ಪ್ರೇಯಸಿ ಕೊಲೆ ಪ್ರಕರಣ ಭೇದಿಸಲು ಸಹಾಯವಾಯ್ತು ಆ ಒಂದು ಮೆಸೇಜ್..! ದೃಶ್ಯ ಸಿನಿಮಾ ಕಥೆನೂ ಮೀರಿಸುತ್ತೆ ಈ ಕಹಾನಿ

ಅದೊಂದು ಮಣ್ಣಲ್ಲಿ ಮಣ್ಣಾಗಿದ್ದ ಪ್ರೀತಿ‌-ಪ್ರೇಮದ ಕೊಲೆ ಪ್ರಕರಣ. ಪೊಲೀಸರ ಚಾಣಾಕ್ಷತನ ತನಿಖೆಯಿಂದ 6 ತಿಂಗಳ ನಂತ್ರ, ಕೊಲೆ ರಹಸ್ಯ ಬಯಲಾಗಿದೆ. ಸಿನಿಮಾ ಮಾದರಿಯಲ್ಲಿ ಸಾಕ್ಷಿ ನಾಶ ಮಾಡ್ತಾಯಿದ್ದ ಕಿಲಾಡಿ ಪ್ರಿಯಕರ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. ಒಂದೇ ಒಂದು ಮೆಸೇಜ್ ನಿಂದ, ಪ್ರೇಯಸಿ ಕೊಲೆ ಮಾಡಿದ್ದ ಪ್ರೀಯಕರ ಲಾಕ್ ಆಗಿದ್ದಾನೆ. ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.

Written by - Krishna N K | Last Updated : Jun 20, 2025, 09:43 PM IST
    • ಕೊಲೆ ಮಾಡಿ 6 ತಿಂಗಳು ದೃಶ್ಯ ಸಿನಿಮಾ ಮಾದರಿಯಲ್ಲಿ ಸಾಕ್ಷಿ ನಾಶ
    • ಪೊಲೀಸರಿಗೆ ಬಣ್ಣ ಬಣ್ಣದ ಕಥೆ ಹೇಳಿ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಖತರ್ನಾಕ್ ಕಿಲಾಡಿ
    • ಹಳ್ಳದಲ್ಲಿ ಪ್ರೇಯಸಿ ಶವ ಹೂತು, ಹಾಯಾಗಿದ್ದ ಕ್ರೂರಿ ಪ್ರಿಯಕರ..!
ಪ್ರೇಯಸಿ ಕೊಲೆ ಪ್ರಕರಣ ಭೇದಿಸಲು ಸಹಾಯವಾಯ್ತು ಆ ಒಂದು ಮೆಸೇಜ್..! ದೃಶ್ಯ ಸಿನಿಮಾ ಕಥೆನೂ ಮೀರಿಸುತ್ತೆ ಈ ಕಹಾನಿ

ಗದಗ : ಈ ಫೋಟೋದಲ್ಲಿರೋ ಹುಡುಗಿ ಹೆಸರು ಮಧುಶ್ರೀ ಅಂಗಡಿ. ಗದಗ ತಾಲೂಕಿನ ನಾರಾಯಣಪುರ ಗ್ರಾಮದ ನಿವಾಸಿ. ಅದೇ ಗ್ರಾಮದ ಸತೀಶ್ ಹಿರೇಮಠ ಎಂಬಾತನ ಜೊತೆಗೆ ಪ್ರೀತಿ ಮಾಡ್ತಾಯಿದ್ಲು. 6 ವರ್ಷಗಳಿಂದ ಇಬ್ರು ಪರಸ್ಪರ ಪ್ರೀತಿ ಮಾಡ್ತಾಯಿದ್ರು. ಮಧುಶ್ರೀ ಕುಟುಂಬಸ್ಥರಿಗೆ ಈ ಪ್ರೀತಿ ಪ್ರೇಮದ ವಿಷಯ ಗೊತ್ತಾಗಿದೆ. ಹೀಗಾಗಿ ಇಲ್ಲಿ ಬೇಡ ಅಂತ ಗದಗನಲ್ಲಿ ಅವ್ರ ಸಂಬಂಧಿಕರ ಮನೆಯಲ್ಲಿ ಮಧುಶ್ರೀಯನ್ನು ಬಿಡ್ತಾರೆ. 

ಕೆಲವು ತಿಂಗಳು ಕಾಲ ದೂರ ಇದ್ದ ಈ ಜೋಡಿ ಪುನಃ ಒಂದಾಗುತ್ತೆ. ಅದು 2024 ಡಿಸೆಂಬರ್ 16 ರ ರಾತ್ರಿ ಮಧುಶ್ರೀ ಗದಗ ನಗರದ ಅವ್ರ ಸಂಬಂಧಿಕರ ಮನೆಯಿಂದ ಹೊರ ಬರ್ತಾಳೆ. ಸಂಬಂಧಿಕರು ಎಲ್ಲಾ ಕಡೆ ಹುಡುಕಾಟ ನಡೆಸಿ, 2025 ಜನೆವರಿ 12 ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಮಹಿಳೆ ನಾಪತ್ತೆ ಪ್ರಕರಣವನ್ನು ದಾಖಲು ಮಾಡ್ತಾರೆ. 

ಇದನ್ನೂ ಓದಿ:ಮರದ ಕೊಂಬೆ ಬಿದ್ದು ಅಕ್ಷಯ್‌ ಸಾವು ಪ್ರಕರಣ: ಬಿಬಿಎಂಪಿ ಡಿಸಿಎಫ್‌ ಬಿಎಲ್‌ಜಿ ಸ್ವಾಮಿ ವರ್ಗಾವಣೆ

ಆಗ ಪೊಲೀಸರು ಸತೀಶ್ ಮೇಲೆ ಅನುಮಾನದಿಂದ ವಿಚಾರಣೆ ಕೈಗೊಳ್ತಾರೆ. ಆಗ ಸತೀಶ್ ಈ ಬಗ್ಗೆ ನನಗೇನೂ ಗೊತ್ತಿಲ್ಲ ಅಂತಾ ಕಥೆ ಹೇಳ್ತಾನೆ. ಅಷ್ಟರಲ್ಲಿ ಇಬ್ಬರು ಒಂದೇ ಬೈಕ್ ನಲ್ಲಿ ಹೋಗಿರೋ ಸಿಸಿ ಟಿವಿ ವಿಡಿಯೋ ಸಿಗುತ್ತೆ. ಇದರ ಆಧಾರದ ಮೇಲೆ ಪೊಲೀಸ್ರು ಸತೀಶ್ ನನ್ನು, ವಿಚಾರಣೆಗೆ ಒಳಪಡಿಸ್ತಾರೆ. ಆಗ ಬೈಕ್ ಮೇಲೆ ಇಬ್ಬರು ಹೊಗಿದ್ದು ಕನ್ಫರ್ಮ ಅಗುತ್ತೆ. 

ಆದ್ರೆ, ಮಧುಶ್ರೀಯನ್ನು ಹಾತಲಗೇರಿ ಗ್ರಾಮದ ಬಳಿ ಬಿಟ್ಟು, ನಾನು ಪೆಟ್ರೋಲ್ ಬಂಕ್ ನಲ್ಲಿ ಕೆಲಸಕ್ಕೆ ಹೋಗಿದ್ದೇನೆ. ಅವಳು ಎಲ್ಲಿಗೇ ಹೋದಳು ನನಗೆ ಗೊತ್ತಿಲ್ಲ ಅಂತಾನೆ. ಆಗ ಪೊಲೀಸರು ಆತನನ್ನು ಬಿಟ್ಟು ಕಳಿಸ್ತಾರೆ. ನಂತರ ಆತನ ಮೊಬೈಲ್ ನಲ್ಲಿನ ಇನ್ನೊಂದ ಸಿಮ್ ಗೆ ಒಂದು‌‌ ಕಂಪನಿ ಮೆಸೇಜ್ ಬಂದಿರುತ್ತೆ ಆಗಲೇ ಈ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಗುತ್ತೆ.

ಇದನ್ನೂ ಓದಿ:ಚಾರ್ಮಾಡಿ ಘಾಟ್‌ನಲ್ಲಿ ಪ್ರವಾಸಿಗರ ಹುಚ್ಚಾಟ: ರಸ್ತೆ ಮಧ್ಯೆ ವಾಹನ ನಿಲ್ಲಿಸಿಕೊಂಡು ಡ್ಯಾನ್ಸ್‌!!

ಸತೀಶ್ 2024 ಡಿಸೆಂಬರ್ 16 ರಂದು, ಪ್ರೇಯಸಿ ಮಧುಶ್ರೀಯನ್ನು ಕರೆದುಕೊಂಡು ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಹೊರವಲಯದಲ್ಲಿರೊ ಒಂದು ತೋಟದ ಮನೆಗೆ ಬಂದಿರ್ತಾನೆ. ಅಲ್ಲಿ ಇವರಿಬ್ಬರ ಮದುವೆ ಮಾತುಕತೆಗಳು ಶುರುವಾಗ್ತವೆ. ಮಧುಶ್ರೀ ನನ್ನನ್ನು ಬೇಗ ಮದುವೆಯಾಗು ಅಂತಾ ಹಠ ಹಿಡಿಯುತ್ತಾಳೆ. ಆಗ ಇಬ್ಬರ ನಡುವೆ ಜಗಳವಾಗಿ, ಮಧುಶ್ರೀಯ ವೇಲ್ ನಿಂದ ಕುತ್ತಿಗೆಗೆ ಬಿಗಿದು, ಸತೀಶ್ ಅವಳನ್ನ ಕೊಲೆನೇ ಮಾಡಿ ಬಿಡ್ತಾನೆ. ನಂತರ ಪಕ್ಕದ ಹಳ್ಳದಲ್ಲಿ ಅವಳ ಶವವನ್ನು ಹೊತು ಹಾಕಿ, ಏನೂ ನಡೆದೆಯಿಲ್ಲ ಎನ್ನುವ ಹಾಗೇ, ಪೆಟ್ರೋಲ್ ಬಂಕ್ ನಲ್ಲಿ ಕೆಲಸ‌ ಮಾಡ್ತಾಯಿರ್ತಾನೆ. 

ಆಗಾಗ ಬಂದು ಎಲುಬು ಗಳನ್ನು ಬೇರೆ ಕಡೆ ಹಾಕಿ, ಸಾಕ್ಷಿ ನಾಶ ಮಾಡಲು ಪ್ರಯತ್ನ ಮಾಡ್ತಾಯಿರ್ತಾನೆ. ಆದ್ರೆ, ಅಂದು ಸ್ವಿಚ್ ಆಪ್ ಆದ ಮೊಬೈಲ್ ಗೆ ಕಂಪನಿಯ ಒಂದು ಮೆಸೇಜ್ ಬಂದಿರುತ್ತಲ್ಲ, ಆರೋಪಿ ಸತೀಶ್ ಹೇಳೋ ಲೊಕೇಶನ್ ಬೇರೆ, ಮೊಬೈಲ್ ಗೆ ಬಂದಿರೋ ಮೆಸೇಜ್ ಲೊಕೇಶನ್ ಬೇರೆಯಾಗಿರುತ್ತೇ. ಹೀಗಾಗಿ ಪೊಲೀಸರು ತೀವ್ರವಾಗಿ ವಿಚಾರಣೆ ಮಾಡಿದಾಗ ಕೊಲೆ ಮಾಡಿರೋದಾಗಿ ಒಪ್ಪಿಕೊಂಡು, ಶವವನ್ನು ಹೊತು ಹಾಕಿದ ಜಾಗವನ್ನು ತೋರಿಸಿದ್ದಾನೆ.

ಇದನ್ನೂ ಓದಿ:ಅಹಮದಾಬಾದ್‌ ಏರ್‌ ಇಂಡಿಯಾ ವಿಮಾನ ದುರಂತ ಪ್ರಕರಣ: ಹಾನಿಯಾಗಿರುವ ಬ್ಲ್ಯಾಕ್‌ಬಾಕ್ಸ್‌ ಅಮೆರಿಕಕ್ಕೆ ರವಾನಿಸುವ ಸಾಧ್ಯತೆ

ಪೊಲೀಸ್ರು ಮಧುಶ್ರೀ ಶವದ ಅವಶೇಷಗಳನ್ನು ಹಳ್ಳದಲ್ಲಿ ಪತ್ತೆ ಮಾಡಿದ್ದಾರೆ. ಡಿಎನ್‌ಎ ಪರೀಕ್ಷೆ ಮಾಡಲು ಕಳುಹಿಸುತ್ತಿದ್ದಾರೆ. ಮದುವೆಯಾಗು ಅಂದಿದಕ್ಕೆ ಪ್ರೀಯಕರ ಸತೀಶ್ ಪ್ರೇಯಸಿ ಮಧುಶ್ರೀ ಕೊಲೆ ಮಾಡಿ, ಸಾಕ್ಷಿ ನಾಶ ಮಾಡಲು ಸಿನಿಮಾ‌ ಶೈಲಿಯಲ್ಲಿ ಪ್ರಯತ್ನ ಮಾಡಿದ್ದ. ಆದ್ರೆ ಅದೊಂದು ಮೆಸೇಜ್ ಆರು ತಿಂಗಳ ನಂತ್ರ ಕೊಲೆಯ ರಹಸ್ಯವನ್ನು ಬಯಲು ಮಾಡಿದೆ.. ಪೊಲೀಸರ ಈ ಕಾರ್ಯಾಚರಣೆಗೆ ಹ್ಯಾಂಡ್ಸಪ್ ಹೇಳಲೇಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News