ಸೋಲಿಗೆ ಹೆದರಿ ಬಿಬಿಎಂಪಿ ಚುನಾವಣೆ ಮುಂದೂಡಿಕೆ ಮಸೂದೆ ಮಂಡಿಸಿದ ಬಿಜೆಪಿ- ಆಪ್ ವ್ಯಂಗ್ಯ

ಬಿಬಿಎಂಪಿ ವಾರ್ಡ್‌ ಸಂಖ್ಯೆಗಳನ್ನು 250 ಕ್ಕೆ ಹೆಚ್ಚಳ ಮಾಡಲು ಶಾಸಕ ಎಸ್ ರಘು ನೇತೃತ್ವದ ಜಂಟಿ ಸಲಹಾ ಸಮಿತಿ ಶಿಫಾರಸು ಮಾಡಿದ್ದು, ಹೊಸ ವಾರ್ಡ್‌ಗಳ ರಚನೆ ಮತ್ತು ಚುನಾವಣೆಗೆ ಮೀಸಲಾತಿ ಮರು ನಿಗದಿ ಮಾಡಬೇಕಾಗಿರುವುದರಿಂದ ಕೂಡಲೇ ಚುನಾವಣೆ ನಡೆಸಲು ಆಗುವುದಿಲ್ಲ ಎಂಬ ಕುಂಟು ನೆಪ ಮಾಡಿಕೊಂಡಿರುವ ರಾಜ್ಯ ಸರ್ಕಾರ, ಕರ್ನಾಟಕ ಪೌರಸಭೆಗಳ ಕಾಯ್ದೆ (ಮೂರನೇ ತಿದ್ದುಪಡಿ) ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದಿರುವುದು ಬಿಜೆಪಿಯವರ ಪುಕ್ಕಲುತನ ತೋರಿಸುತ್ತದೆ ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ವ್ಯಂಗ್ಯವಾಡಿದ್ದಾರೆ. 

Last Updated : Sep 24, 2020, 03:22 PM IST
ಸೋಲಿಗೆ ಹೆದರಿ ಬಿಬಿಎಂಪಿ ಚುನಾವಣೆ ಮುಂದೂಡಿಕೆ ಮಸೂದೆ ಮಂಡಿಸಿದ ಬಿಜೆಪಿ- ಆಪ್ ವ್ಯಂಗ್ಯ title=

ಬೆಂಗಳೂರು: ಬಿಬಿಎಂಪಿ ವಾರ್ಡ್‌ ಸಂಖ್ಯೆಗಳನ್ನು 250 ಕ್ಕೆ ಹೆಚ್ಚಳ ಮಾಡಲು ಶಾಸಕ ಎಸ್ ರಘು ನೇತೃತ್ವದ ಜಂಟಿ ಸಲಹಾ ಸಮಿತಿ ಶಿಫಾರಸು ಮಾಡಿದ್ದು, ಹೊಸ ವಾರ್ಡ್‌ಗಳ ರಚನೆ ಮತ್ತು ಚುನಾವಣೆಗೆ ಮೀಸಲಾತಿ ಮರು ನಿಗದಿ ಮಾಡಬೇಕಾಗಿರುವುದರಿಂದ ಕೂಡಲೇ ಚುನಾವಣೆ ನಡೆಸಲು ಆಗುವುದಿಲ್ಲ ಎಂಬ ಕುಂಟು ನೆಪ ಮಾಡಿಕೊಂಡಿರುವ ರಾಜ್ಯ ಸರ್ಕಾರ, ಕರ್ನಾಟಕ ಪೌರಸಭೆಗಳ ಕಾಯ್ದೆ (ಮೂರನೇ ತಿದ್ದುಪಡಿ) ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದಿರುವುದು ಬಿಜೆಪಿಯವರ ಪುಕ್ಕಲುತನ ತೋರಿಸುತ್ತದೆ ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ವ್ಯಂಗ್ಯವಾಡಿದ್ದಾರೆ. 

ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ಸಿಗದೆ ಸಾಯುವ ಪರಿಸ್ಥಿತಿ : ಆಮ್‌ ಆದ್ಮಿ ಪಕ್ಷದ ಆರೋಪ

ಬಿಜೆಪಿಯ ಆಂತರಿಕ ಸಮೀಕ್ಷೆಯ ಪ್ರಕಾರ, ಕೂಡಲೇ ಬಿಬಿಎಂಪಿ ಚುನಾವಣೆ ನಡೆದರೆ ಹೀನಾಯವಾಗಿ ಸೋಲುವುದಾಗಿ ವರದಿ ಬಂದಿದೆ. ಅಲ್ಲದೆ ಬಿಜೆಪಿಯ ಕೆಟ್ಟ ಆಡಳಿತದಿಂದ ಬೇಸತ್ತಿರುವ ಜನರ ಬಿಜೆಪಿಯನ್ನು ಬಿಬಿಎಂಪಿ ಚುನಾವಣೆಯಲ್ಲಿ ಸೋಲಿಸುವುದು ಖಂಡಿತಾ ಎಂದು ಹೇಳಿದ್ದಾರೆ.

ಹಿಂಬಾಲಕರಿಗೆ ಅಧಿಕಾರ ನೀಡಲು ವಾರ್ಡ್ ಸಂಖ್ಯೆಗಳ ಹೆಚ್ಚಳ

ಒಳ ಜಗಳದಲ್ಲೇ ಮುಳುಗಿರುವ ಬಿಜೆಪಿ ನಾಯಕರಿಂದ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಕುರ್ಚಿ ಭದ್ರವಾಗಿಲ್ಲ. ಅಲ್ಲದೇ ಅನೇಕ ವರ್ಷಗಳಿಂದ ಪಕ್ಷದಲ್ಲಿದ್ದು ಅವಕಾಶ ಸಿಗದ  ಹಿಂಬಾಲಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದು ಇದಕ್ಕೆ ಹೆದರಿರುವ ಯಡಿಯೂರಪ್ಪ ಅವರು "ನಾನು ತಿಂದಿದ್ದೇವೆ, ಈಗ ನೀವು ತಿನ್ನಿ" ಎನ್ನುವ ಯೋಜನೆಯನ್ನು ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ಮೂಲಕ ತರುತ್ತಿದ್ದಾರೆ ಆದ ಕಾರಣ 250 ಕ್ಕೆ ಸೀಟು ಹೆಚ್ಚಳ ಮಾಡಿ ಹಿಂಬಾಲಕರನ್ನು ತೃಪ್ತಿಗೊಳಿಸುತ್ತಿದ್ದಾರೆ.

ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದ ಆಪ್...!

ಅಲ್ಲದೇ ಈಗಿರುವ ವಾರ್ಡ್‌ಗಳು ವಿಧಾನಸಭಾ ಕ್ಷೇತ್ರಗಳ ನಡುವೆ ಹಂಚಿ ಹೋಗಿದ್ದು ಆಯಾಯ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಒಳಗಡೆ ಬರುವಂತೆ ನೋಡಿಕೊಳ್ಳಲಾಗುವುದು ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರು ಹೇಳುವ ಮೂಲಕ ಏಕ ಗವಾಕ್ಷಿ (ಸಿಂಗಲ್ ವಿಂಡೊ) ಭ್ರಷ್ಟಾಚಾರಕ್ಕೆ ಅವಕಾಶ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಸರ್ಕಾರದ ಈ ನಿರ್ಧಾರಕ್ಕೆ ಕಿಂಚಿತ್ತೂ ವಿರೋಧ ವ್ಯಕ್ತಪಡಿಸದ ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಕ್ಷಗಳು ಸರ್ಕಾರದ ಈ ನಡೆಯನ್ನು ಕಿಂಚಿತ್ತು ವಿರೋಧಿಸದೇ ಸರ್ಕಾರದ ಜತೆ ಕೈಜೋಡಿಸಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ . ವಿಧಾನಸಭೆ ಅಧಿವೇಶನವನ್ನು ದುರುಪಯೋಗ ಪಡಿಸಿಕೊಂಡು ಸರಿಯಾದ ಸಮಯಕ್ಕೆ ಚುನಾವಣೆ ನಡೆಸದೆ ಸಂವಿಧಾನದ ಆಶಯ ಹಾಗೂ ಪ್ರಜಾಪ್ರಭುತ್ವದ ಬದ್ದತೆಗೆ ದಕ್ಕೆ ತರುತ್ತಿರುವ ಇವರುಗಳ ನಡೆ ದುರದೃಷ್ಟಕರ.

ಜನ ಸಾಮಾನ್ಯ ಕೊರೋನಾ ಸೋಂಕಿಗೆ ಸರಿಯಾದ ಚಿಕಿತ್ಸೆ ಸಿಗದೆ ಸಾಯುತ್ತಿರುವ ಹೊತ್ತಿನಲ್ಲೂ ನೀಚ ರಾಜಕೀಯ ಮಾಡುತ್ತಿರುವ 3 ಪಕ್ಷಗಳ ನಡೆಯನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ‌.

Trending News