ಬೆಂಗಳೂರು: ರಾಜ್ಯದಲ್ಲಿನ ಮದ್ಯ ಪ್ರಿಯರಿಗೆ ಅಬಕಾರಿ ಇಲಾಖೆ ಮೂರನೇ ಬಾರಿಗೆ ಶಾಕ್ ನೀಡಿದೆ.
ಹೌದು, ಈ ಬಾರಿ ಬಜೆಟ್ ನಲ್ಲಿ 40 ಸಾವಿರ ಕೋಟಿ ರೂ ಗುರಿಯನ್ನು ನೀಡಿರುವುದರಿಂದ ಇದನ್ನು ತಲುಪುವ ನಿಟ್ಟಿನಲ್ಲಿ ಈಗ ಅಬಕಾರಿ ಇಲಾಖೆ ಮದ್ಯದ ದರವನ್ನು ಹೆಚ್ಚಿಸಲು ಮುಂದಾಗಿದೆ.
ಇದನ್ನೂ ಓದಿ: ಧೋನಿ ಮಾತ್ರವಲ್ಲ... 4 ಸೂಪರ್‌ಸ್ಟಾರ್ ಆಟಗಾರರ ವೃತ್ತಿಜೀವನವೂ ಐಪಿಎಲ್ 2025ರ ಬಳಿಕ ಕೊನೆಯಾಗುವುದು
ಕಳೆದ ಬಾರಿಗೆ 38 ಸಾವಿರದ 500 ಕೋಟಿ ರೂಪಾಯಿ ಟಾರ್ಗೆಟ್ ನೀಡಲಾಗಿತ್ತು.ಇದರಲ್ಲಿ 36 ಸಾವಿರದ 500 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಹಾಗಾಗಿ ಈ ಬಾರಿ ಟಾರ್ಗೆಟ್ ತಲುಪುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮದ್ಯದ ದರವನ್ನು ಹೆಚ್ಚಿಸಲು ಚಿಂತನೆ ನಡೆಸಿದೆ. ಕಳೆದ ಬಾರಿಗಿಂತ ಈ ವರ್ಷದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅಬಕಾರಿ ಇಲಾಖೆಗೆ ಮೂರೂವರೆ ಸಾವಿರ ಕೋಟಿ ಹೆಚ್ಚುವರಿ ಆದಾಯ ಸಂಗ್ರಹಣೆಯ ಗುರಿ ನೀಡಿದ್ದಾರೆ.
ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಲ್ಲ.. ಈ ಇಬ್ಬರು ಯುವ ಆಟಗಾರರಿಗೆ ಟೀಂ ಇಂಡಿಯಾ ಬಾಗಿಲು ಬಂದ್!?
ರಾಜ್ಯದಲ್ಲಿ ಮತ್ತೆ ಮದ್ಯದರ ಏರಿಕೆಯ ಸೂಚನೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಬಜೆಟ್‌ನಲ್ಲಿ ಮದ್ಯದ ದರ ಏರಿಕೆ ಮಾಡಿದ್ರೆ ಪ್ರತಿಭಟನೆಗಳು ನಡೆಯಬಹುದು ಎಂದು ಅರಿತ ಸರ್ಕಾರ ಯಾವುದೇ ಏರಿಕೆ ಮಾಡಿರಲಿಲ್ಲ.
ಅಬಕಾರಿ ಇಲಾಖೆಗೆ ಟಾರ್ಗೆಟ್ ನೀಡಿದರೆ ಮಧ್ಯದಲ್ಲಿ ಯಾವಾಗಾದರೂ ಮದ್ಯದ ದರ ಏರಿಕೆ ಮಾಡಬಹುದು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಇತ್ತ ಕಡೆ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆಯೇ ಅಬಕಾರಿ ಇಲಾಖೆ ಮದ್ಯದ ಬೆಲೆ ಏರಿಕೆ ಮಾಡುವ ಸಾಧ್ಯತೆ ಇದೆ.ಅದರಲ್ಲೂ ವಿಸ್ಕಿ, ಬ್ರ್ಯಾಂಡಿ, ರಮ್ ಹಾಗೂ ಜಿನ್ ಮೇಲೆ ದರ ಏರಿಕೆ ಮಾಡುವ ಸಾಧ್ಯತೆ ಇದೆ.
ಪ್ರತಿ ಬ್ರ್ಯಾಂಡ್ ಮೇಲೆ 5 ರಿಂದ 20 ರೂ.ಗೆ ಹೆಚ್ಚಳ!
80 ರೂಪಾಯಿ ಇರೋದು 100 ರುಪಾಯಿ
90 ರೂಪಾಯಿ ಇರೋದು 110 ರುಪಾಯಿ
100 ರೂಪಾಯಿ ಇರೋದು 120 ರುಪಾಯಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









