JDS: ಮಹತ್ವದ ಬದಲಾವಣೆಯತ್ತ ಜೆಡಿಎಸ್: ಹೊಸ ಕೋರ್ ಕಮಿಟಿ ರಚನೆಗೆ `ಜೆಡಿಎಸ್` ನಿರ್ಧಾರ!
ಮಕರ ಸಂಕ್ರಾಂತಿ ಬೆನ್ನಲ್ಲೇ ಜೆಡಿಎಸ್ ಪಕ್ಷ ಸಂಘಟನೆಗೆ ಸಿದ್ಧತೆ ನಡೆಸಲಾಗಿದೆ. ಇದರ ಮೊದಲ ಹೆಜ್ಜೆಯಾಗಿ ಈ ತಿಂಗಳ 18ರಂದು ಹೊಸದಾಗಿ ಕೋರ್ ಕಮಿಟಿ ರಚಿಸಲು ಪಕ್ಷದ ಪ್ರಮುಖರ ಸಭೆ
ಬೆಂಗಳೂರು: ಮಕರ ಸಂಕ್ರಾಂತಿ ಬೆನ್ನಲ್ಲೇ ಜೆಡಿಎಸ್ ಪಕ್ಷ ಸಂಘಟನೆಗೆ ಸಿದ್ಧತೆ ನಡೆಸಲಾಗಿದೆ. ಇದರ ಮೊದಲ ಹೆಜ್ಜೆಯಾಗಿ ಈ ತಿಂಗಳ 18ರಂದು ಹೊಸದಾಗಿ ಕೋರ್ ಕಮಿಟಿ ರಚಿಸಲು ಪಕ್ಷದ ಪ್ರಮುಖರ ಸಭೆಯನ್ನು ಕರೆಯಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಮೂಲಕ ಜೆಡಿಎಸ್ ನಲ್ಲಿ ಮಹತ್ವದ ಬದಲಾವಣೆ ಪರ್ವಕ್ಕೆ ಚಾಲನೆ ನೀಡಿದ್ದಾರೆ.
ಈ ಕುರಿತಂತೆ ಸರಣಿ ಟ್ವಿಟ್ ಮಾಡಿರುವಂತ ಮಾಜಿ ಸಿಎಂ ಹಾಗೂ ಜೆಡಿಎಸ್ ವರಿಷ್ಠ ಹೆಚ್ ಡಿ ಕುಮಾರಸ್ವಾಮಿ(H.D.Kumaraswamy)ಯವರು, ಸೂರ್ಯ ಪಥ ಬದಲಿಸಿ ಹೊಸ ಭರವಸೆಯ ಹೊಂಗಿರಣ ಮೂಡಿಸಿದಂತೆ ಈ ಮಕರ ಸಂಕ್ರಾಂತಿಯಂದು ಜೆಡಿಎಸ್ ಪಕ್ಷದ ಸಂಘಟನೆಯ ದೃಷ್ಟಿಯಿಂದ ಹೊಸತನದೊಂದಿಗೆ ಪಕ್ಷದ ಚಟುವಟಿಕೆಗಳನ್ನು ಕ್ರಿಯಾಶೀಲಗೊಳಿಸಲಾಗುತ್ತಿದೆ ಎಂಬುದಾಗಿ ತಿಳಿಸಿದ್ದಾರೆ.
D.K.Shivakumar: 'ಏಳು ಜನ್ಮ ಎತ್ತಿದರೂ ಕರ್ನಾಟಕ ಕಾಂಗ್ರೆಸ್ ಮುಕ್ತ ರಾಜ್ಯ ಮಾಡಲಾಗುವುದಿಲ್ಲ’
ಇದರ ಮೊದಲ ಹೆಜ್ಜೆಯಾಗಿ ಈ ತಿಂಗಳ 18ರಂದು ಹೊಸದಾಗಿ ಕೋರ್ ಕಮಿಟಿ ರಚಿಸಲು ಪಕ್ಷದ ಪ್ರಮುಖರ ಸಭೆಯನ್ನು ಕರೆಯಲಾಗಿದೆ. ಅಂದಿನ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ಹೊಸ ಕೋರ್ ಕಮಿಟಿಯನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.
Ramesh Jarkiholi: ಸಿಪಿ ಯೋಗೀಶ್ವರ್ ಪರ ಬೆಳಗಾವಿ ಸಾಹುಕಾರ್ ಬ್ಯಾಟಿಂಗ್..!
ನಂತರ ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ನೇಮಕ, ಕಂದಾಯ ವಿಭಾಗವಾರು, ಜಿಲ್ಲೆ, ತಾಲೂಕು ಹಾಗೂ ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆಗಾಗಿ ಪದಾಧಿಕಾರಿಗಳ ನೇಮಕಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
BJP: ಸಚಿವ ಸ್ಥಾನ ಸಿಗದೇ ಕೊತಕೊತ ಕುದಿಯುತ್ತಿರುವವರಿಗೆ ಸಿಎಂ ಬಿಎಸ್‍ವೈ 'ಖಡಕ್ ವಾರ್ನಿಂಗ್'..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ