Road Accident: ಇಂದು ಬೆಳ್ಳಂಬೆಳಗ್ಗೆ ಲಾರಿ, ಬಸ್, ಬುಲೆರೊ TUV300 ವಾಹನಗಳ ನಡುವೆ ಸರಣಿ ಅಪಘಾತವಾಗಿದ್ದು ಈ ದುರ್ಘಟನೆಯಲ್ಲಿ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅದೃಷ್ಟವಶಾತ್ ಬಾಲಕನೊಬ್ಬ ಬಚಾವ್ ಆಗಿರುವ ಘಟನೆ ವಿಜಯಪುರ ಜಿಲ್ಲೆ ಮನಗೂಳಿ ಪಟ್ಟಣದ ಹೈವೇಯಲ್ಲಿ ನಡೆದಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಬುಲೆರೊ ವಾಹನದಲ್ಲಿದ್ದ ಆರು ಜನರಲ್ಲಿ 10ವರ್ಷದ ಬಾಲಕನೊಬ್ಬ ಅದೃಷ್ಟವಶಾತ್ ಬದುಕುಳಿದಿದ್ದು ಇನ್ನುಳಿದ ಐದು ಮಂದಿ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಖಾಸಗಿ ವಾಹನ (ವಿಆರ್‌ಎಲ್) ಡ್ರೈವರ್ ಕೂಡ ಸಾವನ್ನಪ್ಪಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ- ಬೆಂಗಳೂರು ಜನರು ಬ್ರ್ಯಾಂಡೆಡ್ ನರಕದಲ್ಲಿ ನರಳುತ್ತಿದ್ದಾರೆ!!
ಏನಿದು ಘಟನೆ?
ಸೊಲ್ಲಾಪುರ ಕಡೆಗೆ ಹೊರಟಿದ್ದ ಆರು ಜನರಿದ್ದ ಬೊಲೆರೋ ವಾಹನ, ಮುಂಬೈ ಟು ಬಳ್ಳಾರಿ ಕಡೆಗೆ ಹೊರಟಿದ್ದ ವಿಆರ್‌ಎಲ್ ಬಸ್ ಹಾಗೂ ಲಾರಿ ಪರಸ್ಪರ ಮುಖಾಮುಖಿಯಾದ ಪರಿಣಾಮ ವಿಜಯಪುರ ಜಿಲ್ಲೆ ಮನಗೂಳಿ ಪಟ್ಟಣದ ಹೈವೇಯಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ, ಬೊಲೆರೋ ವಾಹನದಲ್ಲಿ ಸಂಚರಿಸುತ್ತಿದ್ದವರಲ್ಲಿ ಒಟ್ಟು ಐದು ಜನರು ಸಾವನ್ನಪ್ಪಿದ್ದು, 10 ವರ್ಷದ ಪ್ರವೀಣ ಎಂಬ ಬಾಲಕ ಬದುಕುಳಿದಿದ್ದಾನೆ.
ಈ ರಸ್ತೆ ಅಪಘಾತದಲ್ಲಿ ಮೃತಪಟ್ಟವರನ್ನು ಮಹಿಂದ್ರ TUV 300 ಕಾರ್ ಚಾಲಕ ವಿಕಾಸ ಮಂಕನಿ, ಹೊರ್ತಿ ಕೆನರಾ ಬ್ಯಾಂಕ್ ಮ್ಯಾನೇಜರ್ ಭಾಸ್ಕರ್, ಪವಿತ್ರಾ, ಅಭಿರಾಮ್, ಜೋಶನಾ, ವಿಆರ್‌ಎಲ್ ಡ್ರೈವರ್ ಬಸವರಾಜ್ ರಾಠೋಡ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ- Rain Alert: ರಾಜ್ಯದಲ್ಲಿ ಮುಂದಿನ 1 ವಾರ ಭಾರೀ ಮಳೆ; ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ!!
ಹೊರ್ತಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದ ಭಾಸ್ಕರ್ ಮೂಲತಃ ಆಂಧ್ರದವರಾಗಿದ್ದು ಕಳೆದ 5 ತಿಂಗಳ ಹಿಂದೆ ಹೊರ್ತಿಗೆ ಮ್ಯಾನೇಜರ್ ಆಗಿ ಬಂದಿದ್ದರು. ಇದೀಗ ಈ ಘಟನೆಯಲ್ಲಿ ಅವರ ಕುಟುಂಬ ಸಾವಿಗೀಡಾಗಿದೆ ಎನ್ನಲಾಗುತ್ತಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.