ನನ್ನ ಕುಟುಂಬಕ್ಕೂ ಹನಿಟ್ರ್ಯಾಪ್ ಆಗಿದೆ: ಸಚಿವ ಕೆ.ಎನ್. ರಾಜಣ್ಣ ಶಾಕಿಂಗ್ ಹೇಳಿಕೆ

ಸಿಡಿ ಹಾಗೂ ಪೆನ್ ಡ್ರೈವ್ ತಯಾರಿಸಿ 48 ಜನ ರಾಜಕೀಯ ನಾಯಕರನ್ನು ಉದ್ದೇಶಿಸಿರುವ ಮಾಹಿತಿ ಇದೆ. ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ, ರಾಷ್ಟ್ರ ಮಟ್ಟದ ವಿವಿಧ ಪಕ್ಷಗಳ ನಾಯಕರ ಹೆಸರು ಈ ಪೆನ್ ಡ್ರೈವ್‌ನಲ್ಲಿ ಸೇರಿದೆ. ನನ್ನ ಮೇಲಿನ ಆರೋಪಗಳಿಗೆ ನಾನು ಇಲ್ಲಿ ಉತ್ತರ ನೀಡುವುದಿಲ್ಲ. ಆದರೆ ಗೃಹ ಸಚಿವರಿಗೆ ಲಿಖಿತವಾಗಿ ದೂರು ನೀಡಲಿದ್ದೇನೆ.

Written by - Prashobh Devanahalli | Edited by - Manjunath N | Last Updated : Mar 20, 2025, 04:43 PM IST
  • ಸಿಡಿ ಹಾಗೂ ಪೆನ್ ಡ್ರೈವ್ ತಯಾರಿಸಿ 48 ಜನ ರಾಜಕೀಯ ನಾಯಕರನ್ನು ಉದ್ದೇಶಿಸಿರುವ ಮಾಹಿತಿ ಇದೆ.
  • ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ, ರಾಷ್ಟ್ರ ಮಟ್ಟದ ವಿವಿಧ ಪಕ್ಷಗಳ ನಾಯಕರ ಹೆಸರು ಈ ಪೆನ್ ಡ್ರೈವ್‌ನಲ್ಲಿ ಸೇರಿದೆ.
  • ನನ್ನ ಮೇಲಿನ ಆರೋಪಗಳಿಗೆ ನಾನು ಇಲ್ಲಿ ಉತ್ತರ ನೀಡುವುದಿಲ್ಲ.
ನನ್ನ ಕುಟುಂಬಕ್ಕೂ ಹನಿಟ್ರ್ಯಾಪ್ ಆಗಿದೆ: ಸಚಿವ ಕೆ.ಎನ್. ರಾಜಣ್ಣ ಶಾಕಿಂಗ್ ಹೇಳಿಕೆ

ಬೆಂಗಳೂರು: ರಾಜ್ಯದ 48 ಜನ ರಾಜಕೀಯ ನಾಯಕರ ಸಿಡಿ ತಯಾರಾಗಿರುವ ಕುರಿತು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಸಂಚಲನ ಮೂಡಿಸುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಮೇಲೂ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ಅವರು ವಿಧಾನಸಭೆಯಲ್ಲಿ ಬಹಿರಂಗಪಡಿಸಿದರು.

ಗುರುವಾರ ನಡೆದ ಅಧಿವೇಶನದಲ್ಲಿ ರಾಜಣ್ಣ ಮಾತನಾಡಿ, ಈ ಕುರಿತು ತಾವು ದೂರು ನೀಡಲು ಸಿದ್ಧರಾಗಿದ್ದು, ಗೃಹ ಸಚಿವರು ಈ ಸಂಬಂಧ ಸಮಗ್ರ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.

ಬಜೆಟ್‌ ಚರ್ಚೆಯ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ವಿಚಾರವನ್ನು ಪ್ರಸ್ತಾಪಿಸಿ, ರಾಜ್ಯದ ರಾಜಕಾರಣದಲ್ಲಿ ಹನಿಟ್ರ್ಯಾಪ್ ಎಂಬ ಅಸ್ವಸ್ಥ ಸಂಸ್ಕೃತಿ ವ್ಯಾಪಕವಾಗಿದೆ ಎಂದು ಆರೋಪಿಸಿದ್ದರು. ಜನಪ್ರತಿನಿಧಿಗಳನ್ನು ಶರಣಾಗತಿಗೆ ತರುವ ಉದ್ದೇಶದಿಂದ ಈ ರೀತಿಯ ಚಟುವಟಿಕೆಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದರು.

ಯತ್ನಾಳ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆ.ಎನ್. ರಾಜಣ್ಣ, "ಕರ್ನಾಟಕ ಈಗ ಸಿಡಿ ಹಾಗೂ ಪೆನ್ ಡ್ರೈವ್ ಕಾರ್ಖಾನೆಯಾಗಿಬಿಟ್ಟಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ತುಮಕೂರಿನ ಪ್ರಭಾವಿ ಸಚಿವರು ಹನಿಟ್ರ್ಯಾಪ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ವದಂತಿಯೂ ಹರಿದಾಡುತ್ತಿದೆ. ತುಮಕೂರಿನವರಲ್ಲಿ ನಾನು ಮತ್ತು ಡಾ. ಜಿ. ಪರಮೇಶ್ವರ್ ಮಾತ್ರ ಇದ್ದೇವೆ," ಎಂದು ಸ್ಪಷ್ಟನೆ ನೀಡಿದರು.

48 ಜನ ರಾಜಕೀಯ ಮುಖಂಡರ ಹನಿಟ್ರ್ಯಾಪ್ ಪೆನ್ ಡ್ರೈವ್!

ಸಿಡಿ ಹಾಗೂ ಪೆನ್ ಡ್ರೈವ್ ತಯಾರಿಸಿ 48 ಜನ ರಾಜಕೀಯ ನಾಯಕರನ್ನು ಉದ್ದೇಶಿಸಿರುವ ಮಾಹಿತಿ ಇದೆ. ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ, ರಾಷ್ಟ್ರ ಮಟ್ಟದ ವಿವಿಧ ಪಕ್ಷಗಳ ನಾಯಕರ ಹೆಸರು ಈ ಪೆನ್ ಡ್ರೈವ್‌ನಲ್ಲಿ ಸೇರಿದೆ. ನನ್ನ ಮೇಲಿನ ಆರೋಪಗಳಿಗೆ ನಾನು ಇಲ್ಲಿ ಉತ್ತರ ನೀಡುವುದಿಲ್ಲ. ಆದರೆ ಗೃಹ ಸಚಿವರಿಗೆ ಲಿಖಿತವಾಗಿ ದೂರು ನೀಡಲಿದ್ದೇನೆ. ಇದರ ಹಿಂದೆ ನಿರ್ಮಾಪಕರು ಯಾರು? ನಿರ್ದೇಶಕರು ಯಾರು? ಎನ್ನುವುದರ ಬಗ್ಗೆ ತನಿಖೆಯಾಗಲಿ, ಆ ಮೂಲಕ ಸತ್ಯಾಸತ್ಯತೆ ಜನರಿಗೆ ಗೊತ್ತಾಗಲಿ," ಎಂದು ರಾಜಣ್ಣ ಹೇಳಿದರು.

ಗೃಹ ಸಚಿವ ಪರಮೇಶ್ವರ್ ಸ್ಪಂದನೆ

ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, "ಸದನದ ಗೌರವವನ್ನು ಉಳಿಸಬೇಕಾದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸಚಿವ ರಾಜಣ್ಣ ಲಿಖಿತ ಮನವಿ ನೀಡಿದ ಬಳಿಕ ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗುವುದು. ಸತ್ಯಾಸತ್ಯತೆ ಬಹಿರಂಗವಾಗಬೇಕಿದೆ," ಎಂದು ಘೋಷಿಸಿದರು.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News