ದೇಶದಲ್ಲೇ ಅತಿ ಎತ್ತರದ ಧ್ವಜಸ್ತಂಭ ಸಮರ್ಪಣೆ!

ಕುಂದಾನಗರಿಯ ಕಿಲ್ಲಾ ಕೆರೆ ದಂಡೆಯಲ್ಲಿ ದೇಶದಲ್ಲೇ ಅತೀ ಎತ್ತರದ ಧ್ವಜಸ್ತಂಭ ಸಮರ್ಪಣೆ ಮಾಡಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ದೇಶಕ್ಕೆ ಸಮರ್ಪಣೆ ಮಾಡಲಾಯಿತು.  

Last Updated : Mar 12, 2018, 03:30 PM IST
ದೇಶದಲ್ಲೇ ಅತಿ ಎತ್ತರದ ಧ್ವಜಸ್ತಂಭ ಸಮರ್ಪಣೆ! title=

ಬೆಳಗಾವಿ: ಕುಂದಾನಗರಿಯ ಕಿಲ್ಲಾ ಕೆರೆ ದಂಡೆಯಲ್ಲಿ ದೇಶದಲ್ಲೇ ಅತೀ ಎತ್ತರದ ಧ್ವಜಸ್ತಂಭ ಸಮರ್ಪಣೆ ಮಾಡಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ದೇಶಕ್ಕೆ ಸಮರ್ಪಣೆ ಮಾಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಲಿಫ್ಟಿಂಗ್‌ ಮಷೀನ್​ ಬಟನ್‌ ಒತ್ತುವ ಮೂಲಕ 110 ಮೀಟರ್​​ ಎತ್ತರದ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ದೇಶಕ್ಕೆ ಸಮರ್ಪಣೆ ಮಾಡಿದರು. 

ಶಾಸಕ ಫಿರೋಜ್ ಸೇಠ್, ಜಿಲ್ಲಾಧಿಕಾರಿ ಜಿಯಾ ಉಲ್ಲಾ, ಜಿಲ್ಲಾ ಪಂಚಾಯತ್‌ ಸಿಇಓ ರಾಮಚಂದ್ರನ್, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಬೂಡಾ ಆಯುಕ್ತ ಶಕೀಲ್ ಅಹ್ಮದ್ ಮತ್ತಿತರ ಅಧಿಕಾರಿಗಳು ಮತ್ತು ನಾಗರಿಕರು ಈ ಸಂದರ್ಭದಲ್ಲಿ ಹಾಜರಿದ್ದರು.

110ಮೀಟರ್ ಎತ್ತರದ ಧ್ವಜ ಸ್ಥಂಬದಲ್ಲಿ, 9,600 ಚದರ ಅಡಿ ವಿಸ್ತೀರ್ಣ ಹೊಂದಿರುವ, 500 ಕೆ.ಜಿ.ತೂಗುವ ಈ ರಾಷ್ಟ್ರಧ್ವಜವನ್ನು 1,62,50,000 ಲಕ್ಷದಲ್ಲಿ ನಿರ್ಮಾಣವಾಗಿದೆ.

Trending News