)
ಫೋಟೊ ಆಸೆಗೆ ವ್ಯಕ್ತಿಯ ಜೀವವೇ ಹೋಗುವ ಪರಿಸ್ಥಿತಿ ಎದುರಾಗಿದ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಕೆಕ್ಕನಹಳ್ಳ ಸಮೀಪ ನಡೆದಿದೆ. ಭಾನುವಾರ ಸಂಜೆ ಈ ಘಟನೆ ನಡೆದಿತ್ತು. ಕಾಡಾನೆಯ ಫೋಟೋ ತೆಗೆಯಲು ವಾಹನದಿಂದ ಇಳಿದಿದ್ದ ವೇಳೆ ಸಲಗವೊಂದು ಪ್ರವಾಸಿಗನ ಮೇಲೆ ದಾಳಿ ಮಾಡಿ ತುಳಿಯಲು ಯತ್ನಿಸಿತ್ತು.
ಅರಣ್ಯ ಇಲಾಖೆ ಶಾಕ್ :
ಬದುಕಿ ಉಳಿದಿರುವ ಈ ವ್ಯಕ್ತಿಗೆ ಇದೀಗ ಅರಣ್ಯ ಇಲಾಖೆ ಶಾಕ್ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಆನೆ ದಾಳಿಗೊಳಗಾದ ವ್ಯಕ್ತಿ ಪತ್ತೆಗೆ ಇದೀಗ ಅರಣ್ಯ ಇಲಾಖೆ ಮುಂದಾಗಿದೆ. ಅರಣ್ಯ ಪ್ರದೇಶದ ರಸ್ತೆಯಲ್ಲಿ ಪ್ರಾಣಿಗಳಿಗೆ ಆಹಾರ ನೀಡುವುದು, ಸೆಲ್ಫಿ ತೆಗೆಯುವುದು ದಂಡಾರ್ಹ ಆದ್ದರಿಂದ ಪ್ರವಾಸಿಗನ ಪತ್ತೆಗೆ ಅರಣ್ಯ ಇಲಾಖೆ ಮುಂದಾಗಿದೆ.
ವ್ಯಕ್ತಿ ಪತ್ತೆಗೆ ಮುಂದಾದ ಅರಣ್ಯ ಇಲಾಖೆ :
ದಾಳಿಗೊಳಗಾದ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ. ಯಾಕೆಂದರೆ ಆ ವ್ಯಕ್ತಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿಲ್ಲ. ವ್ಯಕ್ತಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾನೆಯೇ ಎಂದು ಅರಣ್ಯ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆತನ ಪತ್ತೆಕಾರ್ಯ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿ :
ಫೋಟೋ ತೆಗೆಯಲು ಹೋದವನ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿತ್ತು.ಬಂಡೀಪುರದ ನಡುರಸ್ತೆಯಲ್ಲಿ ಆನೆ ದಾಳಿ ಮಾಡಿತ್ತು. ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಕೆಕ್ಕನಹಳ್ಳಿ ಬಳಿ ನಿನ್ನೆ ಸಂಜೆ ಆನೆ ತನ್ನ ಮರಿಯೊಂದಿಗೆ ಇದ್ದ ವೇಳೆ ಪೋಟೋ ಪ್ರವಾಸಿಗ ಫೋಟೋ ತೆಗೆಯಲು ಮುದಾಗಿದ್ದ. ಈ ವೇಳೆ ಆನೆ ದಾಳಿ ನಡೆಸಿದೆ. ಆನೆ ದಾಳಿಯಿಂದಾಗಿ ಆ ವ್ಯಕ್ತಿ ಸ್ವಲ್ಪ ಹೊತ್ತು ರಸ್ತೆಯಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದ. ಬಳಿಕ ಆತನ ಕಡೆಯವರೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಹಾಗಾಗಿ ಇದೀಗ ಆ ವ್ಯಕ್ತಿಯ ಪತ್ತೆಗೆ ಅರಣ್ಯ ಇಲಾಖೆ ಮುಂದಾಗಿದೆ.
ಇದನ್ನೂ ಓದಿ : ಹಸುಗಳ ಕತ್ತು ಕೊಯ್ದು ರಸ್ತೆಯಲ್ಲಿ ಬಿಸಾಡಿದ ದುರುಳರು