ಗದಗ: ಹೌದು,ಇದು ನಿಮಗೆ ಅಚ್ಚರಿಯಾದರೂ ಕೂಡ ಸತ್ಯ, ಗದಗ ಜಿಲ್ಲೆಯ ನರಗುಂದ ತಾಲೂಕಿನ ಫ್ರೌಡ ಶಾಲೆಯೊಂದರಲ್ಲಿ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಗಳಿಗೆ ಇವಿಎಮ್ ಯಂತ್ರಗಳನ್ನು ಬಳಸಿ ಹೇಗೆ ಚುನಾವಣೆಯನ್ನು ನಡೆಸುತ್ತಾರೋ ಹಾಗೆ ಈ ಶಾಲೆಯಲ್ಲಿ ಚುನಾವಣೆಯನ್ನು ನಡೆಸುವುದರ ಮೂಲಕ ಈಗ ಶಾಲೆಯ ಸಂಸತ್ತು ಚುನಾವಣೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.


COMMERCIAL BREAK
SCROLL TO CONTINUE READING

ಅಷ್ಟಕ್ಕೂ ಈ ಶಾಲೆಗೆ ಈ ಮತ ಯಂತ್ರ ಸಿಕ್ಕಿದ್ದಾದರೂ ಹೇಗೆ ಅಂತೀರಾ? ಇದಕ್ಕೆ ಸುಲಭ ಉತ್ತರವಿಷ್ಟೇ ನಿಮ್ಮ ಕೈಯಲ್ಲಿ ಆಂಡ್ರಾಯ್ಡ್ ಫೋನ್ ಮತ್ತು ಅದಕ್ಕೆ ಇಂಟರ್ನೆಟ್ ಇದ್ದರೆ ಸಾಕು, ಇವಿಎಮ್ ಯಂತ್ರವನ್ನು ನೀವೇ  ಪಡೆದುಕೊಳ್ಳಬಹುದು. ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಂಡು ಸುಲಭವಾಗಿ ಇವಿಎಮ್ ರೀತಿಯಲ್ಲಿಯೇ ಬಳಸಬಹುದು. 


ಚಿಕ್ಕನರಗುಂದ ಫ್ರೌಡ ಶಾಲೆಯಲ್ಲಿ ಸುಮಾರು 12 ವಿಧ್ಯಾರ್ಥಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸಾರ್ವತ್ರಿಕ ಚುನಾವಣೆಯ ರೀತಿಯಲ್ಲಿಯೇ ನಡೆಸಲಾಯಿತು. ಇನ್ನೊಂದು ವಿಶೇಷ ಎಂದರೆ ಮತದಾನದ ಸಂದರ್ಭದಲ್ಲಿ ಗುರುತಿನ ಚೀಟಿಯಾಗಿ ಆಧಾರ ಕಾರ್ಡ್ ಮತ್ತು  ಬ್ಯಾಂಕ್ ಪಾಸ್ ಬುಕ್ ತೋರಿಸಿ ಮತ ಚಲಾವಣೆ ಮಾಡಲು ಅನುವು ಮಾಡಿಕೊಡಲಾಗಿತ್ತು. ಇದೇ ವೇಳೆ ಸುಮಾರು 200ಕ್ಕೂ ಅಧಿಕ ವಿಧ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು


.



ಚುನಾವಣಾ ಪದ್ದತಿಯನ್ನು ವಿಧ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಅರ್ಥೈಸಿಕೊಳ್ಳುವಲ್ಲಿ  ಚಿಕ್ಕನರಗುಂದ ಫ್ರೌಡ ಶಾಲೆಯ ಶಿಕ್ಷಕರು ನೂತನ ತಂತ್ರಜ್ನಾನದ ಮೊರೆ ಹೋಗಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವೆಂದು ಹೇಳಬಹುದು.ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿನ ಎಲ್ಲ ಶಾಲಾ ಚುನಾವಣೆಯಲ್ಲಿ ಚಿಕ್ಕನರಗುಂದ ಶಾಲೆಯ ರೀತಿಯಲ್ಲಿ ಚುನಾವಣೆಯನ್ನು ನಡೆಸಿದರೆ ಅದು ಖಂಡಿತವಾಗಿ ವಿಧ್ಯಾರ್ಥಿಗಳಲ್ಲಿನ ರಾಜಕೀಯ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳಲು ಸಹಾಯವಾಗುತ್ತದೆ.