ಬಿಸಿಲ ಬೇಗೆಯಿಂದ ಮುಕ್ತಿ : ಇಂದಿನಿಂದ 3 ದಿನಗಳವರೆಗೆ ಈ ಜಿಲ್ಲೆಗಳಲ್ಲಿ ಭಾರೀ ಮಳೆ
Rain Alert Karnataka :ಇಂದಿನಿಂದ 3 ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಡೆಬಿಡದೆ ಮಳೆಯಾಗಲಿದೆ ಎನ್ನಲಾಗಿದೆ. ಅಂದರೆ ಇಂದಿನಿಂದ ಮಾರ್ಚ್ ೨೩ರವರೆಗೆ ರಾಜ್ಯದ ಈ ಭಾಗಗಳಲ್ಲಿ ವರುಣ ಅಬ್ಬರಿಸಲಿದ್ದಾನೆ.
ಬೆಂಗಳೂರು : Rain Alert Karnataka : ಬಿಸಿಲ ಬೇಗೆಯಿಂದ ವರುಣ ಮುಕ್ತಿ ನೀಡಲಿದ್ದಾನೆ. ಬಿಸಿಲಿನಿಂದ ತತ್ತರಿಸಿದ್ದ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಸೀ ಸುದ್ದಿ ನೀಡಿದೆ. ಇಂದಿನಿಂದ 3 ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಡೆಬಿಡದೆ ಮಳೆಯಾಗಲಿದೆ ಎನ್ನಲಾಗಿದೆ. ಅಂದರೆ ಇಂದಿನಿಂದ ಮಾರ್ಚ್ ೨೩ರವರೆಗೆ ರಾಜ್ಯದ ಈ ಭಾಗಗಳಲ್ಲಿ ವರುಣ ಅಬ್ಬರಿಸಲಿದ್ದಾನೆ.
ಮಳೆಗಾಗಿ ಕಾದು ಕುಳಿತಿದ್ದ ರಾಜ್ಯದ ಜನತೆಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಇಂದಿನಿಂದ ರಾಜ್ಯದ ಕೆಲವು ಭಾಗಗಳಲ್ಲಿ ಬಿಡದೇ ಮಳೆ ಸುರಿಯಲಿದೆ. ರಾಜ್ಯದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಆರಂಭವಾದ ಅಮೇಲ್ ಮಾರ್ಚ್ ೨೪ರವರೆಗೆ ಮುಂದುವರೆಯಲಿದೆ. ಈ ಮೂಲಕ ಬಿಸಿಲಿನಿಂದ ಬೇಸತ್ತಿದ್ದ ಜನತೆಗೆ ವರುಣ ತಂಪೆರೆಯಲಿದ್ದಾನೆ. ಚಿಕ್ಕಮಗಳೂರು, ಬೀದರ್, ಕೊಡಗಿನಲ್ಲಿ ಎರಡು ದಿಒನಗಳ ಹಿಂದೆಯೇ ವರುಣನ ಆಗಮನವಾಗಿದೆ. ಇಂದು ಕೂಡಾ ಆ ಮಳೆ ಮತ್ತೆ ಮುಂದುವರೆಯಿದೆ.
ಇದನ್ನೂ ಓದಿ : Loksabha Election 2024: ಕಾಂಗ್ರೆಸ್ ಪಕ್ಷದಿಂದ ಫೈನಲ್ ಆಗದ ಚಾಮರಾಜನಗರ ಎಂಪಿ ಟಿಕೆಟ್
ಯಾವ ಜಿಲ್ಲೆಗಳಲ್ಲಿ ಸುರಿಯಲಿದೆ ಮಳೆ :
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಹಾಸನ,ತುಮಕೂರು ಕೊಡಗು, ಮಂಡ್ಯ, ಮೈಸೂರು, ರಾಮನಗರ ಮತ್ತು ದಕ್ಷಿಣ ಕನ್ನಡದ ಕೆಲ ಭಾಗಗಲ್ಲಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎನ್ನಲಾಗಿದೆ.
ಮಳೆ ಇಲ್ಲದೆ ಬಿಸಿಲು ಜಾಸ್ತಿಯಾಗಿ ರಾಜ್ಯದ ಅನೇಕ ಕಡೆಗಳಲ್ಲಿ ನೀರಿಗೂ ತತ್ವಾರ ಬಂದೊದಗಿದೆ. ಈ ಹಿನ್ನೆಲೆಯಲ್ಲಿ 3 ದಿನಗಳ ಕಾಲ ಸುರಿಯುವ ಮಳೆ ಕುಡಿಯುವ ನೀರಿನ ಸಮಸ್ಯೆಯನ್ನು ಕೊಂಚ ಮಟ್ಟಿಗಾದರೂ ಕಡಿಮೆ ಮಾಡಬಹುದು. ಬಿಸಿಲ ಝಳಕ್ಕೆ ಬಿಸಿ ಏರಿರುವ ಭೂಮಿ ತಣ್ಣಗಾಗಬಹುದು.
ಇದನ್ನೂ ಓದಿ : Lok Sabha Election 2024: ದಾಖಲೆಯಿಲ್ಲದ 32 ಕೋಟಿ ರೂ. ಮೌಲ್ಯದ ವಸ್ತುಗಳು ಜಪ್ತಿ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ