Machohalli murder case: ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ಮಚ್ಚಿನಿಂದ ಮನಬಂದಂತೆ ಕೊಚ್ಚಿ ಪತಿಯನ್ನು ಕೊಲೆ ಮಾಡಿದ ಘಟನೆ ಸ್ಥಳೀಯರಲ್ಲಿ ಭೀತಿ ಉಂಟುಮಾಡಿದೆ.

Machohalli murder case: ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ಮಚ್ಚಿನಿಂದ ಮನಬಂದಂತೆ ಕೊಚ್ಚಿ ಪತಿಯನ್ನು ಕೊಲೆ ಮಾಡಿದ ಘಟನೆ ಸ್ಥಳೀಯರಲ್ಲಿ ಭೀತಿ ಉಂಟುಮಾಡಿದೆ. ಮೃತನನ್ನು ವಿಜಯಕುಮಾರ್ (35) ಎಂದು ಗುರುತಿಸಲಾಗಿದೆ.
ಮೃತ ವಿಜಯಕುಮಾರ್ ಹಾಗೂ ಆರೋಪಿಗಳಾದ ಧನಂಜಯ @ ಜಯರಾಮ ಮತ್ತು ಅವರ ತಂಡ ಸ್ನೇಹಿತರಾಗಿದ್ದರು. ಸುಮಾರು 10 ವರ್ಷಗಳ ಹಿಂದೆ ಆಶಾ ಎಂಬ ಮಹಿಳೆಯೊಂದಿಗೆ ವಿಜಯಕುಮಾರ್ ಮದುವೆಯಾಗಿದ್ದರು. ಆದರೆ, ವಿಜಯಕುಮಾರ್ ಪತ್ನಿ ಆಶಾ ಜೊತೆ ಧನಂಜಯ ಅಕ್ರಮ ಸಂಬಂಧ ಹೊಂದಿದ್ದಾನೆಂಬ ವಿಷಯ ಇತ್ತೀಚೆಗೆ ಬೆಳಕಿಗೆ ಬಂದಿತ್ತು.
ಅಕ್ರಮ ಸಂಬಂಧದ ವಿಚಾರ ತಿಳಿದ ವಿಜಯಕುಮಾರ್ ಧನಂಜಯನೊಂದಿಗೆ ವಾಗ್ವಾದ ನಡೆಸಿದ್ದಾನೆಂದು ತಿಳಿದುಬಂದಿದೆ. ವಿಜಯಕುಮಾರ್ ಸಣ್ಣಪುಟ್ಟ ಪೈನಾಸ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆ, ಧನಂಜಯ ಆಟೋ ಚಾಲಕರಾಗಿದ್ದ. ಧನಂಜಯ, ಆಶಾಗೆ “ನನ್ನೊಂದಿಗೆ ಸಂಪರ್ಕ ಬಿಟ್ಟರೆ ಕುಟುಂಬವನ್ನೇ ಸರ್ವನಾಶ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ದಿನ ರಾತ್ರಿ 8 ಗಂಟೆ ಸುಮಾರಿಗೆ ಮನೆಯಿಂದ ಹೊರಬರುತ್ತಿದ್ದ ವಿಜಯಕುಮಾರ್ ಮೇಲೆ ಧನಂಜಯ ಮತ್ತು ತಂಡ ಹೊಂಚು ಹಾಕಿ ಮಚ್ಚಿನಿಂದ ಕ್ರೂರವಾಗಿ ದಾಳಿ ನಡೆಸಿ ಕೊಲೆ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಪತಿ ಕೊಲೆ ಸಂಬಂಧ ಪತ್ನಿ ಆಶಾವನ್ನೂ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೈದ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಜಾರಿಯಲ್ಲಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಅಕ್ರಮ ಸಂಬಂಧದಿಂದ ಉಂಟಾಗುವ ಅಪಾಯಗಳ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ.