ತಡರಾತ್ರಿ 2 ಗಂಟೆ ಸಮಯ. ಆಕೆ ಆಗತಾನೇ ಕೆಲಸ ಮುಗಿಸಿ ಮನೆಗೆ ಬಂದಿದ್ದಳು. ಹೊರಗಡೆ ಮಳೆ ಹನಿ ಜಿನುಗುತ್ತಿತ್ತು. ಇನ್ನೇನು ನಿದ್ರೆಗೆ ಜಾರಬೇಕು ಎನ್ನುವಷ್ಟರಲ್ಲಿ ಮನೆ ಕುಸಿದಿದೆ. ಅವಶೇಷಗಳಡಿ ಸಿಲುಕಿದ ಯುವತಿ ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದಿದ್ದಾಳೆ.
ತಡರಾತ್ರಿ ಕುಸಿದ ಮನೆ :
ತಡರಾತ್ರಿ ಕುಸಿದ ಮನೆ ಅವಶೇಷಗಳಡಿ ಸಿಲುಕಿರುವ ಯುವತಿ. ಯುವತಿ ರಕ್ಷಣೆಗೆ ಕ್ರೇನ್, ಜೆಸಿಬಿ ಮೂಲಕ ಯತ್ನಿಸುತ್ತಿರುವ ಪೊಲೀಸ್ ,ಅಗ್ನಿಶಾಮಕ ಠಾಣೆ ಸಿಬ್ಬಂದಿ ಮತ್ತು ಸ್ಥಳೀಯರು. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಬಿಲಾಲ್ ಮಸೀದಿ ಬಳಿ. ಮದೀಹಾ ಅಫ್ರಾ ಅವಶೇಷಗಳಡಿ ಸಿಲುಕಿ ಪವಾಡ ಸದೃಶ ರೀತಿಯಲ್ಲಿ ಬಚಾವ್ ಆದ ಯುವತಿ. ಸೈಕಲಾಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಕೆಲಸ ಮುಗಿಸಿ ನಿನ್ನೆ ತಡರಾತ್ರಿ 2 ಗಂಟೆಗೆ ಮನೆಗೆ ಬಂದಿದ್ದಾಳೆ. ಇನ್ನೇನು ನಿದ್ರೆಗೆ ಜಾರಬೇಕು ಎನ್ನುವಷ್ಟರಲ್ಲಿ ಮನೆಯ ಒಂದು ಭಾಗ ದಿಢೀರ್ ಕುಸಿದಿದೆ. ಅವಶೇಷಗಳಡಿಯಲ್ಲಿ ಸಿಲುಕಿದ ಯುವತಿ ಹೊರಬರಲು ಪರದಾಟ ನಡೆಸಿದ್ದು, ರಕ್ಷಣೆಗಾಗಿ ಕಿರುಚಾಡಿದ್ದಾಳೆ. ಕೊನೆಗೆ ಶಬ್ದ ಕೇಳಿ ಪಕ್ಕದ ಮನೆಯವರು ನೆರವಿಗೆ ಧಾವಿಸಿದ್ದಾರೆ. ಕೂಡಲೇ ಪೊಲೀಸ್ ಮತ್ತು ಅಗ್ನಿಶಾಮಕ ಠಾಣೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ತೋಟದಲ್ಲೇ ಬೆಳೆದ ತರಕಾರಿ ಮುಳುವಯ್ತಾ? ಊಟ ಸೇವೀಸಿದ ನಂತರ ತಂದೆ, ಮಕ್ಕಳು ಸಾವು
ಇನ್ನು ಘಟನಾ ಸ್ಥಳಕ್ಕೆ ಆಗಮಿಸಿದ ಆನೇಕಲ್ ಪೊಲೀಸರು ಮತ್ತು ಅಗ್ನಿಶಾಮಕ ಠಾಣೆ ಸಿಬ್ಬಂದಿ ಕ್ರೇನ್ ಜೆಸಿಬಿ ಮೂಲಕ ಮೂರು ತಾಸು ಹರಸಾಹಸಪಟ್ಟು ಕಾರ್ಯಾಚರಣೆ ನಡೆಸಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಯುವತಿಗೆ ಕಾಲಿಗೆ ಪೆಟ್ಟಾಗಿದ್ದು, ಕೂಡಲೇ ಹತ್ತಿರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ನೀಡಿ ನಗರದ ನಿಮಾನ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ. ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪುರಸಭೆ ವತಿಯಿಂದ ಸೂಕ್ತ ಪರಿಹಾರ ನೀಡಲು ಕ್ರಮ ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಶಿಥಿಲಾವಸ್ಥೆಯಲ್ಲಿನ ಮನೆ ವಾಸಿಗಳು ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲಾಗುವುದು ಎಂದು ಪುರಸಭೆ ಅಧ್ಯಕ್ಷರು ತಿಳಿಸಿದ್ದಾರೆ.
ಅಂದಹಾಗೆ ಸುಮಾರು 40 ವರ್ಷಗಳ ಕಟ್ಟಡ ಆಗಿದ್ದು, ರಾತ್ರಿ ಸುರಿದ ಮಳೆಗೆ ಕಟ್ಟಡ ಕುಸಿದು ಬಿದ್ದಿದ್ದೆ.ಅಗ್ನಿಶಾಮಕ ಠಾಣೆ ಸಿಬ್ಬಂದಿ ಮತ್ತು ಪೊಲೀಸರ ಸಮಯ ಪ್ರಜ್ಞೆಯಿಂದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಇದನ್ನೂ ಓದಿ : ಅರಬ್ ದೇಶಗಳಿಗೆ ಟಕ್ಕರ್ ಕೊಟ್ಟ ಕನ್ನಡಿಗ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.









