)
ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಫಾರಿಯ ಟ್ರಿಪ್ ನ್ನು ಸಚಿವರು ಕಡಿತಗೊಳಿಸಿ ಆದೇಶಿಸಿದ್ದಾರೆ.
ವನ್ಯಜೀವಿ ಸಂಘರ್ಷ ಹೆಚ್ಚಳ ಹಾಗೂ ರೈತ ಸಂಘಟನೆಗಳ ಒತ್ತಾಯದ ಹಿನ್ನೆಲೆಯಲ್ಲಿ ಬಂಡೀಪುರ ಸಫಾರಿಯಲ್ಲಿ ಕಡೇಯ 1 ಟ್ರಿಪ್ ಕಡಿತಗೊಳಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮಹತ್ವದ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಸಾವಿನಲ್ಲೂ ಒಂದಾದ ದಂಪತಿ ನೋಡಿ ಇಡೀ ಗ್ರಾಮವೇ ಕಣ್ಣೀರು
ಆದೇಶದಲ್ಲಿ ಏನಿದೆ...?
ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಫಾರಿಯ ಟ್ರಿಪ್ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ರಾತ್ರಿ 6 ಗಂಟೆ ನಂತರವೂ ಕಾಡಿನಲ್ಲಿ ಸಫಾರಿ ವಾಹನಗಳು ಸಂಚರಿಸುತ್ತಿವೆ. ವಾಹನದ ಬೆಳಕು ಮತ್ತು ಶಬ್ದದಿಂದ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬಂದು ಉಪಟಳ ನೀಡುತ್ತಿವೆ ಎಂದು ವಿವಿಧ ರೈತ ಸಂಘಟನೆಗಳು ಆರೋಪಿಸಿ, ಕೂಡಲೇ ಸಫಾರಿ ನಿಲ್ಲಿಸುವಂತೆ ಮನವಿ ಮಾಡಿದ್ದರು.
ಆದರೆ ಸಫಾರಿಯು ಕಾಡಿನ ಬಗ್ಗೆ, ವನ್ಯಜೀವಿಗಳ ಬಗ್ಗೆ ಪರಿಸರ ಆಸಕ್ತರಿಗೆ ಶಿಕ್ಷಣವೂ ಆಗಿದೆ. ಹಲವರಿಗೆ ಜೀವನೋಪಾಯವೂ ಆಗಿದೆ. ಈ ಹಿನ್ನೆಲೆಯಲ್ಲಿ ಅ.28ರಿಂದಲೇ ಹಾಲಿ ಇರುವ ಸಫಾರಿಯ ಟ್ರಿಪ್ ಗಳ ಪೈಕಿ 1 ಟ್ರಿಪ್ ಕಡಿತಗೊಳಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಈ ಮೂಲಕ ಸೂಚಿಸಿದೆ ಎಂದು ಸಚಿವರು ಆದೇಶಿಸಿದ್ದಾರೆ.
ಬಂಡೀಪುರದಲ್ಲಿ 5 ಟ್ರಿಪ್ ಸಫಾರಿ :
ಬಂಡೀಪುರದಲ್ಲಿ 5 ಜಿಪ್ಸಿ, 5 ಕ್ಯಾಂಪರ್ ಹಾಗೂ 7 ಮಿನಿ ಬಸ್ ಸೇರಿದಂತೆ ಒಟ್ಟು 17 ವಾಹನಗಳು ಸಫಾರಿಗೆ ತೆರಳುತ್ತಿವೆ. ಪ್ರತಿ ದಿನ ಬೆಳಗ್ಗೆ 6:30 ಮತ್ತು 8 ಗಂಟೆ ಸೇರಿ 2 ಟ್ರಿಪ್ ಹಾಗೂ ಸಂಜೆ 2:30, 3:30 ಮತ್ತು 5:00 ಗಂಟೆಗೆ ಸೇರಿ 3 ಟ್ರಪ್ ಒಟ್ಟು 5 ಟ್ರಿಪ್ ಗಳು ಸಫಾರಿಗೆ ವಾಹನ ಹೋಗುತ್ತಿದೆ. ಇದರ ಪೈಕಿ 5 ಗಂಟೆಗೆ ತೆರಳುವ ಕೊನೆಯ ಟ್ರಿಪ್ ಅನ್ನು ಕಡಿತಗೊಳಿಸಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶ ಹೊರಡಿಸಿದ್ದಾರೆ. ಈ ಪೈಕಿ ಜಂಗಲ್ ಲಾಡ್ಜ್ ನಿಂದಲೂ 10 ವಾಹನಗಳು ಸಫಾರಿಗೆ ತೆರಳುತ್ತಿವೆ.
ಬಲು ಬೇಡಿಕೆ ಸಮಯವಾದ ಸಂಜೆ 5 ರ ನಂತರ ಹೊರಡುವ ಸಫಾರಿ ರದ್ದಾಗಲಿದೆ.