)
Model Police Station: 1985ರಲ್ಲಿ ಓಪನ್ ಆದ ಈ ಠಾಣೆ ಸುಣ್ಣ-ಬಣ್ಣ ಕಾಣ್ದೆ ಎಲ್ಲಾ ಪೊಲೀಸ್ ಠಾಣೆಯಂತೆ ಇದು ಒಂದು ಪೊಲೀಸ್ ಠಾಣೆಯಂತಿತ್ತು. ಜನ ಇದೇ ಬಾಳೆಹೊನ್ನೂರು ಸ್ಟೇಷನ್ ಅಂತಿದ್ರು. ಆದರೆ ಈಗ ಅದೇ ಜನ ಇದು ನಮ್ಮ ಪೊಲೀಸ್ ಠಾಣೆ ಅಂತಿದ್ದಾರೆ.
ಪಿ.ಎಸ್.ಐ. ರವೀಶ್ ಇಲ್ಲಿಗೆ ಬಂದ ಮೇಲೆ ಠಾಣೆಗೆ ಹೊಸ ರೂಪ ನೀಡಿದ್ದಾರೆ. ಕೆಲಸ ಮಾಡುವ ಜಾಗದ ವಾತಾವರಣ ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗಿರುತ್ತೆ ಎಂದು ಗ್ರಾಮ ಪಂಚಾಯಿತಿ ಹಾಗೂ ಸ್ಥಳಿಯ ದಾನಿಗಳ ಸಹಕಾರದಿಂದ ಇಡೀ ಠಾಣೆಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ.
ಇನ್ನು ಈ ಕೆಲಸಕ್ಕಾಗಿ ಯಾರ ಬಳಿಯೂ ಒಂದು ರೂಪಾಯಿಯನ್ನೂ ಕೇಳದೆ, ಯಾರ ಮುಂದೆಯೂ ಕೈ ಚಾಚದೆ ನೀವೇ ಬಂದು ನೋಡಿ. ಕೆಲಸ ಮಾಡಿಸಿಕೊಡಿ ಎಂದು ಅವರಿಂದಲೇ ಎಲ್ಲಾ ಕೆಲಸ ಮಾಡಿಸಿದ್ದಾರೆ. ಇಂದು ಠಾಣೆಯ ಒಳಗೆ ಹೋದರೆ ಇದು ಪೊಲೀಸ್ ಸ್ಟೇಷನ್ ಎಂಬ ಭಾವನೆಯೇ ಬರೋದಿಲ್ಲ. ಅಷ್ಟರ ಮಟ್ಟಿಗೆ ಬದಲಿಸಿದ್ದಾರೆ. ಇವರ ಕೆಲಸಕ್ಕೆ ಸ್ಥಳೀಯರು ಕೈಜೋಡಿಸಿ ಸಾಥ್ ನೀಡಿದ್ದಾರೆ.
ಪ್ರಸ್ತುತ, ಠಾಣೆ ಜೊತೆ ಬಾಳೆಹೊನ್ನೂರಿನಲ್ಲಾದ ಬದಲಾವಣೆ ಕಂಡು ಜನರೇ ಬಾಳೆಹೊನ್ನೂರು ಪೊಲೀಸರು ನಿಜವಾದ ಜನಸ್ನೇಹಿ ಪೊಲೀಸ್ ಅಂತಿದ್ದಾರೆ.
ಪೊಲೀಸ್ ಠಾಣೆಯ ಕಾಂಪೌಂಡ್ ಹೊರಭಾಗದಲ್ಲಿ ಪೋಕ್ಸೋ, ಟ್ರಾಫಿಕ್ ರೂಲ್ಸ್, ಅಪ್ರಾಪ್ತರಿಗೆ ವಾಹನ ಕೊಡಬೇಡಿ, ಜೂಜಾಟ, ಕಳ್ಳತನ, ಮಕ್ಕಳನ್ನ ಕೆಲಸಕ್ಕೆ ಬಳಸುವುದು, ಬಾಲಾಪಾರಾದ ಸೇರಿದಂತೆ ಬಹುತೇಕ ಚಿತ್ರಗಳ ಬಿಡಿಸುವ ಮೂಲಕ ಜಾಗೃತಿ ಮೂಡಿಸೋದ್ರ ಜೊತೆ, ಕಾಡುಪ್ರಾಣಿಗಳ ಬೇಟೆ, ಮರ ಕಡಿಯುವುದು, ಕಾಡುಪ್ರಾಣಿಗಳ ರಕ್ಷಣೆ ಮಾಡುವಂತಹಾ ಚಿತ್ರಗಳನ್ನ ಬಿಡಿಸಿ ಅಪರಾಧಿ ಮನಸ್ಸುಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಚಿತ್ರಗಳ ಮೂಲಕ ತಪ್ಪು ಮಾಡಿದವರಿಗೆ ಮನವರಿಕೆಯಾಗುವಂತೆ ಮಾಡಿದ್ದಾರೆ. ಜೊತೆಗೆ, ಠಾಣೆಯ ಆವರಣದಲ್ಲಿ ಪಾರ್ಕ್ ಕೂಡ ಮಾಡಿದ್ದಾರೆ. ಪೊಲೀಸರ ದೈಹಿಕ ಸದೃಢತೆಗೆ ಅನುಕೂಲವಾಗಲೆಂದು ಶೆಟಲ್ ಕೋರ್ಟ್ ಕೂಡ ಮಾಡಿದ್ದಾರೆ.