)
HD Deve Gowda: "ನನ್ನ ಕಾಲು ನೋಯುತ್ತಿರಬಹುದು ಆದರೆ ನನಗೆ ತಲೆಗೆ ನೋವಿಲ್ಲ. ನಮ್ಮ ತಾಯಿ ಯಾವ ಎದೆ ಹಾಲು ಕುಡಿಸಿ ಸಾಕಿದ್ಲು ಗೊತ್ತಿಲ್ಲ. ಆಕೆ ಈಶ್ವರನ ಭಕ್ತೆ, ನಾನು ಅವರ ಮಗ" ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ನನ್ನ ತಂದೆಗೆ ಅವರ ಮೊದಲ ಪತ್ನಿಯಿಂದ ನಾಲ್ಕು ಮಕ್ಕಳಿದ್ದರು. ಅವರೆಲ್ಲರೂ ಸತ್ತರು. ನಂತರ ನನ್ನ ದೊಡ್ಡಮ್ಮನೂ ನಿಧನರಾದರು. ನಾನು ಅವರ ಎರಡನೇ ಪತ್ನಿಯ ಮೊದಲ ಮಗ. ನನ್ನ ಕಾಲಿಗೆ ನೋವಿರಬಹುದು. ಆದರೆ ನನಗೆ ಸಂಸತ್ತಿನಲ್ಲಿ ಹೋರಾಡುವ ಶಕ್ತಿ ಇದೆ. ಪ್ರಧಾನಿಗಳನ್ನು ಮನವೊಲಿಸುವ ಶಕ್ತಿ ನನಗಿದೆ ಎಂದು ಅವರು ಹೇಳಿದರು.
ನಾಡಿನ ಸಂತರ ಸಮ್ಮುಖದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಶ್ರೀ ಗಂಗಾ ಸಾಮ್ರಾಟ ಶ್ರೀ ಪುರುಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಎದುರಿಸುತ್ತಿರುವ ಜ್ವಲಂತ ನೀರಾವರಿ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಪ್ರಧಾನಿ ನರೇಂದ್ರ ಮೋದಿಗೆ ಮಾತ್ರ ಇದೆ. 93ರ ಈ ವಯಸ್ಸಿನಲ್ಲಿ ನಾನು ಏನು ಮಾಡಬಲ್ಲೇ? ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ನರ್ಮದಾ ನದಿ ನೀರು ವಿಚಾರಕ್ಕೆ ಟ್ರಿಬ್ಯೂನಲ್ ಗೆ ಪತ್ರ ಬರೆದಿದ್ದಾರೆ. ಟ್ರಿಬ್ಯೂನಲ್ ಗೆ ಪತ್ರ ಬರೆದು ಕರ್ನಾಟಕದಲ್ಲಿ ನೀರಿನ ಸಮಸ್ಯೆ ಇಲ್ಲ ಅಂತ ಹೇಳಿದ್ದಾರೆ. ಅದಕ್ಕೆ ನಾನು ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ನನ್ನೊಂದಿಗೆ ಮಾತನಾಡಿದ್ದಾರೆ. ಗೋದಾವರಿ ನದಿಯ ನೀರಿನಲ್ಲಿ ನಮಗೂ ಪಾಲು ಸಿಗಬೇಕು. ನನ್ನ ದೇಶದ ಸಮಸ್ಯೆಗಳನ್ನು ಪರಿಹರಿಸಬೇಕು. ನನ್ನ ಜನರು ತಲೆಮಾರುಗಳಿಂದ ಅನುಭವಿಸುತ್ತಿರುವುದನ್ನು ಈ ಆತ್ಮ ನೋಡುತ್ತದೆ. ನಾನು ನರಕದಲ್ಲಿರುತ್ತೇನೋ ಅಥವಾ ಸ್ವರ್ಗದಲ್ಲಿರುತ್ತೇನೋ ನನಗೆ ತಿಳಿದಿಲ್ಲ. ಆದರೆ, ನನ್ನ ಆತ್ಮ ನೋಡುತ್ತದೆ. ಅದಕ್ಕಾಗಿಯೇ ನಾನು ಪ್ರಧಾನಿಗೆ ಪತ್ರ ಬರೆದಿದ್ದೇನೆ. ಗೋದಾವರಿ ನೀರಿಗೆ ಮಹದಾಯಿ ನೀರಿನ ಯೋಜನೆ ಆಗಬೇಕು. ಚಳ್ಳಕೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರದಂತಹ ಬಯಲು ಪ್ರದೇಶಗಳಿಗೆ ನೀರು ಸಿಗಬೇಕು. ರಾಜ್ಯಸಭೆಯಲ್ಲಿ ನನ್ನ ಹೋರಾಟ ಇನ್ನೂ ಒಂದು ವರ್ಷ ಮುಂದುವರಿಯಬಹುದು. ಅದಕ್ಕಾಗಿಯೇ ಇಂದು ಎಲ್ಲರೂ ನನ್ನನ್ನು ಇಲ್ಲಿ ತಂದು ಕೂರಿಸಿದ್ದಾರೆ" ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ