)
Hindu Muslim Unity: ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ ಧರ್ಮಾಂತರಕ್ಕೂ ಮೀರಿ ಭಾವೈಕ್ಯವನ್ನೆ ಹೊತ್ತಿರುವ ಉತ್ಸವವು ಅದ್ದೂರಿಯಾಗಿ ನೆರವೇರಿದೆ. ಇಲ್ಲಿನ ಒಂದೇ ಗುಡಿಯಲ್ಲಿ ಹಿಂದೂಗಳ ಆಂಜನೇಯ ಸ್ವಾಮಿ ಹಾಗೂ ಮುಸ್ಲಿಮರ ಬಾಬಯ್ಯ ದೇವರಿಗೆ ಪೂಜೆ ಹಾಗೂ ನಮಾಜ್ ನಡೆಯುತ್ತಿದ್ದು, ಇದು ನಿಜಕ್ಕೂ ಶ್ರದ್ಧೆ ಮತ್ತು ಸಹಬಾಳ್ವೆಯ ಜೀವಂತ ಉದಾಹರಣೆ.
ಮೂಲಭೂತವಾಗಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾಕ್ಷಿಯಾಗಿರುವ ಮಲ್ಲಸಂದ್ರ ಗ್ರಾಮದಲ್ಲಿ, ಪ್ರತಿವರ್ಷದಂತೆ ಈ ವರ್ಷವೂ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಒಂದೇ ದೇಗುಲದ ಆವರಣದಲ್ಲಿ ಕುಲಾಯಿ ಸ್ವಾಮಿ ಹಾಗೂ ಬಾಬಯ್ಯ ದೇವರಿಗೆ ಮೊಹರಂ ಆಚರಿಸಿದರೆ, ಅತ್ತ ಆಂಜನೇಯ ಸ್ವಾಮಿಗೆ ಬ್ರಹ್ಮೋತ್ಸವ ನಡೆಯಿತು.
ಈ ಹಬ್ಬದ ಹಿನ್ನಲೆಯಲ್ಲಿ ಭಕ್ತರು ಬಣ್ಣ ಬಣ್ಣದ ವೇಷಭೂಷಣಗಳಲ್ಲಿ, ಹಬ್ಬದ ಛತ್ರಿ ಹಿಡಿದು, ಕೊಂಡದಲ್ಲಿ ಬೆಂಕಿ ಹಾಕಿದ ಸ್ಥಳದಲ್ಲಿ ತಮಟೆ ಧ್ವನಿಗೆ ಸ್ಟೆಪ್ಸ್ ಹಾಕಿ, ಛತ್ರಿ ಡ್ಯಾನ್ಸ್ ಮೂಲಕ ಜನರ ಗಮನ ಸೆಳೆದರು. ಈ ಮನೋರಂಜನೆಯ ದೃಶ್ಯಗಳು ಇಲ್ಲಿನ ಭಕ್ತರಲ್ಲಿ ಭಕ್ತಿಯ ಜೊತೆಗೆ ಉಲ್ಲಾಸವನ್ನೂಂಟು ಮಾಡಿತು.
ಇಡೀ ಗ್ರಾಮ ಹಬ್ಬದ ಸಂಭ್ರಮದಲ್ಲಿ ತೇಲುತ್ತಿದ್ದರೆ, ಎಲ್ಲ ಧರ್ಮದ ಜನರು ಶ್ರದ್ಧೆ, ಭಕ್ತಿ ಮತ್ತು ಹರ್ಷದೊಂದಿಗೆ ಭಾಗವಹಿಸಿ ಗ್ರಾಮೀಣ ಭಾವೈಕ್ಯತೆಗೆ ಪೂರಕವಾದ ಚಿತ್ರಣವನ್ನೊಂದು ಬಿಡಿಸಿದರು.
ಹೀಗೆ ಧರ್ಮಾಂತರಗಳ ಮಧ್ಯೆ ಭೇದವಿಲ್ಲದೆ, ಒಂದೇ ಗುಡಿಯಲ್ಲಿ ಸಂಯುಕ್ತ ಹಬ್ಬ ಆಚರಿಸುತ್ತಿರುವ ಮಲ್ಲಸಂದ್ರ ಗ್ರಾಮದ ಈ ಭಾವೈಕ್ಯ ಸಂಸ್ಕೃತಿ ಇಡೀ ಸಮಾಜಕ್ಕೆ ಮಾದರಿಯಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.