ನನ್ನ ಹೋರಾಟ ನನ್ನ ಜನರಿಗಾಗಿ ಮಾತ್ರ: ಪ್ರಕಾಶ್ ರಾಜ್

 ನನ್ನ ಹೋರಾಟ ನನ್ನ ಜನರಿಗಾಗಿ ಮಾತ್ರ ಎಂದು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಹೇಳಿದ್ದಾರೆ.

Updated: Apr 16, 2019 , 12:06 PM IST
ನನ್ನ ಹೋರಾಟ ನನ್ನ ಜನರಿಗಾಗಿ ಮಾತ್ರ: ಪ್ರಕಾಶ್ ರಾಜ್

ಬೆಂಗಳೂರು: ನಾನು ಯಾರ ವಿರುದ್ಧವೂ ಹೋರಾಡುತ್ತಿಲ್ಲ. ನನ್ನ ಹೋರಾಟ ನನ್ನ ಜನರಿಗಾಗಿ ಮಾತ್ರ ಎಂದು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಹೇಳಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಇಂದು ತೆರೆ ಬೀಳುವ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿರುವ ಪ್ರಕಾಶ್ ರಾಜ್, ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ನಾಯಕನನ್ನು ಆಯ್ಕೆ ಮಾಡಿದರೆ, ಜನರು ಗೆದ್ದಂತೆ. ಒಂದು ವೇಳೆ ಸರಿಯಾದ ನಾಯಕನನ್ನು ಆಯ್ಕೆ ಮಾಡದೇ ಹೋದರೆ ಜನರೇ ಸೋತಂತೆ ಎಂದು ಎಎನ್ಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. 

ಚಿತ್ರರಂಗದಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಅಭಿಮಾನಿಗಳನ್ನು ಗಳಿಸಿರುವ ಪ್ರಕಾಶ್ ರಾಜ್ ಇದೇ ಮೊದಲ ಬಾರಿಗೆ ರಾಜಕೀಯದಲ್ಲಿ ತಮ್ಮ ಭವಿಷ್ಯ ಕಾಣಲು ಎದುರುನೋಡುತ್ತಿದ್ದಾರೆ. ಈಗಾಗಲೇ ಚುನಾವಣೆ ಬಳಿಕ ನಟನೆಗೆ ವಿದಾಯ ಹೇಳುವುದಾಗಿ ತಿಳಿಸಿರುವ ಪ್ರಕಾಶ್ ರಾಜ್, ಚುನಾವಣೆಯಲ್ಲಿ ಗೆದ್ದರೇ ಕ್ಷೇತ್ರದ ಜನರ ಸೇವೆ ಮಾಡುವುದಾಗಿಯೂ, ಸೋತರೆ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ.