Siddaramaiah Vs Meta : ಹಿರಿಯ ನಟಿ ಬಿ. ಸರೋಜಾ ದೇವಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದರ ಇಂಗ್ಲಿಷ್ ಅನುವಾದ ಬಿಸಿ ವಿಷಯವಾಗಿತ್ತು, ಇದರ ಬೆನ್ನಲ್ಲೇ ಮೆಟಾ ತಂಡ ಕ್ಷಮೆ ಕೇಳಿದೆ.

Meta apologises Siddaramaiah : ರಾಜ್ಯದಲ್ಲಿ ಸಿಎಂ ಸ್ಥಾನ ವಿವಾದ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಆದರೆ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಕಾಂಗ್ರೆಸ್ ಸಮರ್ಥನೆ ಮಾಡಿಕೊಳ್ಳುತ್ತಿದೆ. ಆದರೆ ಆಂತರಿಕ ಜಗಳ ನಡೆಯುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡುತ್ತಿದೆ. ಇದರ ನಡುವೆ, ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ನಿಧನರಾಗಿದ್ದಾರೆ ಎಂದು ಮೆಟಾ ಮಾಡಿದ ತಪ್ಪು ಅನುವಾದ ಸಿಎಂ ಕೆಂಗಣ್ಣಿಗೆ ಗುರಿಯಾಗಿತ್ತು.
ಇತ್ತೀಚೆಗೆ ಖ್ಯಾತ ನಟಿ ಸರೋಜಾ ದೇವಿ ನಿಧನರಾದರು. ಇದರ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅವರ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿ ಪೋಸ್ಟ್ ಹಾಕಿದ್ದರು. ಮೆಟಾ ಅದನ್ನು ಇಂಗ್ಲಿಷ್ಗೆ ತಪ್ಪಾಗಿ ಅನುವಾದಿಸಿ, ಸಿಎಂ ಸಿದ್ದರಾಮಯ್ಯ ನಿಧನ ಎಂದು ಅರ್ಥೈಸಿತು.
ಇದು ತಕ್ಷಣವೇ ವೈರಲ್ ಆಯಿತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೋಪಗೊಂಡಿದ್ದರು. ಅಲ್ಲದೆ, ಮೆಟಾಗೆ ಎಚ್ಚರಿಕೆ ನೀಡಿದರು. ಅಷ್ಟೇ ಅಲ್ಲದೆ, ತಪ್ಪಾದ ಈ ವೈಶಿಷ್ಟ್ಯವನ್ನು ತಕ್ಷಣವೇ ನಿಲ್ಲಿಸಬೇಕೆಂದು ಅವರು ಒತ್ತಾಯಿಸಿದರು. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಯಿತು.
ಈ ಹಿನ್ನೆಲೆಯಲ್ಲಿ.. ಮೆಟಾ ಕಂಪನಿ ತನ್ನ ಟೂಲ್ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದೆ. ಅಲ್ಲದೆ, ತಪ್ಪಾಗಿದ್ದ ಕನ್ನಡ ಅನುವಾದವನ್ನು ಸರಿಪಡಿಸಲಾಗಿದೆ ಮೆಟಾ ವಕ್ತಾರರು ತಿಳಿಸಿದ್ದಾರೆ. ಅನುವಾದದ ಸಮಯದಲ್ಲಿ AI ಉಪಕರಣ ಯಂತ್ರದಲ್ಲಿನ ದೋಷದಿಂದಾಗಿ ಇದೆಲ್ಲವೂ ಸಂಭವಿಸಿದೆ ಎಂದು ಮೆಟಾ ಪ್ರತಿನಿಧಿಗಳು ಸ್ಪಷ್ಟಪಡಿಸಿದ್ದಾರೆ.