ಕಾಡಾನೆಯೊಂದು ನೀರು ಕುಡಿಯಲು ಹೋಗಿ ನಾಲೆಯಲ್ಲಿ ಬಿದ್ದಿತ್ತು. ಕಳೆದ ಎರಡು ದಿನಗಳಿಂದ ನಾಲೆಯಿಂದ ಮೇಲೆ ಬರಲಾಗದೆ ಪರದಾಡುತ್ತಿತ್ತು. ಸ್ಥಳದಲ್ಲೇ ಬೀಡುಬಿಟ್ಟು ನಿರಂತರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಕಡೆಗೂ ಆರು ವರ್ಷದ ಗಂಡಾನೆಯನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿವನಸಮುದ್ರದಲ್ಲಿ ನಾಲೆಯಲ್ಲಿ ಸಿಲುಕಿರುವ ಆರು ವರ್ಷ ಪ್ರಾಯದ ಕಾಡಾನೆಯನ್ನು ಮೇಲೆತ್ತುವ ಕಾರ್ಯಾಚರಣೆ ನಡೆಯಿತು. ನೀರು ಕುಡಿಯಲು ನಾಲೆಗೆ ಇಳಿದಿದ್ದ ಆರು ವರ್ಷದ ಆನೆ ಮೇಲೆ ಬರಲಾಗದೆ ಒದ್ದಾಡಿತ್ತು. ಶಿವನಸಮುದ್ರದ ಪಯನಿಯರ್ ಜಂಕೋ ಲಿಮಿಟೆಡ್, ಪವರ್ ಜನರೇಶನ್‌ನ ಕೆನಾಲ್‌ಗೆ ನೀರು ಕುಡಿಯಲು ಹೋಗಿ ಕಾಡಾನೆ ಇಳಿದೆ. ಮೇಲೆ ಬರಲಾಗದೆ ನಾಲೆಯಲ್ಲಿ ಸಿಲುಕಿದ ಆನೆ ಒದ್ದಾಟ ನಡೆಸಿತ್ತು. ಒಂದು ದಿನ ತಡವಾಗಿ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಮೇಲೆತ್ತುವ ಕಾರ್ಯಾಚರಣೆ ಆರಂಭಿಸಿದರು. ಆದರೆ ನಾಲೆಯಲ್ಲಿ ನೀರು ಹೆಚ್ಚಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ನೀರಿನ ಪ್ರಮಾಣ ತಗ್ಗಿದ ಬಳಿಕ ಇಂದು ಕಾರ್ಯಾಚರಣೆ ಮುಂದುವರೆಸಲಾಯಿತು.
ಇದನ್ನೂ ಓದಿ : ವೀರೇಂದ್ರ ಹೆಗ್ಗಡೆಯವರ ಸೇವೆ ಸಮಾಜಕ್ಕೆ ಮಾದರಿ ; ಧರ್ಮಸ್ಥಳ ಧಾರ್ಮಿಕ ವೈವಿಧ್ಯದ ಜೀವಂತ ಸಂಕೇತ : ಎಂ.ಬಿ. ಪಾಟೀಲ್
ಕಳೆದ ಎರಡು ದಿನಗಳಿಂದ ನೀರಿನಲ್ಲಿದ್ದ ಹಿನ್ನೆಲೆ ಆನೆಗೆ ಫಂಗಸ್ ತಗುಲಿತ್ತು. ಸೊಂಡಿಲ ತುದಿ ಭಾಗ ಇನ್ಛೆಕ್ಷನ್ ಆಗಿ ಬಿಳಿ ಬಣ್ಣಕ್ಕೆ ತಿರುಗಿತ್ತು. ಬೆಳಿಗ್ಗೆಯೇ ಬೆಂಗಳೂರಿನಿಂದ ಹೈಡ್ರಾಲಿಕ್ ಕ್ರೇನ್ ತರಿಸಿದ್ದ ಅಧಿಕಾರಿಗಳು, ಆನೆಗೆ ನಿರಂತರವಾಗಿ ಕಬ್ಬು, ಬೆಲ್ಲವನ್ನ ಆಹಾರವಾಗಿ ಪೂರೈಸುತ್ತಿದ್ದರು. ಡಿಸಿಎಫ್ ರಘು ಹಾಗೂ ವನ್ಯಜೀವಿ ವಲಯ ಮೈಸೂರು ವಿಭಾಗ ಡಿಸಿಎಫ್ ಪ್ರಭು ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರೆದಿತ್ತು. ಆನೆಗೆ ಅರಿವಳಿಕೆ ಮದ್ದು ನೀಡಿ ಮೇಲೆತ್ತಲು ನಿರ್ಧರಿಸಿದ ಅಧಿಕಾರಿಗಳ ತಂಡ, ಡಾ. ರಮೇಶ್ ಮತ್ತು ಡಾ ಆದರ್ಶ್ ಮೂಲಕ ಆನೆಗೆ ಎರಡು ಬಾರಿ ಅರಿವಳಿಕೆ ಮದ್ದು ಕೊಡಿಸಿದ್ರು. ಬಳಿಕ ಹೈಡ್ರಾಲಿಕ್ ಕ್ರೇನ್ ಮೂಲಕ ಆನೆ ಮರಿಯನ್ನು ಮೇಲೆತ್ತಲಾಯಿತು. ಬಳಿಕ ಆನೆಯ ಆರೋಗ್ಯವನ್ನು ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ಆನೆಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು. ನಂತರ ಅರಣ್ಯಾಧಿಕಾರಿಗಳು ಕಾವೇರಿ ವನ್ಯ ಜೀವಿಧಾಮಕ್ಕೆ ರಕ್ಷಣೆಗೊಂಡ ಆನೆಯನ್ನು ಬಿಟ್ಟಿದ್ದಾರೆ.
ಇದನ್ನೂ ಓದಿ : ಮನೆ ಮುಂದೆ ಗಲಾಟೆ ಮಾಡಬೇಡಿ ಎಂದಿದಕ್ಕೆ ದಾಂದಲೆ
ಒಟ್ಟಿನಲ್ಲಿ ಕಳೆದ ಎರಡು ದಿನಗಳಿಂದ ನಾಲೆಯಲ್ಲಿ ಸಿಲುಕಿ ಒದ್ದಾಡಿದ್ದ ಕಾಡಾನೆ ಮರಿಯನ್ನ ಯಶಸ್ವಿ ಕಾರ್ಯಾಚರಣೆ ಮೂಲಕ ಮೇಲೆತ್ತಲಾಗಿದೆ. ಅರಣ್ಯಾಧಿಕಾರಿಳಹಾಗೂ ಸಿಬ್ಬಂದಿಗಳ ಈ ಕಾರ್ಯಾಚರಣೆಗೆ ವನ್ಯಜೀವಿ ಪ್ರೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.









