)
ನಿಜಕ್ಕೂ ಶರಾವತಿ ಹಿನ್ನೀರಿನ ಮೇಲೆ ಎರಡುವರೆ ಕಿಲೋಮೀಟರ್ ಉದ್ದದ ಸೇತುವೆ ನಿರ್ಮಾಣವಾಗುತ್ತಾ.? ಮೂರು ಬಾರಿ ಶಂಕುಸ್ಥಾಪನೆಗೊಂಡ ತುಮರಿ ಸೇತುವೆ ಕನಸು ನನಸಾಗುತ್ತಾ ?ಎಂದು ಭಾವಿಸಿದ ಜನರೇ ಹೆಚ್ಚು. ಆದರೆ ಅಚ್ಚರಿಯ ರೂಪದಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಂಡು ಈಗ ಲೋಕಾರ್ಪಣೆಗೊಂಡಿದೆ. ಶರಾವತಿ ಮುಳುಗಡೆ ಸಂತ್ರಸ್ಥರ ಬದುಕಿಗೆ ಸೇತುಬಂಧವಾದ ಸಿಗಂದೂರು ಚೌಡೇಶ್ವರಿ ಸೇತುವೆ ಬಗೆಗಿನ ಹಿನ್ನಲೆ-ಮುನ್ನಲೆಯ ಕೌತುಕದ ವಿಷಯ ಇಲ್ಲಿದೆ.
ಮಲೆನಾಡಿನ ಶರಾವತಿ ಸಂತ್ರಸ್ತರು ದಶಕಗಳಿಂದ ಕಾಯುತ್ತಿದ್ದ ಮಹತ್ವದ ಕನಸಾದ ಸಿಗಂದೂರು ಸೇತುವೆ ಲೋಕಾರ್ಪಣೆಗೊಂಡಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಹೊಳೆಬಾಗಿಲು ಬಳಿ ನಿರ್ಮಿಸಲಾಗಿರುವ ಈ ಸೇತುವೆಯನ್ನು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಅಧಿಕೃತವಾಗಿ ಉದ್ಘಾಟಿಸಿದರು. ಉದ್ಘಾಟನೆಯ ಅಂಗವಾಗಿ ಸೇತುವೆ ಸಮೀಪ ವಿಶೇಷ ಹೋಮ ಹವನಗಳನ್ನ ನಡೆಸಲಾಗಿತ್ತು. ವಿಶೇಷ ಆರತಿ ಬೆಳಗುವ ಮೂಲಕ ಸೇತುವೆ ಉದ್ಘಾಟನೆಯ ಪೂಜೆಯನ್ನು ಸಂಪನ್ನಗೊಳಿಸಲಾಯಿತು. 70 ದಶಕದ ಸಂತ್ರಸ್ಥರ ಹೋರಾಟ ಕೊನೆಗೆ ಸೇತುವೆ ಲೋಕಾರ್ಪಣೆಗೊಳ್ಳುವ ಮೂಲಕ ಸಂಪನ್ನಗೊಂಡಿದೆ.
ಇದನ್ನೂ ಓದಿ : ಅಂಬೇಡ್ಕರ್ ನಿಗಮದ ಅಧಿಕಾರಿಗಳ ಮಹಾ ಯಡವಟ್ಟು
ಸೇತುವೆಗೆ ಇದ್ದ ಅಡೆತಡೆಗಳು :
1945 ರಲ್ಲಿ ಶರಾವತಿ ನದಿಗೆ ಕಟ್ಟಿದ ಹಿರೆಭಾಸ್ಕರ ಅಣೆಕಟ್ಟು ಹಾಗೂ ಎರಡನೇ ಹಂತದಲ್ಲಿ 1961 ರಲ್ಲಿ ಲಿಂಗನಮಕ್ಕಿಗೆ ಕಟ್ಟಿದ ಅಣೆಕಟ್ಟಿನಿಂದಾಗಿ ತುಮರಿ ಬ್ಯಾಕೋಡು, ಭಾಗದ ಸುಮಾರು 20,000 ಮಂದಿ ಈಗ ದ್ವೀಪವಾಸಿಗಳಾಗಿದ್ದಾರೆ. ಎರಡು ಹೋಬಳಿ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಹೊಂದಿರುವ ತುಮರಿ ಭಾಗ ಶೋಚನೀಯ ಸ್ಥಿತಿಯಲ್ಲಿದೆ. ಶರಾವತಿ ಹಿನ್ನೀರನ್ನು ದಾಟಿಯೇ ಸಾಗರಕ್ಕೆ ಸಂಪರ್ಕ ಪಡೆಯುವ ಇಲ್ಲಿಯ ಜನರಿಗೆ ಸರ್ಕಾರ ಲಾಂಚ್ ವ್ಯವಸ್ಥೆ ಕಲ್ಪಿಸಲಾಗಿದೆ. ಬದಲಾದ ಕಾಲಮಾನದಲ್ಲಿ ಸಿಗಂದೂರಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿ ಸ್ಥಳೀಯರಿಗೆ ಲಾಂಚ್ ನಲ್ಲಿ ಅವಕಾಶ ಇಲ್ಲದಂತಾಗಿರುವುದು ವಾಸ್ತವ ಸತ್ಯ.
ಇದರಿಂದಾಗಿ ಸ್ಥಳೀಯರು ಹಾಗೂ ಪ್ರವಾಸಿಗರ ನಡುವೆ ಆಗ್ಗಾಗ್ಗೆ ಗಲಾಟೆಗಳು ನಡೆಯುತ್ತಿತ್ತು. ಈಗ ಸೇತುವೆ ನಿರ್ಮಾಣದಿಂದಾಗಿ ಇಂತಹ ಸಮಸ್ಯೆಗಳಿಗೆ ತೆರೆ ಬಿದ್ದಂತಾಗಿದೆ.
ಹೊಳೆಬಾಗಿಲು ಹಾಗು ಅಂಬಾರಗೊಡ್ಲು ನಡುವೆ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು 70ರ ದಶಕದಿಂದ ಸರ್ಕಾರಕ್ಕೆ ಬೇಡಿಕೆಯನ್ನಿಟ್ಟಿದ್ದಾರೆ. ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸೇತುವೆಗಾಗಿ ಒಂದು ಬಾರಿ ಸರ್ವೆಕಾರ್ಯ ನಡೆಯಿತಾದರೂ ಯೋಜನೆ ಫಲಪ್ರದವಾಗಲಿಲ್ಲ. ಇದರಿಂದ ಈ ಭಾಗದ ಸಂತ್ರಸ್ಥರು ರೋಸಿಹೋಗಿದ್ದರು.ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಂತ್ರಸ್ಥರ ಮನಗೆಲ್ಲಲು ಅಭ್ಯರ್ಥಿಗಳು ಸೇತುವೆ ಮಾಡೇ ಮಾಡುತ್ತೇವೆ ಅಂತಾ ಮತ ಪಡೆಯುತ್ತಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅಂಬಾರಗೊಡ್ಲು ಯೋಜನೆಯನ್ನು ಬಜೇಟ್ ನಲ್ಲಿ ಘೋಷಣೆ ಮಾಡಿದರು ಅದಕ್ಕಾಗಿ 160 ಕೋಟಿ ಹಣವನ್ನು ಮೀಸಲಿಟ್ಟರು. ಸಚಿವ ಸಂಪುಟ 40 ಕೋಟಿ ರೂಪಾಯಿ ಮಂಜುರಾತಿಗೆ ಅನುಮೋದನೆಯನ್ನು ನೀಡಿತ್ತು.ನಂತರ ಕೇಂದ್ರ ಸಾರಿಗೆ ಸಚಿವರಾಗಿದ್ದ ನಿತಿನ್ ಗಡ್ಕರ್ ಸೇತುವೆ ನಿರ್ಮಾಣಕ್ಕಾಗಿಯೇ ಕೊಲ್ಲೂರು ತುಮರಿವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಿ, ಶಂಕುಸ್ಥಾಪನೆ ನೆರವೇರಿಸಿದರು. ಮೂರು ಬಾರಿ ಒಂದು ಸೇತುವೆ ಶಂಕುಸ್ಥಾಪನೆ ಗೊಂಡಿದ್ದು ಇದೇ ಮೊದಲು. ತದನಂತರದಲ್ಲಿ 2018 ರ ವಿಧಾನಸಭೆ ಚುನಾವಣೆಯ ಚುನಾವಣೆ ಪ್ರಚಾರಕ್ಕೆ ಆಗಮಸಿದ್ದ ಪ್ರಧಾನಿ ನರೇಂದ್ರ ಮೋದಿ ಕೂಡ ತುಮರಿ ಸೇತುವೆಯ ಕೆಲಸ ಕಾರ್ಯಗಳು ಪ್ರಗತಿಯಲ್ಲಿದೆ ಎಂದು ಹೇಳಿಕೆ ನೀಡಿದ್ದರು.
ಕೊರೊನಾ ಲಾಕ್ ಡೌನ್ ನಲ್ಲಿ ಕಾಮಗಾರಿಗೆ ಹಿನ್ನಡೆ:
ಹಿನ್ನೀರಿನಲ್ಲಿ ನೀರು ಹೆಚ್ಚಾದ ಮತ್ತು ಕಡಿಮೆಯಾದ ಸಂದರ್ಭದಲ್ಲಿ ಸ್ಥಗಿತವಾಗಿದ್ದ ಕಾಮಗಾರಿ ಸಿಗಂದೂರು. ನಾಡಿನ ಪ್ರಸಿದ್ಧ ಶಕ್ತಿ ಸ್ಥಳಗಳಲ್ಲಿ ಪ್ರಮುಖವಾದ ಸ್ಥಳ. ಸಾಗರ ತಾಲೂಕಿನ ಸಿಗಂದೂರಿನಲ್ಲಿರುವ ಶ್ರೀ ಚೌಡೇಶ್ವರಿ ದೇವಿಯ ದರ್ಶನಕ್ಕೆ ರಾಜ್ಯ, ಹೊರ ರಾಜ್ಯದಿಂದ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಲಿಂಗನಮಕ್ಕಿ ಡ್ಯಾಂನ ಹಿನ್ನೀರಿನಲ್ಲಿರುವ ಸಿಗಂದೂರಿಗೆ ತೆರಳಲು ಇರುವ ಏಕೈಕ ಮಾರ್ಗ ಎಂದರೆ ಅದು ಲಾಂಚ್. ಒಳನಾಡು ಸಾರಿಗೆ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿರುವ ಲಾಂಚ್ನಲ್ಲಿ ಪ್ರತಿದಿನ ಜನರು ಹಾಗೂ ವಾಹನಗಳನ್ನು ಹಿನ್ನೀರಿನ ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸುತ್ತವೆ. ಆದರೆ ದುಬಾರಿಯಾದ ಈ ವ್ಯವಸ್ಥೆಗೆ ಬದಲಿಗೆ ಶಾಶ್ವತವಾದ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಿಂಗದೂರು ಮೂಲಕ ದಕ್ಷಿಣ ಕನ್ನಡವನ್ನು ಸಂಪರ್ಕಿಸಲು ಸುಲಭವಾಗುವ ನಿಟ್ಟಿನಲ್ಲಿ ಬೃಹತ್ ಗಾತ್ರದ ಕೇಬಲ್ ಆಧಾರಿತ ಬ್ರಿಡ್ಜ್ ನಿರ್ಮಿಸಲಾಗುತ್ತಿದೆ. ದೇಶದಲ್ಲೇ ಎರಡನೆಯದಾದ 2.16 ಕಿ.ಮೀ. ಉದ್ದ ಹಾಗೂ 16 ಮೀಟರ್ ಅಗಲದ ಈ ಸೇತುವೆಯನ್ನು 423.15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸೇತುವೆ ಕಾಮಗಾರಿ ಕಳೆದ 2020ರ ಡಿಸೆಂಬರ್ನಿಂದ ಆರಂಭಗೊಂಡಿತು.
ಇದನ್ನೂ ಓದಿ : ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಬೆಲೆ ಏರಿಕೆ ಶಾಕ್
2020 ರಲ್ಲಿ ಕೊರೊನಾ ಹಾಗೂ ಹೆಚ್ಚಿನ ಪ್ರಮಾಣದ ಹಿನ್ನೀರಿನ ಕಾರಣ ಆರಂಭದ ಎರಡು ವರ್ಷ ನಿಧಾನವಾಗಿ ಸಾಗಿದ ನಿರ್ಮಾಣ ಕೆಲಸ ನಂತರ ವೇಗ ಪಡೆದುಕೊಂಡಿತು. ಪ್ರಸ್ತುತ ಆಳವಾದ ಹಿನ್ನೀರಿನಲ್ಲಿ 17 ಪಿಲ್ಲರ್ ಗಳನ್ನು ನಿರ್ಮಿಸಲಾಗಿದ್ದು ಪಿಲ್ಲರ್ ಗಳ ನಡುವೆ ಪ್ರಿ ಕ್ಯಾಸ್ಟೆಡ್ ಕಾಂಕ್ರೀಟ್ ಬ್ಲಾಕ್ ಗಳನ್ನು ಜೋಡಿಸುವ ಕೆಲಸ ಸುಲಭದ ಮಾತಾಗಿರಲಿಲ್ಲ. ಲಿಂಗನಮಕ್ಕಿ ಡ್ಯಾಂನಲ್ಲಿ ತೀವ್ರ ನೀರಿನ ಕುಸಿತಗೊಂಡ ಸಂದರ್ಭದಲ್ಲೂ ಕೆಲದಿನಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು. 1819 ಅಡಿ ಸಾಮರ್ಥ್ಯದ ಡ್ಯಾಂನಲ್ಲಿ ಪ್ರಸ್ತುತ 1740 ಅಡಿ ನೀರು ತಳಸೇರಿ ಸುಮಾರು 80 ಅಡಿಯಷ್ಟು ನೀರು ಕಡಿಮೆಯಾಗಿತ್ತು. ಬ್ರಿಡ್ಜ್ ನಿರ್ಮಾಣದ ಕೆಲಸ ಹಿನ್ನೀರಿನಲ್ಲೇ ನಡೆಯಬೇಕಿದ್ದ ಕಾರಣ ಭಾರೀ ಗಾತ್ರದ ಲಾಂಚ್ ಗಳ ಓಡಾಟಕ್ಕೆ ಅಡಚಣೆಯುಂಟಾಗಿತ್ತು. ಗುತ್ತಿಗೆ ಕರಾರಿನ ಪ್ರಕಾರ 2024ರ ನವೆಂಬರ್ ಒಳಗೆ ಸೇತುವೆ ಕೆಲಸ ಪೂರ್ಣಗೊಳ್ಳಬೇಕು. ಪ್ರಸ್ತುತ ಪಿಲ್ಲರ್ ಗಳ ನಡುವೆ ಸುಮಾರು 80 ರಿಂದ 100 ಟನ್ ತೂಕದ ಸೆಗ್ಮೆಂಟ್ ಜೋಡಿಸುವ ಕೆಲಸವಾಗಿದೆ. ಆದರೆ ನೀರಿನ ಕೊರತೆ ಕಾರಣ ಕೆಲಸಕ್ಕೆ ಹಿನ್ನಡೆಯುಂಟಾಗಿತ್ತು. ನಂತರದಲ್ಲಿ ಎಲ್ಲಾ ಅಡೆತಡೆಗಳನ್ನು ಮೀರಿ ಸಾಗಿದ ಕಾಮಗಾರಿಯಿಂದ ಇದೀಗ ಸೇತುವೆ ಲೋಕಾರ್ಪಣೆಗೊಂಡಿದೆ.
ಪಿಕ್ ನಿಕ್ ಸ್ಪಾಟ್ ಆಗಿ ಬದಲಾದ ಸಿಗಂದೂರು ಚೌಡೇಶ್ವರಿ ಸೇತುವೆ :
ಸಿಗಂದೂರು ಸೇತುವೆ ಲೋಕಾರ್ಪಣೆಗೊಂಡ ಕೆಲವೇ ಕ್ಷಣಗಳಲ್ಲಿ ಜನರು ಸೇತುವೆಯತ್ತ ದೌಡಾಯಿಸಿ ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ವಿಡಿಯೋ ಕಾಲ್ ಮಾಡಿ ತಮ್ಮವರಿಗೆ ಸೇತುವೆ ತೋರಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಸೇತುವೆ ಇಕ್ಕಲೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿರುವುದರಿಂದ ಸಂಜೆ ಹೊತ್ತು ಸ್ಥಳದಲ್ಲಿ ಜಮಾಯಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಸಿಗಂದೂರು ಸೇತುವೆಯೇ ಈಗ ಪ್ರವಾಸಿತಾಣವಾಗಿ ಮಾರ್ಪಟ್ಟಿದೆ.
ಬಸವಳಿದ ಲಾಂಚ್ ಗಳು :
1956 ರಿಂದ ಇಲ್ಲಿವವರೆಗೆ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ತೂಗು ಸೇತುವೆಯಾಗಿದ್ದ ಲಾಂಚ್ ಗಳು ಸೋಮವಾರ ಸ್ಥಗಿತಗೊಂಡಿದ್ದವು. ಕೋಟ್ಯಾಂತರ ಜನರನ್ನು ಹೊತ್ತೊಯ್ದ ಲಾಂಚ್ ಗಳು ದಡದಲ್ಲಿ ಬಿಕೋ ಎನ್ನುತ್ತಿದ್ದವು.
ಬಿಕೋ ಎನ್ನುತ್ತಿದ್ದ ವ್ಯಾಪಾರ :
ಲಾಂಚ್ ಗಳ ದಡದಲ್ಲಿದ್ದ ವ್ಯಾಪಾರ ಮಳಿಗೆಗಳು ಸೋಮವಾರ ಬಿಕೋ ಎನ್ನುತ್ತಿದ್ದವು. ಹಲವು ವರ್ಷಗಳಿಂದ ಇದೇ ಲಾಂಚ್ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ವ್ಯಾಪಾರಸ್ಥರು ಈಗ ಸಂಕಷ್ಟ ಎದುರಿಸುವಂತಾಗಿದೆ. ಸೇತುವೆಯಾಗಿರುವುದರಿಂದ ವಾಹನ ಸವಾರರು ದಡಕ್ಕೆ ಇಳಿಯದೇ ನೇರವಾಗಿ ಸೇತುವೆಯ ಮೇಲೆ ಸಾಗುತ್ತಿರುವುದರಿಂದ ವ್ಯಾಪಾರ ಸಂಪೂರ್ಣ ಕುಂಟಿತವಾಗಿದೆ. ಏನೇ ಆಗಲಿ ಹಲವು ಅಡೆತಡೆಗಳ ನಡುವೆಯೂ ರಾಜಕೀಯ ಸಂಘರ್ಷದ ನಡುವೆಯೂ 70 ವರ್ಷದ ಶರಾವತಿ ಮುಳಗಡೆ ಸಂತ್ರಸ್ಥರ ಬದುಕಿಗೆ ಸೇತುವೆ ಹೊಸ ಭಾಷ್ಯ ಬರೆದಿದೆ. ಮುಳುಗಡೆ ಸಂತ್ರಸ್ಥರ ಮೊಗದಲ್ಲಿ ಮಂದಹಾಸ ಮೂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.