ಮಹದಾಯಿ ಬಗ್ಗೆ ಗೋವಾ ಸಿಎಂ ಹೇಳಿಕೆ ವಿಚಾರ; ಪ್ರಮೋದ್ ಸಾವಂತ್‌ಗೆ ಟಾಂಕ್ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ಮಹದಾಯಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣಿ ಮಾಡ್ತಿದೆ ಅಂತ ಮತ್ತೆ ರಾಜ್ಯ ಸರ್ಕಾರ ಅಸಮಾಧಾನ ಹೊರಹಾಕಿದೆ. ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲಾ ಎಂದು ಗೋವಾದ ಅಸೆಂಬ್ಲಿಯಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವ್ ಅವರೇ ತಿಳಿಸಿರುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಹೇಳಿರೋದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ಪಿಂಚಣಿಯಲ್ಲಿ ಹೊಸ ವ್ಯವಸ್ಥೆ ಜಾರಿ!ಪಿಂಚಣಿದಾರರರು ಮಾತ್ರವಲ್ಲ ಕುಟುಂಬಕ್ಕೂ ಭರ್ಜರಿ ಲಾಭ
2018ರಲ್ಲಿ ಮಹದಾಯಿ ಜಲವಿವಾದ ನ್ಯಾಯಮಂಡಳಿ 13.42 ಟಿಎಂಸಿ ನೀರನ್ನು ನಮ್ಮ ರಾಜ್ಯಕ್ಕೆ ನಿಗದಿಪಡಿಸಿ ತೀರ್ಪು ನೀಡಿದ್ದರೂ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ ಯೋಜನೆಯ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ, ಬಾಗಲಕೋಟೆ ಪ್ರದೇಶದ ಜನತೆಯ ಕುಡಿಯುವ ನೀರಿಗಾಗಿ 40 ಟಿಎಂಸಿ ನೀರನ್ನು ಬಳಸಿಕೊಳ್ಳುವ ಕಳಸಾ-ಬಂಡೂರಿ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಸಿದ್ದಗೊಂಡಿದ್ದು, ಗೋವಾದ ಬಿಜೆಪಿ ಸರ್ಕಾರದ ಜೊತೆ ಶಾಮೀಲಾಗಿ ಕೇಂದ್ರ ಸರ್ಕಾರ ನಿರಂತರವಾಗಿ ಅಡ್ಡಗಾಲು ಹಾಕುತ್ತಿದೆ ಎಂದು ಸಿಎಂ ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಗೋವಾ ಸಿಎಂ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ. "ಗೋವಾ ಸಿಎಂ ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ. ಫೆಡರಲ್ ಸ್ಟ್ರಕ್ಚರ್ ಬಗ್ಗೆ ಅವರಿಗೆ ಅರಿವಿಲ್ಲ, ಮಹದಾಯಿ ಯೋಜನೆ ಬಗ್ಗೆ ಈಗಾಗಲೇ ಟೆಂಡರ್ ಕರೆದಿದ್ದೇವೆ. ಕೆಲಸ ನಡೆಯುತ್ತಿದೆ. ಪರಿಸರ ಇಲಾಖೆ ನೋಟೀಸ್ ಇದೆ. ನಮ್ಮ ಕೆಲಸ ನಾವು ಶುರು ಮಾಡಿದ್ದೇವೆ. ಇಷ್ಟೆಲ್ಲಾ ಹೇಳಿಕೆ ನೀಡಿದ್ರು ಬಿಜೆಪಿ ನಾಯಕರು ಬಾಯಿ ಮುಚ್ಚಿ ಕೂತಿದ್ದಾರೆ. ಇದರ ಬಗ್ಗೆ ಬಹಿರಂಗವಾಗಿ ಮಾತನಾಡಬೇಕು. ಕರ್ನಾಟಕ ಮಾರಿಕೊಳ್ಳಲು ಸುಮ್ಮನೆ ಕೂತಿದ್ದು ಸರಿಯಲ್ಲ. ಎಲ್ಲ ಸಂಸದರನ್ನು ಕರೆದುಕೊಂಡ ದೆಹಲಿಗೆ ಹೋಗುತ್ತೇನೆ. ಅವರು ಏನೇ ಮಾಡಿದ್ರು ನಮ್ಮ ಕಾಮಗಾರಿ ನಡೆಯುತ್ತದೆ" ಅಂತ ತಿರುಗೇಟು ನೀಡಿದರು.
ಇನ್ನೂ ಸರ್ವಪಕ್ಷದ ಸಭೆ ಕರೆಯೋದಕ್ಕೆ ನವಲಗುಂದ ಶಾಸಕ ಕೋನರೆಡ್ಡಿ ಸರ್ವ ಪಕ್ಷದ ಸಭೆ ಕರೆಯಬೇಕು ಅಂತ ಸಿಎಂಗೆ ಒತ್ತಾಯ ಮಾಡಿದ್ದಾರೆ. ಇತ್ತ ನಾಡು ನುಡಿ ಅಂತ ಒಂದಾಗಬೇಕಿದ್ದ ಬಿಜೆಪಿ ಈಗ ಸರ್ಕಾರದ ಮೇಲೆಯೇ ಆರೋಪ ಮಾಡ್ತಾ ಇದೆ. ಇವರಿಗೆ ರಾಜಕಾರಣ ಬೇಕು ಅಂತ ಆರೋಪ ಮಾಡ್ತಾ ಇದ್ದಾರೆ. ಗೋವಾ ವಿಧಾನಸಭೆಯಲ್ಲಿ ಏನು ಬೇಕಾದ್ರೂ ಮಾತಾಡಲಿ ಇವರ್ಯಾಕೆ ಮಾತಾಡ್ತಾರೆ. ಕೇಂದ್ರದ ಮುಂದೆ ಹೋಗಿ ದಾಖಲೆ ಇಟ್ಟು ಮಾತಾಡಲಿ ಅದನ್ನ ಬಿಟ್ಟು ಎಂಪಿಗಳನ್ನ ಕರೆದುಕೊಂಡೋಗೋದ್ಯಾಕೆ" ಅಂತ ಶಾಸಕ ಬೆಲ್ಲದ್ ಪ್ರಶ್ನೆ ಮಾಡಿದ್ದಾರೆ.
ಒಟ್ಟಾರೆ ಕೇಂದ್ರ ಸರ್ಕಾರ ಮಹದಾಯಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮೋದನೆ ನೀಡುವುದಿಲ್ಲ ಎಂಬ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಹೇಳಿಕೆಗೆ ಈಗ ಕರ್ನಾಟಕ ಕಾಂಗ್ರೆಸ್ ನಾಯಕರು ಕೆರಳಿ ಕೆಂಡವಾಗಿದ್ದಾರೆ.









