ಬರಗಾಲದ ಪರಿಸ್ಥಿತಿಯಲ್ಲಿ ತೋಟಗಾರಿಕೆ ಬೆಳೆ ನಿರ್ವಹಿಸಲು ಅನುಸರಿಸಿ ಈ 10 ಸೂತ್ರಗಳು

ಬರಗಾಲದ ಪರಿಸ್ಥಿತಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದು ಹಾಗೂ ಅವುಗಳನ್ನು ನಿರ್ವಹಿಸುವುದು ನಿಜಕ್ಕೂ ಸವಾಲಿನ ಸಂಗತಿ.ಆದರೆ ನಿಮ್ಮಲ್ಲಿ ಕೆಲವೂ ಮಾರ್ಗೋಪಾಯಗಳಿದ್ದಲ್ಲಿ ನೀವು ಇದರಿಂದ ಸುಲಭವಾಗಿ ಪಾರಾಗಬಹುದು.ಅದಕ್ಕಾಗಿ ಇಲ್ಲಿನ 10 ಕ್ರಮಗಳು ಆ ನಿಟ್ಟಿನಲ್ಲಿ ನಿಮಗೆ ಸಹಾಯಕವಾಗಬಹುದು.

Last Updated : Jul 21, 2020, 05:23 PM IST
 ಬರಗಾಲದ ಪರಿಸ್ಥಿತಿಯಲ್ಲಿ ತೋಟಗಾರಿಕೆ ಬೆಳೆ ನಿರ್ವಹಿಸಲು ಅನುಸರಿಸಿ ಈ 10 ಸೂತ್ರಗಳು  title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಬರಗಾಲದ ಪರಿಸ್ಥಿತಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದು ಹಾಗೂ ಅವುಗಳನ್ನು ನಿರ್ವಹಿಸುವುದು ನಿಜಕ್ಕೂ ಸವಾಲಿನ ಸಂಗತಿ.ಆದರೆ ನಿಮ್ಮಲ್ಲಿ ಕೆಲವೂ ಮಾರ್ಗೋಪಾಯಗಳಿದ್ದಲ್ಲಿ ನೀವು ಇದರಿಂದ ಸುಲಭವಾಗಿ ಪಾರಾಗಬಹುದು.ಅದಕ್ಕಾಗಿ ಇಲ್ಲಿನ 10 ಕ್ರಮಗಳು ಆ ನಿಟ್ಟಿನಲ್ಲಿ ನಿಮಗೆ ಸಹಾಯಕವಾಗಬಹುದು.

ಇದನ್ನೂ ಓದಿ: ಗ್ರಾಹಕರಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ಈ ತರಕಾರಿಗಳ ದರ ಇಳಿಕೆ ಸಾಧ್ಯತೆ!

  1. ಬೆಳೆ ಬಿತ್ತನೆಯಾದ ಪ್ರದೇಶದಲ್ಲಿ ಬರದಿಂದ ಮೊಳಕೆ ಪ್ರಮಾಣ ಕಡಿಮೆ ಇದ್ದಲ್ಲಿ ಮತ್ತು ಮೊಳಕೆ ಪ್ರಮಾಣ ತೃಪ್ತಿಕರವಾಗಿದ್ದು, ನಂತರದಲ್ಲಿ ತೇವಾಂಶದ ಕೊರತೆಯಿಂದ ಸಸಿಗಳು ಒಣಗಿ ಬೆಳೆಯ ಸಾಂದ್ರತೆ ಕಡಿಮೆಯಾಗಿರುವಲ್ಲಿ ಅಂತರ ತುಂಬುವಿಕೆ (Gap filling) ಮಾಡುವುದು.
  2. ಬೆಳೆ ಬಿತ್ತನೆಯಾಗದ ಪ್ರದೇಶದಲ್ಲಿ ಮತ್ತು ಬೆಳೆ ಬಿತ್ತನೆಯಾಗಿ ಸಂಪೂರ್ಣ ಹಾನಿಯಾಗಿದ್ದಲ್ಲಿ ಸ್ಥಳೀಯ ಹವಾಮಾನಕ್ಕನುಗುಣವಾಗಿ ಸುಧಾರಿತ ತಳಿಗಳು (ಸ್ಥಳೀಯ/Local), ಬರ ನಿರೋಧಕ/ಸಹಿಷ್ಣತೆ (Drought resistance/tolerance) ಮತ್ತು ಅಲ್ಪಾವಧಿ ತಳಿ (Short duration) ಹಾಗೂ ಪರ್ಯಾಯ ಬೆಳೆಗಳ ವ್ಯವಸ್ಥೆಯನ್ನು ಆಯ್ಕೆ ಮಾಡುವುದು.
  3. ಕೊಳವೆ ಭಾವಿಯ ನೀರಾವರಿ ವ್ಯವಸ್ಥೆ ಹೊಂದಿರುವ ರೈತರು ಕಡ್ಡಾಯವಾಗಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳ್ಳುವುದು.
  4. ಬರಗಾಲಕ್ಕೆ ಪೂರಕವಾಗಿ ಭೂಮಿಯಲ್ಲಿನ ತೇವಾಂಶವನ್ನು ಪರಿಣಾಮಕಾರಿಯಾಗಿ ಸಂರಕ್ಷಿಸಿಕೊಳ್ಳುವ ಅಗತ್ಯ ಕ್ರಮಗಳಾದ (Organic/Plastic), Weeding, Inter cultivation, Mixed cropping ಹಾಗೂ ವಿವಿಧ Bunding ನೀರಾವರಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು.
  5. ಸದೃಢ ಮತ್ತು ಉತ್ತಮ ಗುಣಮಟ್ಟದ ಸಸಿಗಳ ಉತ್ಪಾದನೆಯನ್ನು ಸುಧಾರಿತ ವಿಧಾನಗಳಾದ Protray ಗಳಲ್ಲಿ (ಸೂಕ್ತ Media ಗಳಾದ – ಕೊಕೊ ಪೀಟ್, ಮರದ ಹೊಟ್ಟು, ಕಾಂಪೊಸ್ಟ್/ಎರೆಹುಳು ಗೊಬ್ಬರ, ಜೈವಿಕ ಗೊಬ್ಬರಗಳ ಮಿಶ್ರಣ ಇತ್ಯಾದಿ ಉಪಯೋಗಿಸುವುದರೊಂದಿಗೆ) ನೆರಳುಪರದೆ ಮನೆ, Small tunnels, ಪಾಲಿಹೌಸ್‍ಗಳಡಿಯಲ್ಲಿ ಸಸಿಗಳನ್ನು ಬೆಳೆಸಿದಲ್ಲಿ ಉತ್ತಮ ಗುಣಮಟ್ಟದ ಸದೃಢ ಸಸಿಗಳನ್ನು ಬಳಸುವುದು.
  6. ಸಸ್ಯ ಬೆಳವಣಿಗೆಯನ್ನು ಉತ್ತೇಜಿಸುವ ಸಾರಜನಕದಂತಹ ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ, ಬರ ಪರಿಸ್ಥಿಗೆ ಹೊಂದಿಕೊಳ್ಳಲು ಪೊಟಾಶಿಯಂ, ಬೋರಾನ್, ಸಿಲಿಕಾನ್ ಮುಂತಾದ ಪೋಶಕಾಂಶಗಳನ್ನು Foliar spray ಮೂಲಕ ಒದಗಿಸುವುದು.
  7. ಹೆಚ್ಚಿನ ತಾಪಮಾನ ಮತ್ತು ಶುಷ್ಕ ಗಾಳಿಯ ದುಷ್ಪರಿಣಾಮವನ್ನು ತಗ್ಗಿಸಲು ಮೆಕ್ಕೆಜೋಳ/ಜೋಳದಂತಹ ಎತ್ತರ ಬೆಳೆಗಳನ್ನು ಬೆಳೆ ಸುತ್ತ ಮತ್ತು ಬಹುವಾರ್ಷಿಕ ಬೆಳೆಗಳಿಗೆ ಜಮೀನಿನ ಗಡಿಯುದ್ದಕ್ಕೂ ಗಾಳಿ ತಡೆ (Wind break) ಮರಗಳನ್ನು ನೆಡುವುದು.
  8. ಹೆಚ್ಚಿನ ತಾಪಮಾನದ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಆದ್ರ್ರತೆಯನ್ನು ಸುಧಾರಿಸಲು ಹಾಗೂ ಕಡಿಮೆ ನೀರು ಲಭ್ಯವಿರುವ ಸಂದರ್ಭಗಳಲ್ಲಿ ಪಾಲಿಹೌಸ್ ಮತ್ತು ನೆರಳುಪರದೆಗಳಂತ ಸಂರಕ್ಷಿತ ಘಟಕಗಳಡಿ ಸೂಕ್ತ ತರಕಾರಿ/ಹೂ ಬೆಳೆಗಳನ್ನು ಬೆಳೆಯುವುದು.
  9. ಮಣ್ಣಿನ ತೇವಾಂಶದ ಕೊರತೆ ಇದ್ದಲ್ಲಿ ಸಸಿಗಳ ನಾಟಿ ಮತ್ತು ರಸಗೊಬ್ಬರ ಹಾಕುವುದನ್ನು ಮುಂದೂಡುವುದು ಹಾಗೂ ಸೂಕ್ತ ತರಕಾರಿ /ಹೂ ಬೆಳೆಗಳನ್ನು ಬೆಳೆಯುವುದು.
  10. ಬರ ನಿರೋಧಕ ಬೆಳೆಗಳಾದ ಬೆಂಡೆ, ಮೆಣಸಿನಕಾಯಿ, ಚವಳಿಕಾಯಿ, ಅಲಸಂದೆ, ಅವರೆಕಾಯಿ, ಬೀನ್ಸ್ ಮತ್ತು ಅಲ್ಫಾವಧಿ ಬೆಳೆಗಳಾದ ಸೊಪ್ಪು, ತರಕಾರಿಗಳನ್ನು ಬೆಳೆಯುವುದು ಉತ್ತಮ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7829512236 ಕೋಲಾರ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರವನ್ನು ಸಂಪರ್ಕಿಸಬಹುದು.

Trending News