Gundlupet News: ಗುಂಡ್ಲುಪೇಟೆ ಪಟ್ಟಣ ಪುರಸಭೆಯಲ್ಲಿ ನಿರ್ವಹಣೆ ಕೊರತೆಯಿಂದ ಶವ ಸಾಗಿಸುವ ಎರಡು ವಾಹನಗಳು ದುರಸ್ತಿಯಾದ ಪರಿಣಾಮ ಕುಟುಂಬಸ್ಥರು ಮೃತ ದೇಹವನ್ನು ಖಾಸಗಿ ಆಟೋದಲ್ಲಿ ಸಾಗಿಸುವ ದುಸ್ಥಿತಿ ಬಂದೊದಗಿದೆ.
ಗುಂಡ್ಲುಪೇಟೆ ಪಟ್ಟಣದ 11ನೇ ವಾರ್ಡ್ ನಿವಾಸಿ ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಗರಾಜು ಮತ್ತು 10ನೇ ವಾರ್ಡ್ ನ ಮಹದೇವ ಎಂಬುವವರು ಶನಿವಾರ ತಡ ರಾತ್ರಿ ಮೃತ ಪಟ್ಟಿದ್ದು, ಸ್ಮಶಾನಕ್ಕೆ ಮೃತ ದೇಹ ಸಾಗಿಸಲು ಪುರಸಭೆ ವಾಹನದ ವ್ಯವಸ್ಥೆ ಇಲ್ಲದ ಕಾರಣ ಪರದಾಡುವಂತಾಗಿದೆ. ಇದರಿಂದ ಖಾಸಗಿಯಾಗಿ ಹಣ ನೀಡಿ ಆಟೋ ಬಾಡಿಗೆಗೆ ಪಡೆದು ಮೃತ ದೇಹ ಸಾಗಿಸಿದ್ದಾರೆ. ಇದು ಸ್ಥಳೀಯರು ಹಾಗೂ ಸಂಬಂಧಿಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ- ಮರಳಾಪುರದಲ್ಲಿ ಕರು ಎಳೆದೊಯ್ದ ಚಿರತೆ; ಚಿರತೆ ಮರಿಗಳ ಹೆಜ್ಜೆ ಗುರುತು ಕೂಡ ಪತ್ತೆ
ಸಾರ್ವಜನಿಕ ಸ್ಮಶಾನವು ಪಟ್ಟಣದಿಂದ ಎರಡು ಕಿ.ಮೀಗೂ ಅಧಿಕ ದೂರದಲ್ಲಿರುವ ಕಾರಣ ಮೃತ ದೇಹವನ್ನು ಹೊತ್ತು ಕೊಂಡು ಹೋಗಲು ಸಾಧ್ಯವಿಲ್ಲ. ಇದಕ್ಕಾಗಿ ಪುರಸಭೆಯಲ್ಲಿ ಶವ ಸಾಗಿಸುವ ಎರಡು ವಾಹನ ಮೀಸಲಿರಿಸಲಾಗಿದೆ. ಆದರೆ ವಾಹನ ದುರಸ್ತಿಗೊಂಡಿರುವ ಪರಿಣಾಮ ಸ್ಥಳೀಯರು ಹಾಗೂ ಸಂಬಂಧಿಕರು ಮೃತ ದೇಹವನ್ನು ಖಾಸಗೀ ವಾಹನಗಳಲ್ಲಿ ಸಾಗಿಸುವಂತಾಗಿದೆ.
ಇದನ್ನೂ ಓದಿ- ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ.. ಚಿಕಿತ್ಸೆ ಫಲಿಸದೆ ಗಂಗಮ್ಮ ಬಳ್ಳಾರಿ ಸಾವು
ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಶರವಣ ಪ್ರತಿಕ್ರಿಯೆ ನೀಡಿದ್ದು, ಪುರಸಭೆಯಲ್ಲಿ ಎರಡು ಶವ ಸಾಗಣೆ ವಾಹನಗಳು ದುರಸ್ತಿಗೊಂಡಿದ್ದು, ರಿಪೇರಿಗೆ ಕಳುಹಿಸಲಾಗಿದೆ. ವಾರದೊಳಗೆ ಸರಿಪಡಿಸಲು ಕ್ರಮ ವಹಿಸಲಾಗುವುದು. ಜೊತೆಗೆ ಕಾರಿನ ಬದಲು ಶವ ಸಾಗಣೆಗೆ ದೊಡ್ಡ ವಾಹನ ಖರೀದಿಸಲು ಚಿಂತನೆ ನಡೆಸಲಾಗಿದೆ ಎಂದರು.









