Govt School Headmaster: ಸರಕಾರಿ ಶಾಲೆಯ ಮುಖ್ಯ ಶಿಕ್ಷಕನೊರ್ವ ಮದ್ಯಪಾನ ಮಾಡಿ, ಶಾಲೆಯ ಅಡುಗೆ ಕೋಣೆ ಮುಂದೆಯೇ ನಿದ್ದೆಗೆ ಜಾರಿದ ಘಟನೆ ಮಸ್ಕಿ ತಾಲ್ಲೂಕಿನ ಗೋನಾಳ ಗ್ರಾಮದ ಅಂಬಾದೇವಿ ನಗರದಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನಲ್ಲಿ ಘಟನೆ ಜರುಗಿದ್ದು, ಶಿಕ್ಷಕನನನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಿಂಗಪ್ಪ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ- ವಿದ್ಯಾರ್ಥಿನಿಯರಿಗೆ ಲೈಂ*ಗಿಕ ಕಿರುಕುಳ: ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು.. ಇದು Z ಕನ್ನಡ ನ್ಯೂಸ್ ಬಿಗ್ ಇಂಪ್ಯಾಕ್ಟ್
ಅಂದಹಾಗೆ, ಶಾಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಶಿಸ್ತಿನಿಂದ ಇರಬೇಕಾದ್ದನ್ನು ಮೇಲ್ವಿಚಾರಣೆ ಮಾಡಬೇಕಿರುವ ಮುಖ್ಯಶಿಕ್ಷಕ ಮದ್ಯಪಾನ ಸೇವಿಸಿ ಶಾಲೆಗೆ ಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ ಅನೇಕ ಬಾರಿ ಮದ್ಯಪಾನ ಮಾಡಿ ಶಾಲೆಗೆ ಬಂದಿದ್ದನು ಎಂದು ತಿಳಿದು ಬಂದಿದೆ.
ಶಾಲೆಯ ತರಗತಿ ವೇಳೆಯಲ್ಲಿ ಮುಖ್ಯ ಶಿಕ್ಷಕನ ಈ ನಡವಳಿಕೆಗೆ ಪೋಷಕರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ- ರಾಮನಗರ: ವಿಷ ಕುಡಿದು ಗ್ರಾ.ಪಂ ಸದಸ್ಯೆ ಪತಿ ಆತ್ಮ*ತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.!
ಕೂಡಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಕನನ್ನು ಅಮಾನತುಗೊಳಿಸಿ, ಕ್ರಮ ತೆಗೆದುಕೊಳ್ಳಬೇಕು ಎಂದು ಪೋಷಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.









