close

News WrapGet Handpicked Stories from our editors directly to your mailbox

ಡಿಕೆಶಿ ಧೈರ್ಯವಾಗಿದ್ದಾರೆ: ಜಿ.ಸಿ. ಚಂದ್ರಶೇಖರ್

ಮಂಗಳವಾರ ಸಂಜೆ ದೆಹಲಿಯ ಖಾನ್ ಮಾರ್ಕೆಟ್ ಬಳಿ ಇರುವ ಜಾರಿ ನಿರ್ದೇಶನಾಲಯದ ಮುಖ್ಯ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಮಾಡಿದ ಜಿ.ಸಿ. ಚಂದ್ರಶೇಖರ್

Yashaswini V Yashaswini V | Updated: Sep 11, 2019 , 07:13 AM IST
ಡಿಕೆಶಿ ಧೈರ್ಯವಾಗಿದ್ದಾರೆ: ಜಿ.ಸಿ. ಚಂದ್ರಶೇಖರ್
ಫೋಟೋ ಕೃಪೆ: Wikipedia

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಶದಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆರೋಗ್ಯವಾಗಿದ್ದಾರೆ ಮತ್ತು ಧೈರ್ಯವಾಗಿದ್ದಾರೆ ಎಂದು ರಾಜ್ಯಸಭಾ ಸದಸ್ಯರಾದ ಜಿ.ಸಿ. ಚಂದ್ರಶೇಖರ್ ಹೇಳಿದರು.

ಮಂಗಳವಾರ ಸಂಜೆ ದೆಹಲಿಯ ಖಾನ್ ಮಾರ್ಕೆಟ್ ಬಳಿ ಇರುವ ಜಾರಿ ನಿರ್ದೇಶನಾಲಯದ ಮುಖ್ಯ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಮಾಡಿದ ಜಿ.ಸಿ. ಚಂದ್ರಶೇಖರ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ. ಶಿವಕುಮಾರ್ ಚೆನ್ನಾಗಿದ್ದಾರೆ. ಜಾರಿ‌ ನಿರ್ದೇಶನಾಲಯದ ವಿಚಾರಣೆಗೆ ಸಹಕರಿಸುತ್ತಿದ್ದಾರೆ.‌ 13ನೇ ತಾರೀಖು ವಕೀಲರು ಇಡಿ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ ಎಂದು ಹೇಳಿದರು.