ನಾಲ್ಕು ವರ್ಷ ಪ್ರೀತಿ, ಮದುವೆ ಆಗ್ತೀನಿ ಅಂತ ಮೋಸ! ಹೊಟ್ಟೆಯಲ್ಲಿ ಮಗು ಇರುವಾಗಲೇ ಯುವತಿ ಸಾವಿಗೆ ಶರಣು

ಅವರಿಬ್ಬರೂ ಪರಸ್ಪರ 4 ವರ್ಷಗಳ ಕಾಲ ಪ್ರೀತಿ ಮಾಡಿದ್ದರು. ಮದುವೆಯಾಗೋದಾಗಿ ನಂಬಿಸಿ ಯುವಕ ದೈಹಿಕ ಸಂಪರ್ಕ ಮಾಡಿ ಗರ್ಭಿಣಿ ಮಾಡಿದ್ದ. ಅದರೆ ಈಗ ಮದುವೆಗೆ ನಿರಾಕರಿಸಿದ್ದರಿಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದು, ಯುವತಿ ಕುಟುಂಬ ಸದಸ್ಯರು, ಪ್ರೀತಿಸಿದ ಯುವಕನ ಮನೆಯ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ..

Written by - Krishna N K | Last Updated : Nov 8, 2025, 08:23 PM IST
    • ಯುವಕ ಮದುವೆ ನಿರಾಕರಿಸಿದ್ದಕ್ಕೆ ಗರ್ಭಿಣಿ ಯುವತಿ ಸುಸೈಡ್
    • ಯುವಕನ, ಮನೆಯ ಮುಂದೆ ಯುವತಿಯ ಶವವಿಟ್ಟು ಕುಟುಂಬ ಸದಸ್ಯರ ಪ್ರತಿಭಟನೆ
    • ಯುವಕನ‌ ಕುಟುಂಬ ಸದಸ್ಯರು ಮನೆಗೆ ಬೀಗ ಹಾಕಿ ಪರಾರಿ
ನಾಲ್ಕು ವರ್ಷ ಪ್ರೀತಿ, ಮದುವೆ ಆಗ್ತೀನಿ ಅಂತ ಮೋಸ! ಹೊಟ್ಟೆಯಲ್ಲಿ ಮಗು ಇರುವಾಗಲೇ ಯುವತಿ ಸಾವಿಗೆ ಶರಣು

ಹಾವೇರಿ : ಯುವಕನ ಮನೆಯ ಮುಂದೆ ಶವವಿಟ್ಟು ಪ್ರತಿಭಟನೆ ಮಾಡುತ್ತಿರೋ ಕುಟುಂಬ ಸದಸ್ಯರು. ನ್ಯಾಯ ಬೇಕು ನ್ಯಾಯ ಅಂತಿರೋ ಜನರು. ಚಂದುಳ್ಳ ಚಲುವೆಯಂತಿರೋ ಯುವತಿ. ಹೌದು ಇದು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದಲ್ಲಿ ಕಂಡು ಬಂದ ದೃಶ್ಯ. 

Add Zee News as a Preferred Source

ಮದುವೆ, ಪ್ರೀತಿ ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವತಿ ಸಿಂದೂ ಪರಮಣ್ಣನವರ್ 25 ವರ್ಷ ವಯಸ್ಸು. ಮೂಲತಃ ಬ್ಯಾಡಗಿ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದ ನಿವಾಸಿ, ಅದರೆ ಅಜ್ಜ ಅಜ್ಜಿ ಮನೆಯಾದ ಹಲಗೇರಿ ಗ್ರಾಮದಲ್ಲಿ ಇದ್ದು ವಿದ್ಯಾಭ್ಯಾಸ ಮಾಡುತ್ತಿದ್ದಳು. ಅದರೆ ಸಿಂದೂ ಗೆಳೆತಿಯ ಮೂಲಕ ಶರತ್ ಪರಿಚಯಾಗಿತ್ತು. ಪರಿಚಯ ಪ್ರೀತಿಯಾಗಿ ಪರಸ್ಪರ ಇಬ್ಬರೂ 4 ವರ್ಷ ಪ್ರೀತಿಸಿದ್ದಾರೆ. ಅಲ್ಲದೆ ದೈಹಿಕ ಸಂಪರ್ಕ ಮಾಡಿದ್ದು ಗರ್ಭಿಣಿಯಾಗಿದ್ದಾಳೆ. ಮದುವೆಯಾಗು ಅಂದರೆ ಶರತ್ ನಿರಾಕರಿಸಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ...

ಇದನ್ನೂ ಓದಿ: ವಾಯುಪಡೆ ಬಲಪಡಿಸಲು ಮುಂದಾದ ಭಾರತ! "ಚಿಕನ್ ನೆಕ್ ಕಾರಿಡಾರ್" ಬಳಿ ಹೊಸ ಮಿಲಿಟರಿ ನೆಲೆಗೆ ಅಡಿಪಾಯ

ಇದರಿಂದ ಮನನೊಂದ ಯುವತಿ ಸಿಂದೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕುಟುಂಬ ಸದಸ್ಯರು ಆಕ್ರೋಶದಿಂದ ಮೃತದೇಹವನ್ನ ಕುದುರಿಹಾಳ ಗ್ರಾಮದ ಯುವಕ ಶರತ್ ಮನೆಯ ಮುಂದೆ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕ ಯುವತಿಯ ಜೀವನ ಮಾಡುತ್ತಿದ್ದರು. ಅದರೆ ಹಣದ ಆಮಿಷೆ ತೋರಿಸಿ, ರಾಜೀಪಂಚಾಯತಿ ‌ಮಾಡುಲು ಪೊಲೀಸರು ಮುಂದಾಗಿದ್ದಾರೆ. ಈಗ ಹೋದ ಜೀವ ವಾಪಸು ತರಲು ಆಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ. ಈಗ ಯುವಕನ ಮನೆಯ ಸದಸ್ಯರು ಮನೆಯ ಬಿಟ್ಟು ಪರಾರಿಯಾಗಿದ್ದಾರೆ.‌ ನಮಗೆ ನ್ಯಾಯ ಕೊಡಿಸಿ ಅಂತ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಒಟ್ನಲ್ಲಿ ಪ್ರೀತಿಸಿದ ಯುವಕ ಶರತ್ ಯುವತಿಗೆ ಬಾಳು ಕೊಡಲು ನಿರಾಕರಿಸುತ್ತಿದ್ದಂತೆ ಯುವತಿ ಮನನೊಂದ ನೇಣಿಗೆ ಶರಣಾಗಿದ್ದಾಳೆ. ಕುಟುಂಬ ಸದಸ್ಯರು ಯುವಕನ ಮನೆಯ ಮುಂದೆ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಮನವೊಲಿಸಲು ಕಾರ್ಯ ಮಾಡುತ್ತಿದ್ದಾರೆ‌. ಕುಟುಂಬ ಸದಸ್ಯರು ಸಾವಿಗೆ ನ್ಯಾಯ ಕೊಡಿಸಿ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ..

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News