)
ಶ್ರಾವಣ ಮಾಸ ಅಂದ್ರೇನೆ, ಸಾಲು ಸಾಲು ಹಬ್ಬಗಳು, ಸಮಾರಂಭಗಳು. ಮೊನ್ನೆ ತಾನೆ ವರಮಹಾಲಕ್ಷ್ಮಿ, ಕೃಷ್ಣ ಜನ್ಮಾಷ್ಟಮಿ ಹಬ್ಬ ಮುಗಿದಿದೆ. ಅದಾಗಲೇ ಗೌರಿ - ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭ ಆಗಿದೆ. ಹಬ್ಬದ ಖರೀದಿಗೆ ಜನ ಮಾರ್ಕೇಟ್ ಗೆ ಮುಗಿ ಬೀಳತ್ತಿದ್ದಾರೆ. ಅದ್ರಲ್ಲೂ ಕೆ.ಆರ್ ಮಾರ್ಕೇಟ್, ಮಲ್ಲೇಶ್ವರ, ಗಾಂಧಿ ಬಜಾರ್, ಯಶವಂತಪುರ, ಚಿಕ್ಕಪೇಟೆ ಎಲ್ಲೆಡೆ ಹಬ್ಬದ ಖರೀದಿ ಭರಾಟೆ ಜೋರಾಗಿದೆ.
ಹಬ್ಬ ಬಂತೆಂದರೆ ಸಾಕು, ಹಬ್ಬದ ತಯಾರಿ, ವಿವಿಧ ಬಗೆಯ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಮಾರ್ಕೆಟ್ ನಲ್ಲಿ ಜೋರಾಗುತ್ತದೆ. ವರಮಹಾಲಕ್ಷ್ಮಿ ಹಬ್ಬದ ನಂತರ ಬರುವ ದೊಡ್ಡ ಹಬ್ಬ ಅಂದ್ರೆ ಗೌರಿ - ಗಣೇಶ ಹಬ್ಬ. ಗೌರಿ ಗಣೇಶ ಹಬ್ಬವನ್ನ ಇಡೀ ರಾಜ್ಯಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತೆ. ಅದ್ರಲ್ಲೂ ಹಬ್ಬಕ್ಕೆ ಕ್ಷಣಗಣನೆ ಆರಂಭ ಆಗಿದ್ದು, ಸಿಲಿಕಾನ್ ಸಿಟಿಯಲ್ಲೂ ಹಬ್ಬದ ತಯಾರಿ ಜೋರಾಗಿ ನಡೀತಿದೆ.
ಎತ್ತ ನೋಡಿದರತ್ತ ಜನವೋ ಜನ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿಯ ಭರಾಟೆ ಜೋರಾಗಿದೆ. ಈಗಾಗಲೇ ಹಬ್ಬಕ್ಕೆ ಹೂವು, ಹಣ್ಣುಗಳ ಖರೀದಿ ಆರಂಭ ಆಗಿದ್ದು, ಹೂವು, ಹಣ್ಣುಗಳ ಮೇಲೆ ಕೊಂಚ ಬೆಲೆ ಏರಿಕೆ ಆಗಿದ್ರು, ಜನ ಭರ್ಜರಿಯಾಗಿ ಶಾಪಿಂಗ್ ಮಾಡ್ತಿದ್ದಾರೆ. ಇನ್ನೊಂದೆಡೆ ನಾಳೆ ಗೌರಿಹಬ್ಬ ಹಾಗೂ ಬುಧವಾರ ಗಣೇಶ ಚತುರ್ಥಿ ಇದ್ದು, ಇಂದಿನಿಂದಲೇ ಸಿಲಿಕಾನ್ ಮಂದಿ ಖರೀದಿಗೆ ಚಾಲನೆ ನೀಡಿದ್ದು, ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಜೊತೆಗೆ ಗೌರಿ ಗಣೇಶ ಮೂರ್ತಿಗಳನ್ನು ಖರೀದಿ ಮಾಡ್ತಿದ್ದು, ಮಲ್ಲೇಶ್ವರ, ಕೆಆರ್ ಮಾರ್ಕೆಟ್, ಯಶವಂತಪುರ ಚಿಕ್ಕಪೇಟೆ, ಗಾಂಧಿ ಬಜಾರ್ ಮಾರ್ಕೆಟ್ ಗಳು ಫುಲ್ ಬ್ಯುಸಿ ಆಗಿದೆ.
ಒಟ್ಟಾರೆಯಾಗಿ ನಗರದೆಲ್ಲೆಡೆ ಗೌರಿ ಗಣೇಶ ಹಬ್ಬದ ತಯಾರಿ ಆರಂಭ ಆಗಿದ್ದು, ಎಲ್ಲರೂ ಈ ಭಾರಿ ಮಣ್ಣಿನ ಗೌರಿ- ಗಣೇಶ ಮೂರ್ತಿ ಬಳಸಿ ಪರಿಸರಕ್ಕೆ ಹಾನಿ ಮಾಡದೇ ಹಬ್ಬ ಆಚರಿಸಲಿ ಎನ್ನುವುದೇ ನಮ್ಮ ಆಶಯ.