ಮೈಸೂರು ದಸರಾದಲ್ಲಿ ಕಳೆದುಕೊಂಡ ವಸ್ತುಗಳನ್ನು ಹೀಗೆ ಪಡೆಯಿರಿ...
ಮೈಸೂರು : ಮೈಸೂರು ದಸರಾ ನೋಡಲೇನೋ ಬಲು ಚಂದ. ಆದರೆ ದಸರಾ ನೋಡುವ ಸಂತೋಷದಲ್ಲಿ, ಆ ಜನಜಂಗುಳಿಯಲ್ಲಿ ಹಲವು ಬಾರಿ ನಮ್ಮ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವುದುಂಟು. ತೊಂದರಯಿಲ್ಲ ಇನ್ನು ನೀವು ನಿಮ್ಮ ವಸ್ತುಗಳ ಬಗ್ಗೆ ಚಿಂತೆ ಬಿಟ್ಟು ದಸರಾವನ್ನು ಆನಂದಿಸಬಹುದು. ಕಾರಣ ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲಾಡಳಿತ ಲಾಸ್ಟ್ ಅಂಡ್ ಫೌಂಡ್ ಎಂಬ ಹೊಸ ವ್ಯವಸ್ಥೆಯನ್ನು ವೆಬ್ಸೈಟ್ನಲ್ಲಿ ಅಳವಡಿಸಿದೆ.

ವೆಬ್ಸೈಟ್ ಹೀಗೆ ಕಾರ್ಯನಿರ್ವಹಿಸುತ್ತದೆ :
ಜನಸಾಮಾನ್ಯರು http://www.mysoredasara.gov.in ನಲ್ಲಿ ತಾವು ಕಳೆದುಕೊಂಡ ವಸ್ತುಗಳ ಬಗ್ಗೆ ಆನ್ ಲೈನ್ ಮೂಲಕ ದೂರು ದಾಖಲಿಸಬಹುದು. ಮೈಸೂರು ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ವಸ್ತು ಬಿದ್ದಿರುವುದನ್ನು ಕಂಡರೆ ಅಥವಾ ನಿಮ್ಮ ವಸ್ತುಗಳನ್ನು ಕಳೆದುಕೊಂಡರೆ ಅದರ ಬಗ್ಗೆ mysoorudasara@gmail.comಗೆ ಮಾಹಿತಿ ಕಳುಹಿಸಿ. ಇದು ತಕ್ಷಣವೇ http://www.mysoredasara.gov.in ವೆಬ್ಸೈಟ್ನಲ್ಲಿ ಪ್ರಕಟವಾಗುತ್ತದೆ.
ದಸರಾ ಹಬ್ಬಕ್ಕಾಗಿ ನಿಯೋಜಿಸಲಾದ ಕಾರ್ಯಕರ್ತರು ಇಮೇಲ್ ಕಳುಹಿಸಿದವರನ್ನು ಸಂಪರ್ಕಿಸುತ್ತಾರೆ. ಖಾಸಗಿ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜು ಸಿ ಎಂಬುವವರು ಈ ವೆಬ್ ಸೈಟ್ ನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಡಿ.ರಂದೀಪ್, ಇದೇ ಮೊದಲ ಬಾರಿಗೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಚಿನ್ನ, ಬೆಳ್ಳಿಯಂತಹ ಬೆಲೆಬಾಳುವ ವಸ್ತುಗಳನ್ನು ಪೊಲೀಸರಿಗೆ ಕೈಗೆ ಒಪ್ಪಿಸಲಾಗುವುದು, ಇದರ ಬಗ್ಗೆ ಸೂಕ್ತ ದಾಖಲೆ ಒದಗಿಸುವ ಮೂಲಕ ತಮ್ಮ ವಸ್ತುಗಳನ್ನು ಜನರು ಪಡೆಯಬಹುದು ಅವರು ಎಂದು ತಿಳಿಸಿದರು.