ಹುಬ್ಬಳ್ಳಿಯ 5 ವರ್ಷದ ಬಾಲಕಿಯ ಹ*ತ್ಯೆಗೈದ ಹಂತಕನ ಸಂಹಾರ ಮಾಡಿದ ಭದ್ರಕಾಳಿ ಇವರೇ! ಲೇಡಿ ಸಿಂಗಂ ದಿಟ್ಟತನಕ್ಕೆ ಜನರ ಜೈಕಾರ..

 Hubballi Encounter: ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಯತ್ನ ಮತ್ತು ಕೊಲೆ ಪ್ರಕರಣದ ಆರೋಪಿ ರಿತೇಶ್‌ ಕುಮಾರ್‌ ಎನ್‌ಕೌಂಟರ್‌ನಲ್ಲಿ ಪ್ರಮುಖ ಪಾತ್ರವಹಿಸಿದ ಮಹಿಳಾ ಪಿಎಸ್‌ಐ ಅನ್ನಪೂರ್ಣ ಅವರಿಗೆ ಜನರಿಂದ ಜೈಕಾರದ ಮಹಾಪೂರವೇ ಹರಿದು ಬರುತ್ತಿದೆ.. 

Written by - Savita M B | Last Updated : Apr 14, 2025, 10:13 AM IST
  • ಹುಬ್ಬಳ್ಳಿಯ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ಹಾಗೂ ಕೊಲೆ ಪ್ರಕರಣದ ಆರೋಪಿ
  • ರಿತೇಶ್‌ ಕುಮಾರ್‌ ಎನ್‌ಕೌಂಟರ್‌ ಇದೀಗ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದೆ
ಹುಬ್ಬಳ್ಳಿಯ 5 ವರ್ಷದ ಬಾಲಕಿಯ ಹ*ತ್ಯೆಗೈದ ಹಂತಕನ ಸಂಹಾರ ಮಾಡಿದ ಭದ್ರಕಾಳಿ ಇವರೇ! ಲೇಡಿ ಸಿಂಗಂ ದಿಟ್ಟತನಕ್ಕೆ ಜನರ ಜೈಕಾರ..

Hubballi: ಹುಬ್ಬಳ್ಳಿಯ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ಹಾಗೂ ಕೊಲೆ ಪ್ರಕರಣದ ಆರೋಪಿ ರಿತೇಶ್‌ ಕುಮಾರ್‌ ಎನ್‌ಕೌಂಟರ್‌ ಇದೀಗ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ವಿಚಾರಣೆ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆರೋಪಿ ಹುಬ್ಬಳ್ಳಿ ಪೊಲೀಸರ ಬಂದೂಕಿಗೆ ಬಲಿಯಾಗಿದ್ದಾನೆ.. ಬಿಹಾರ್‌ ಮೂಲದ ಆರೋಪಿಯ ಎನ್‌ಕೌಂಟರ್‌ನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಹುಬ್ಬಳ್ಳಿಯ ಮಹಿಳಾ ಪೊಲೀಸ್‌ ಅಧಿಕಾರಿ ಅನ್ನಪೂರ್ಣ ಅವರಿಗೆ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.. 

Add Zee News as a Preferred Source

ಇದನ್ನೂ ಓದಿ: ಮುಂದಿನ ಮೂರು ದಿನದಲ್ಲಿ ಪುಷ್ಯಾ ನಕ್ಷತ್ರದಲ್ಲಿ ಮಂಗಳನ ಸಂಚಾರ.. ಈ ರಾಶಿಯ ಜನರು ಇನ್ನು ಮುಂದೆ  ಕೈಯಲ್ಲಿ ಕಸ ಹಿಡಿದರೂ ಚಿನ್ನ! ಬದುಕಾಗಲಿದೆ ಬಂಗಾರ  

ಹೌದು ಹುಬ್ಬಳ್ಳಿ ಬಾಲಕಿ ಅತ್ಯಾಚಾರ ಯತ್ನ ಮತ್ತು ಕೊಲೆ ಪ್ರಕರಣದ ಆರೋಪಿ ರಿತೇಶ್‌ ಕುಮಾರ್‌ ಎನ್‌ಕೌಂಟರ್‌ನಲ್ಲಿ ಲೇಡಿ ಪಿಎಸ್‌ಐ ಅನ್ನಪೂರ್ಣ ನಿರ್ವಹಿಸಿದ ಪಾತ್ರಕ್ಕೆ ಜನರ ಮೆಚ್ಚುಗೆ ಗಳಿಸಿದೆ.. PSI ಅನ್ನಪೂರ್ಣ ಅವರ ಬಗ್ಗೆ ಇದೀಗ ಇಡೀ ದೇಶದಲ್ಲೆಲ್ಲಾ ಚರ್ಚೆಯಾಗುತ್ತಿದ್ದು, ಈ ದಿಟ್ಟತನದ ಅಧಿಕಾರಿಯನ್ನು ಜನ ತಮ್ಮ ಮನೆಯ ಮಗಳಂತೆ ಕಾಣುತ್ತಿದ್ದಾರೆ.. ಈ ಬಿಹಾರ್‌ ಮೂಲದ ಆರೋಪಿ ಎನ್‌ಕೌಂಟರ್‌ ಘಟನೆಯಲ್ಲಿ ಅನ್ನಪೂರ್ಣ ಅವರಿಗೂ ಗಾಯವಾಗಿದ್ದು, ಹುಬ್ಬಳ್ಳಿಯ ಕೀಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಬೇಗ ಚೇತರಿಸಿ ಕೊಳ್ಳಲಿ ಎಂದು ಜನ ಪ್ರಾರ್ಥಿಸುತ್ತಿದ್ದಾರೆ.. ಜೊತೆಗೆ ಅವರ ಧೈರ್ಯ ಹಾಗೂ ದಿಟ್ಟತನವನ್ನು ಕೊಂಡಾಡಿ ಜೈಕಾರ ಹಾಕುತ್ತಿದ್ದಾರೆ.. 

ಇದನ್ನೂ ಓದಿ: ಮುಂದಿನ ಮೂರು ದಿನದಲ್ಲಿ ಪುಷ್ಯಾ ನಕ್ಷತ್ರದಲ್ಲಿ ಮಂಗಳನ ಸಂಚಾರ.. ಈ ರಾಶಿಯ ಜನರು ಇನ್ನು ಮುಂದೆ  ಕೈಯಲ್ಲಿ ಕಸ ಹಿಡಿದರೂ ಚಿನ್ನ! ಬದುಕಾಗಲಿದೆ ಬಂಗಾರ  

ಹುಬ್ಬಳ್ಳಿ ಮಹಿಳಾ ಪೊಲೀಸ್‌ ಅಧಿಕಾರಿ ಅನ್ನಪೂರ್ಣ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗಳು ಶುರುವಾಗಿದ್ದು, ನೆಟ್ಟಿಗರು ಅವರನ್ನು ಭದ್ರಕಾಳ, ಲೇಡಿ ಸಿಂಗಂ ಎಂದು ಜೈಕಾರ ಹಾಕುತ್ತಿದ್ದಾರೆ.. ಜೊತೆಗೆ ಅನೇಕರು ಆಕೆ ಮಾಡಿದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ʼPSI ಅನ್ನಪೂರ್ಣ ಅವರಿಗೆ ತುಂಬು ಹೃದಯದ ಧನ್ಯವಾದʼ ಅರ್ಪಿಸಿದ್ದಾರೆ.. ಒಟ್ಟಿನಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿ ಆರೋಪಿಗೆ ತಕ್ಕ ಶಿಕ್ಷೆ ನೀಡಿದ್ದಾರೆ ಎಂದು ಜನರು ಅವರ ಕಾರ್ಯವನ್ನು ಕೊಂಡಾಡುತ್ತಿದ್ದಾರೆ. 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Savita M B

ಸವಿತಾ ಎಂ.ಬಿ ಅವರು ZEE ಕನ್ನಡ ನ್ಯೂಸ್‌ ಡಿಜಿಟಲ್‌ನಲ್ಲಿ ಸಬ್‌ ಎಡಿಟರ್‌ ಆಗಿ ಕೆಲಸ ಮಾಡುತ್ತಿದ್ದು, ಎಂಟರ್‌ಟೈನ್‌ಮೆಂಟ್, ಹೆಲ್ತ್‌, ಲೈಫ್‌ಸ್ಟೈಲ್‌, ವೈರಲ್‌, ಬ್ಯುಸಿನೆಸ್‌ ಸೇರಿದಂತೆ ವಿವಿಧ ವಿಭಾಗಗಳ ಸುದ್ದಿಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. 2023ರಿಂದ ಇವರು ವಾಹಿನಿಗಾಗಿ ಶ್ರಮಿಸುತ್ತಿದ್ದಾರೆ.

...Read More

Trending News