)
ಜಮೀನಿನ ತುಂಬ ಮೂಡಿರುವ ದಪ್ಪ ದಪ್ಪನೆಯ ಹೆಜ್ಜೆ ಗುರುತು, ಪೀಸ್ ಪೀಸ್ ಆಗಿ ಬಿದ್ದಿರುವ ಟೊಮ್ಯಾಟೋ ಗಿಡಕ್ಕೆ ಕಟ್ಟಿದ್ದ ಕೋಲು, ಇದ್ದಕ್ಕಿದ್ದಂತೆ ಆಳೆತ್ತರಕ್ಕೆ ಬೆಳೆದಿದ್ದ ತೆಂಗು ಧರಾಶಾಹಿಯಾಗಿರುವುದು. ಕಟಾವಿಗೆ ಬಂದಿದ್ದ ಬೀನ್ಸ್ ಸಂಪೂರ್ಣವಾಗಿ ನಾಶವಾಗಿರುವುದು ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಗಡಿ ನಾಡು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಆಲತ್ತೂರು ಗ್ರಾಮದಲ್ಲಿ.
ಕಳೆದು ಒಂದೂವರೆ ತಿಂಗಳಿಂದ ಕಾಡಾನೆ ಉಪಟಳಕ್ಕೆ ಬ್ರೇಕ್ ಬಿದ್ದಿತ್ತು. ಹುಲಿ ಹಾಗೂ ಚಿರತೆ ಉಪಟಳ ಹಿನ್ನಲೆ ಅರಣ್ಯ ಅಧಿಕಾರಿಗಳು ಕೂಂಬಿಂಗ್ ನಲ್ಲಿದ್ರು ಹಾಗಾಗಿ ಕಾಡಾನೆ ಉಪಟಳಕ್ಕೆ ಬ್ರೇಕ್ ಬಿದ್ದಿದ್ದು. ಈಗ ಹುಲಿಗಳ ಕೂಂಬಿಂಗ್ ಕಾರ್ಯ ಅಂತ್ಯವಾಗಿದೆ. ಅರಣ್ಯಾಧಿಕಾರಿಗಳು ತಮ್ಮ ಕಾರ್ಯ ಸ್ಥಾನಕ್ಕೆ ಹಿಂತಿರುಗಿದರು. ಈಗ ಮತ್ತೆ ಕಾಡಾನೆ ಉಪಟಳ ಹೆಚ್ಚಾಗಿದ್ದು ಸಾಲ ಸೂಲ ಮಾಡಿ ಬೆಳೆದ ತರಕಾರಿ ಬೆಳೆ ಹಾಗೂ ತೆಂಗಿನ ಮರಗಳನ್ನ ಕಾಡಾನೆಗಳು ತಿಂದು ತೇಗಿದ್ದು ಅಲ್ದೆ ಜಮೀನಿನಲ್ಲಿದ್ದ ಪೈಪ್ ಮೋಟಾರುಗಳನ್ನ ತುಳಿದು ಹಾಳುಗೆಡವಿದೆ.
ಅದೇನೆ ಹೇಳಿ ಸಾಲ ಮಾಡಿ ಬೆಳೆದ ಬೆಳೆ ಕೈಗತ್ತುವ ವೇಳೆ ಈ ಕಾಡಾನೆಗಳ ಉಪಟಳಕ್ಕೆ ಬೆಳೆಯೆಲ್ಲ ಸಂಪೂರ್ಣ ನಾಶವಾಗಿದೆ. ಸೂಕ್ತ ಪರಿಹಾರ ಹಾಗೂ ಶಾಶ್ವತವಾಗಿ ಕಾಡಾನೆ ಉಪಟಳಕ್ಕೆ ಅರಣ್ಯ ಇಲಾಖೆ ಬ್ರೇಕ್ ಹಾಕಲೇ ಬೇಕಿದೆ.