್ನು ಓದಿ

ಶಾಲಾ-ಕಾಲೇಜು‌ಗಳನ್ನು ಪ್ರಾರಂಭ ಮಾಡುವ ದಿನಾಂಕದ‌ ಬಗ್ಗೆ ನಿರ್ಧಾರ ಮಾಡಿಲ್ಲ. ಆದರೆ ಕೋವಿಡ್ -19 (COVID-19)   ಸೋಂಕು ಹೆಚ್ಚಳದ ನಡುವೆ ಶಾಲಾ (Schools)-ಕಾಲೇಜು‌ಗಳನ್ನು ಹೇಗೆ ಆರಂಭಿಸಬೇಕೆಂಬ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಸುರೇಶ್‌ಕುಮಾರ್ ಫೇಸ್‌ಬುಕ್ ನಲ್ಲಿ‌ ಸ್ಪಷ್ಟನೆ ನೀಡಿದ್ದಾರೆ.

ಶಾಲೆಗಳನ್ನು ತೆರೆಯಲು ನಿರ್ಧರಿಸಿದೆಯೇ ಸರ್ಕಾರ ? ಇಲ್ಲಿದೆ ಮಹತ್ವದ ಮಾಹಿತಿ